ಉದಯವಾಹಿನಿ ತಾಳಿಕೋಟಿ :ದೇವರ ಹಿಪ್ಪರಗಿ ಮಾರ್ಗದ ಅಂಬಳನೂರ ಬಿ ಬಿ ಇಂಗಳಗಿ ಯವರಗಿನ ಸುಮಾರು 3 ಕಿ. ಮೀ. ರಸ್ತೆ ಸಂಪೂರ್ಣ ಹದಿಗೆಟ್ಟು ಹಾಳಾಗಿ ಹೋಗಿದ್ದು ಇಲ್ಲೇವರೆಗೆ ದುರಸ್ತಿಯಾಗದೇ ಇರುವುದರಿಂದ ಈ ಮಾರ್ಗದಿಂದ ಸಂಚರಿಸುವ ವಾಹನ ಸವಾರರು ನಿತ್ಯ ನರಕ ಅನುಭವಿಸುವಂತಾಗಿದೆ. ಪ್ರತಿದಿನ ಈ ಮುಖ್ಯ ಮಾರ್ಗದಿಂದ ನೂರಾರು ವಾಹನಗಳ ಸಂಚರಿಸುತ್ತವೆ ರಸ್ತೆ ಹಾಳಾಗಿ ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಬಿದ್ದಿರುವುದರಿಂದ ಸ್ವಲ್ಪ ಮಳೆಯ ಆದರೆ ಸಾಕು ಮಳೆ ನೀರು ರಸ್ತೆಯ ಮೇಲೆ ಸಂಗ್ರವಾಗುವುದರಿಂದ ರಸ್ತೆಯೇ ಕಾಣುವುದಿಲ್ಲ ಇದರಿಂದ ಎಷ್ಟೋ ಬಾರಿ ದ್ವಿಚಕ್ರ ವಾಹನ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆಂದು ಗ್ರಾಮಸ್ಥರು ತಿಳಿಸುತ್ತಾರೆ.ಈ. ರಸ್ತೆ ದುರಸ್ತಿ ಮಾಡಿಸುವಂತೆ ಮಾಜಿ ಶಾಸಕರ ಗಮನಕ್ಕೆ ತರಲಾಗಿತ್ತು ಅವರು ಆಸಕ್ತಿ ವಹಿಸಿದ್ದರು ಕೂಡ ಚುನಾವಣೆಗಳು ಘೋಷಣೆ ಆಗಿರುವುದರಿಂದ ಸಾಧ್ಯವಾಗಲಿಲ್ಲ ಆದರೆ ಈಗ ಹಾಲಿ ಶಾಸಕರು ಈ ಕಾಮಗಾರಿ ಕುರಿತು ಹೆಚ್ಚಿನ ಆಸಕ್ತಿವಹಿಸಿ ಆದಷ್ಟು ಬೇಗ ಮುಗಿಸಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು. ಗ್ರಾಮಸ್ಥರು ಹೇಳುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಈ ಭಾಗದಲ್ಲಿ ನಿರಂತರವಾಗಿ ಸುರಿದ ಜಿಟಿ ಮಳೆಯಿಂದಾಗಿ ಇಡೀ ರಸ್ತೆಯ ಮೇಲೆ ನೀರು ಸಂಗ್ರಹವಾಗಿದ್ದು ಸಂಚಾರ ಅಪಾಯಕಾರಿಯಾಗಿ ಪ್ರಣಮಿಸಿದೆ ಇದು ಅಪಘಾತಗಳಿಗೆ ದಾರಿ ಮಾಡಿಕೊಡುವ ಎಲ್ಲ ಸಾಧ್ಯತೆಗಳಿವೆ. ಕಳೆದ ಅವಧಿಯಲ್ಲಿ ಬಿಜೆಪಿ ಶಾಸಕರು ಕ್ಷೇತ್ರದ ಬಹುತೇಕ ಪ್ರಮುಖ ರಸ್ತೆಗಳನ್ನು ಮಾಡಿಸಿದ್ದಾರೆ ಈ ಮುಖ್ಯ ರಸ್ತೆಯನ್ನು ಕೂಡ ಮಾಡಿ ಮುಗಿಸಲಾಗಿದೆ ಆದರೆ ಮಧ್ಯದಲ್ಲಿ ಹಾಗೆ ಬಿಟ್ಟಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ ಈಗ ಬಂದಿರುವ ನೂತನ ಶಾಸಕರು ಇದರ ಕಡೆಗೆ ಆಸಕ್ತಿವಿಸುವ ಅಗತ್ಯವಿದೆ ಆದಷ್ಟು ಬೇಗ ಈ ಕೆಟ್ಟ ರಸ್ತೆಯ ದುರಸ್ತಿಯಾದರೆ ಇದು ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಇಲ್ಲಿಯ ಗ್ರಾಮಸ್ಥರು ತಿಳಿಸುತ್ತಾರೆ.
