ಉದಯವಾಹಿನಿ, ಚಾಮರಾಜನಗರ: ನಗರದ ಹಳೆ ಬಸ್ ನಿಲ್ದಾಣದ ಬಳಿ ಇರುವ ಮುದುಕುಮಾರಮ್ಮ ಸನ್ನಿದಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಗಣಪತಿ, ಚಂಡಿಕಾ, ಹೋಮ ನಡೆಯಿತು. ವೇದ ಪಾರಾಯಣದೊಂದಿಗೆ ಪ್ರಾರಾಂಭವಾದ ಪೂಜಾಕಾರ್ಯ ಕಳಸ ಸ್ಥಾಪನೆ, ನಾಂದಿ, ಹಾಗೂ ಮಾರಮ್ಮತಾತಿಗೆ ಪಂಚಾಮೃತ ಅಭಿμÉೀಕ ,ಕ್ಷೀರ ಅಭಿμÉೀಕ, ಮಾರಮ್ಮ ತಾಯಿಗೆ ವಿಶೇಷ ಪುಷ್ಪಗಳಿಂದ ಅಲಂಕಾರವನ್ನು ಪ್ರದಾನ ಅರ್ಚಕರಾದ ಪಾಲಕ್ಷ ಭಾರದ್ವಾಜ್‍ರವರ ಸಮ್ಮುಖದಲ್ಲಿ ನಡೆಯಿತು.
ಪೂಜಾಕಾರ್ಯದಲ್ಲಿ ವಿಪ್ರರಿಂದ ವೇದಗೋಷ ಮತ್ತುಅμÉ್ಟೂೀತ್ತರ ಮಹಾಮಂಗಳಾರತಿ ಭಕ್ತಿಯಿಂದ ಜರುಗಿತು. ಮಹಿಳೆಯರು ಹಾಗೂ ಮಕ್ಕಳಿಗೆ ಮಾರಮ್ಮತಾಯಿಯ ಪ್ರಸಾದವನ್ನು ನೀಡಲಾಯಿತು. ಸಾವಿರಾರು ಭಕ್ತಧಿಗಳು ದೇವರದರ್ಶನ ಪಡೆದರು.
ಪೂಜಾಕಾರ್ಯದಲ್ಲಿ ಅರ್ಚಕರಾದ ಕಾರ್ತಿಕ್ ಭಾರದ್ವಾಜ್, ಕಿರಣ್ ಭಾರದ್ವಾಜ್ ಹಾಗೂ ವಿಪ್ರರು ಸ್ಥಳೀಯರು ಇನ್ನು ಮುಂತಾದವರು ಉಪಸ್ಥಿತರಿದ್ದರು.
ಭಕ್ತಧಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಭಕ್ತರು ದೇವಸ್ಥಾನದ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!