
ಉದಯವಾಹಿನಿ ದೇವದುರ್ಗ : 5ವರ್ಷದೊಳಗಿನ ಮಕ್ಕಳಲ್ಲಿ ಕಂಡು ಬರುವ ಏಳು ವಿವಿಧ ಕಾಯಿಲೆ ನಿರ್ಮೂಲನೆಗೆ ಆರೋಗ್ಯ ಇಲಾಖೆ ಇಂಧ್ರ ಧನುಷ್ ಲಸಿಕಾ ಅಭಿಯಾನ ಆರಂಭಿಸಿದ್ದು ಸಿಬ್ಬಂದಿ ಅದನ್ನು ಸಮರ್ಪಕವಾಗಿ ಜಾರಿಗೊಳಿಸಿ ಯೋಜನೆ ಯಶ್ವಗೊಳಿಸಬೇಕು ಎಂದು ತಹಶಿಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ಮಿಷನ್ ಇಂಧ್ರಧನುಷ್ ಯೋಜನೆಯ ಟಾಸ್ಕ್‍ಫೋರ್ಸ್ ಸಮಿತಿ ಸಭೆಯಲ್ಲಿ ಗುರುವಾರ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು. 0ರಿಂದ 2ವರ್ಷ ಹಾಗೂ 2ವರ್ಷದಿಂದ 5ವರ್ಷದೊಳಗಿನ ಮಕ್ಕಳಿಗೆ ಎರಡು ವಿಧದಲ್ಲಿ ಲಸಿಕೆ ಹಾಕುವ ಯೋಜನೆ ಇದಾಗಿದೆ. ಅಲ್ಲದೆ ಗರ್ಭಿಣಿಯರಿಗೂ ಲಸಿಕೆ ಹಾಕಲಾಗುತ್ತಿದೆ.
ಸೆ.11ರಿಂದ 16ರವರೆಗೆ ಎರಡನೇ ಹಂತದಲ್ಲಿ ಮಿಷನ್ ಇಂಧ್ರಧನುಷ್ ಅಭಿಯಾನ ಆರಂಭಗೊಂಡಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಯೋಜನೆ ಯಶಸ್ವಿಗೊಳಿಸಬೇಕು. ಪ್ರತಿಯೊಂದು ಅಂಗನವಾಡಿ ಕೇಂದ್ರ, ತಾಂಡಾ, ದೊಡ್ಡಿಗಳಿಗೆ ತೆರಳಿ ಕ್ಯಾಂಪ್ ತೆಗೆದು ಲಸಿಕೆ ಹಾಕಬೇಕು. ಮಿಷನ್ ಇಂಧ್ರಧನುಷ್ ಐದು ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ಐದು ವಿಧದ ರೋಗಗಳಿಗೆ ಇದು ರಾಮಬಾಣವಾಗಿ ಕಎಲಸ ಮಾಡಲಿದೆ. ಮಹಿಳೆಯರು, ಮಕ್ಕಳು ಲಸಿಕೆಯ ಲಾಭ ಪಡೆಯಬೇಕು ಎಂದು ಹೇಳಿದರು.
ಅಭಿಯಾನ ಯಶಸ್ವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ತಾಪಂ, ಪುರಸಭೆ ಸೇರಿ ಎಲ್ಲ ಇಲಾಖೆ ಕೈಜೋಡಿಸಿ ಅಗತ್ಯ ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು. ಟಿಎಚ್‍ಒ ಡಾ.ಬನದೇಶ್ವರ, ವೈದ್ಯಾಧಿಕಾರಿ ಶಿವಾನಂದ, ಸಿಡಿಪಿಒ ವೆಂಕಟಪ್ಪ, ಡಾ.ಅಯ್ಯಣ್ಣ, ಡಾ.ಎಂ.ಡಿ.ಹಸನ್, ಡಾ.ಎಂ.ಎಸ್.ಹೊಸಮನಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ ಇತರರಿದ್ದರು.
