ಉದಯವಾಹಿನಿ, ಯಲಹಂಕ: ಸರ್ಕಾರಿ ಜಮೀನು ಕಬಳಿಕೆ ವಿಚಾರವಾಗಿ ದೂರು ನೀಡಲು ಹೋಗಿದ್ದ ವಕೀಲರನ್ನೇ ಸೆಲ್ ಒಳಗೆ ಹಾಕಿ ದೌರ್ಜನ್ಯ ಎಸಗಿದ ಆರೋಪ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆ ಠಾಣಾ ಪೊಲೀಸರು ವಿರುದ್ಧ ಕೇಳಿಬಂದಿದೆ. ಯಲಹಂಕ ತಾಲೂಕಿನ ಶ್ಯಾನಬೋಗನಹಳ್ಳಿಯ ಸರ್ಕಾರಿ ಜಮೀನು ವಿಚಾರವಾಗಿ ಪಂಚಾಯತ್​ನಲ್ಲಿ ಜಗಳ ನಡೆದಿದೆ. ನಖಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿದ್ದಾಗಿ ಆರೋಪಿಸಿದಾಗ ಎರಡು ಗುಂಪಿನ ನಡುವೆ ಗಲಾಟೆ ನಡೆದಿದೆ. ಈ ವಿಚಾರವಾಗಿ ವಕೀಲ ಚಂದ್ರಶೇಖರ ಮತ್ತು ಸಹೋದರನಿಂದ ರಾಜನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು, ಎರಡು ಕಡೆಯವರ ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಎದುರು ಪಾರ್ಟಿ ಅವರ ಮುಂದೆ ವಕೀಲ ಚಂದ್ರಶೇಖರ ಅವರನ್ನ ಸೆಲ್ ಒಳಗಡೆ ಹಾಕಿ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಕಳೆದ ಗುರುವಾರ ನಡೆದ ಘಟ‌ನೆ ಇದಾಗಿದ್ದು,‌ ತಡವಾಗಿ ಬೆಳಕಿಗೆ ಬಂದಿದೆ.
ಅಲ್ಲದೆ, ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು‌ ನೀಡಲಾಗಿದೆ. ವಕೀಲರನ್ನು ರಕ್ಷಣೆ ನೀಡಿಬೇಕಿದ ಪೊಲೀಸ್ ಅಧಿಕಾರಿಗಳು ಕಪಾಳಕ್ಕೆ ಹೊಡೆದ್ದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಹಲ್ಲೆಗೊಳಗಾದ ವಕೀಲರು ಆರೋಪಿಸಿದ್ದಾರೆ.

ಠಾಣೆಯಲ್ಲಿ ಅನುಚಿತವಾಗಿ ವರ್ತಿಸಿ ಲಾಕಪ್ ಗೆ ತಳ್ಳಿರುವದು ನ್ಯಾಯ ಸಮ್ಮತವಲ್ಲ.ಅಧಿಕಾರ ದುರುಪಯೋಗ ಪಡಿಸಿಕೊಂಡಿರುತ್ತಾರೆ. ಇವರ ದುರ್ನಡೆತೆಯಿಂದ ತಕ್ಷಣ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಮಲ್ಲಿಕಾರ್ಜನ ಬಾಲದಂಡಿ ಜಿಲ್ಲಾ ಪೊಲೀಸ್ ಅಧೀಕ್ಷಕರು

ಸದ್ಯ ಸೆಲ್‌ ಒಳಗಡೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಪೊಲೀಸ್ ಠಾಣೆಯಲ್ಲಿ ನೊಂದವರಿಗೆ ನ್ಯಾಯ ಸಿಗುತ್ತಿಲ್ಲ ಅಂತ ಆಕ್ರೋಶ ಹೊರಹಾಕಲಾಗಿದೆ. ಘಟನೆ ಸಂಬಂಧ ಠಾಣೆಯ ಸಿಬ್ಬಂದಿ ಕಿರಣ್ ಮತ್ತು ಮೋಹನ್ ಎಂಬವರನ್ನು ಎಸ್​ಪಿ ಅಮಾನತ್ತು ಮಾಡಿದ್ದಾರೆ. ಸಂವಿಧಾನ ಕಾಪಾಡುವ ಕಾರ್ಯಾಂಗವೇ ನ್ಯಾಯಾಂಗವನ್ನು ಅವಮಾನಿಸಿರುವದು ವಿಪರ್ಯಾಸ.
ರಾಜಾನುಕಂಟೆ ಪೊಲೀಸ್ ಠಾಣಾ ಪಿಎಸ್‌ಐ, ಪಿಐ ಅವರನ್ನು ಅಮಾನತು ಮಾಡಬೇಕೆಂದು ವಕೀಲರ ಸಂಘದಿAದ ಪಟ್ಟು ಹಿಡಿದಿದ್ದಾರೆ.
ಚಂದ್ರಶೇಖರ್ ವಕೀಲರು 

Leave a Reply

Your email address will not be published. Required fields are marked *

error: Content is protected !!