ಉದಯವಾಹಿನಿ,ಮೈಸೂರು: ನಗರದ ರಾಜಮಾರ್ಗದಲ್ಲಿ ದಸರಾ ಗಜಪಡೆ ಶುಕ್ರವಾರದಿಂದ ತಾಲೀಮು ಆರಂಬಿಸಿ ಇಂದು ಕೂಡ ತಾಲೀಮು ಮುಂದುವರೆದಿದ್ದು ಈ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಕಳೆಗಟ್ಟುತ್ತಿದೆ. ಸಾಂಸ್ಕøತಿಕ ನಗರಿಯಲ್ಲಿ ದಸರಾ ವೈಭವ ಆರಂಭವಾದಂತಾಗಿದೆ. ರಸ್ತೆಗಳಲ್ಲಿ ಆನೆಗಳ ತಾಲೀಮನ್ನು ಜನರು ನಿಂತು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ತರಬೇತಿ ನೀಡಲಾಗುತ್ತದೆ. ಮೊನ್ನೆಯಷ್ಟೇ ಆನೆಗಳಿಗೆ ತೂಕ ಪರೀಕ್ಷೆ ನಡೆಸಲಾಗಿತ್ತು. ಅಕ್ಟೋಬರ್ 24ರ ಜಂಬೂಸವಾರಿ ಮೆರವಣಿಗಾಗಿ ಇಂದಿನಿಂದ ಅಕ್ಟೋಬರ್ 23ರವರೆಗೆ ಆನೆಗಳಿಗೆ ತಾಲೀಮು ನೀಡಲಾಗುತ್ತದೆ. ಅರಮನೆಯಿಂದ ಬನ್ನಿಮಂಟಪದವರೆಗೆ ರಾಜಮಾರ್ಗದಲ್ಲಿ ಆನೆಗಳು ಸಾಗುತ್ತವೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಎರಡು ಸಮಯ ಸುಮಾರು 5 ಕಿ.ಮೀ. ದೂರ ಆನೆಗಳು ಸಾಗಿ ವಾಪಸ್ ಆಗುತ್ತವೆ.
ಜಂಬೂಸವಾರಿಯ ದಿನ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಕ್ಯಾಪ್ಟನ್ ಅಭಿಮನ್ಯು ಹೊರಲಿದ್ದಾನೆ. ಮೊದಲ ಮೂರ್ನಾಲ್ಕು ದಿನಗಳು ಯಾವುದೇ ತೂಕವಿಲ್ಲದ ಕಾಲ್ನಡಿಗೆ ಮೂಲಕ ತಾಲೀಮು ನಡೆಯುತ್ತದೆ.
ನಂತರ ಅಭಿಮನ್ಯುವಿಗೆ ಹಂತಹಂತವಾಗಿ ಮರಳಿನ ಮೂಟೆ ಹೊರಿಸಿ ಅಭ್ಯಾಸ ಮಾಡಿಸಲಾಗುತ್ತದೆ. ಅಂತೆಯೇ ಗಜಪಡೆಗೆ ಪೆÇ?ಷಕಾಂಶ ಭರಿತ ಆಹಾರ ಪದಾರ್ಥ ನೀಡಲಾಗುತ್ತದೆ.
