ಉದಯವಾಹಿನಿ,ಶಿಡ್ಲಘಟ್ಟ: ತಾಲ್ಲೂಕಿನ ಚೀಮಂಗಲ, ವೈ ಹುಣಸೇನಹಳ್ಳಿ, ಜಂಗಮಕೋಟೆ, ಗಂಜಿಗುಂಟೆ, ಪಲಿಚೆರ್ಲು, ದಿಬ್ಬೂರಹಳ್ಳಿ, ಮೇಲೂರು, ಸಾದಲಿ ಮತ್ತು ಶಿಡ್ಲಘಟ್ಟ ವಿದ್ಯುತ್‌ ಉಪಕೇಂದ್ರಗಳಲ್ಲಿ ಸೆ.10 ಭಾನುವಾರ ದಂದು ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಲು ಬೆವಿಕಂ ಇಲಾಖೆ ಯ ಪತ್ರಿಕಾ ಪ್ರಕಟಣೆಗೆ ತಿಳಿಸಿದೆ. ಇದೇ ತಿಂಗಳ 20 ರಂದು 220 ಕೆವಿ ಚಿಂತಾಮಣಿ ಸ್ವೀಕರಣಾ, ವಿತರಣಾ ಕೇಂದ್ರದಿಂದ ವಿದ್ಯುತ್‌ ಸರಬರಾಜಾಗುವ 66/11 ಕೆವಿ ವಿದ್ಯುತ್ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಸೆ.10 ರಂದು ಬೆಳಗ್ಗೆ 8.ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸಬೇಕೆಂದು ಶಿಡ್ಲಘಟ್ಟ ಗ್ರಾಮೀಣ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಭು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!