
ಉದಯವಾಹಿನಿ,ಶಿಡ್ಲಘಟ್ಟ: ನಗರದ ಪೊಲೀಸ್ ಠಾಣೆಯಲ್ಲಿನ ದೈನಂದಿನ ಕರ್ತವ್ಯ, ಜನಸಾಮಾನ್ಯರ ಹಿತರಕ್ಷಣೆ, ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ, ಹಕ್ಕುಗಳ ರಕ್ಷಣೆ, ಮಕ್ಕಳ ಹಕ್ಕುಗಳ ಬಗ್ಗೆ ಪೊಲೀಸರ ಪಾತ್ರವನ್ನು ಪಿಎಸ್ಐ ವೇಣುಗೋಪಾಲ್ ಎಂ ವಿವರಿಸಿದರು. ನಗರದ ಸರ್ಕಾರಿ ಪ್ರೌಢ ಶಾಲೆಯ 8 ನೇ ತರಗತಿ ಮಕ್ಕಳಿಗೆ ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿನ ತೆರೆದ ಮನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪೊಲೀಸ್ ಅವರನ್ನ ನೋಡಿದರೆ ದೂರ ಓಡುವ ಮಕ್ಕಳ ನಡುವೆ ತೆರೆದ ಮನೆಯಲ್ಲಿ ಪೊಲೀಸರು ಮಹತ್ತರ ಪಾತ್ರ ನಿರ್ವಹಿಸುತ್ತಾರೆ ಎಂಬುದನ್ನು ಮಕ್ಕಳಿಗೆ ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆ ರಕ್ಷಣೆಗಾಗಿ ಅಥವಾ ಗಲಾಟೆ ಸಮಯದಲ್ಲಿ ಬಳಸುವ ವಸ್ತುಗಳ ಬಗ್ಗೆ ಪಿಸಿ ಮಸೂದ್ ವಲೀಸಾಬ್ ಮಾಹಿತಿ ನೀಡಿದರು.ಮಕ್ಕಳು ಓದಿನ ಜೊತೆಗೆ ಸಂವಿಧಾನದಲ್ಲಿನ ಕಾನೂನಿನ ಅರಿವಿರಬೇಕು ನಿಮಗೆ ಅಥವಾ ನಿಮ್ಮ ಕುಟುಂಬದಲ್ಲಿ ಯಾವುದೆ ರೀತಿಯ ಕಾನೂನಿನ ಕಣ್ಣಿಗೆ ಸಿಕ್ಕಿಕೊಳ್ಳುವಂತಹ ಘಟನೆಗಳು ಬಂದಾಗ ಕಾನೂನಿನ ಅಡಿಯಲ್ಲಿ ಯಾವರೀತಿ ನಿಭಾಯಿಸಬೇಕು ಎಂಬ ಸಾಮರ್ಥ್ಯವನ್ನು ನಿಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂದರು. ಸಾರ್ವಜನಿಕರು ನ್ಯಾಯಕ್ಕಾಗಿ ಠಾಣೆಗೆ ಬಂದರೆ ಮೊದಲು ದೂರನ್ನು ತೆಗೆದುಕೊಳ್ಳುವುದು ಹೇಗೆ ಮತ್ತು ತನಿಖೆಗೆ ಹಾಜರಾಗಿ ಎಫ್‌ಐಆರ್ ದಾಖಲಿಸುವುದು ಹೇಗೆ ಮತ್ತು ಕೊನೆಯ ಹಂತದಲ್ಲಿ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ಸಂದರ್ಭದಲ್ಲಿ ಪಿಎಸ್ ಐ ಪದ್ಮಾವತಮ್ಮ. ಎಎಸ್ಐ ಸೀನಪ್ಪ. ಹೆಚ್ ಸಿ ಉಮಾಶಂಕರ್, ಪಿಸಿ ಶಿವರಾಜ್, ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಸತೀಶ್ ಹಾಗೂ ವಿದ್ಯಾರ್ಥಿಗಳು ಮತ್ತು ಠಾಣಾ ಸಿಬ್ಬಂದಿ ಹಾಜರಿದ್ದರು.
