
ಉದಯವಾಹಿನಿ ಔರಾದ್ : ತಾಂಡಾ ಹುಟ್ಟಿನಿಂದ ರೊಡ ಕಾಣಿಲ್ಲ ನಮ್ಮ ತಕಲಿಪಿ ಭಾಳ ಆದ ಎಂದು ನಿತ್ಯ ಪ್ರಾಣ ಕೈಯಲ್ಲಿ ಹಿಡಿದು ಹಳ್ಳ ಮತ್ತು ಕೆಸರುಗದ್ದೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ತಾಂಡ ನಿವಾಸಿಗಳ ಕಷ್ಟ ಹೆಳತಿರದಂತಿದೆ. ಹೌದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಡನಬಾಗ್ ತಾಂಡಕ್ಕೆ ಹೋಗಲು ರಸ್ತೆ ಇಲ್ಲದೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ. ಥಾಂಡದಲ್ಲಿ 30 ಕ್ಕೂ ಹೆಚ್ಚು ಕುಟುಂಬಗಳು ಇದ್ದು ನಿತ್ಯ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಡಗಾಂವ ಮತ್ತು ಬೀದರಗೆ ಶಾಲಾ ಕಾಲೇಜಿಗೆ ಹೂಗುತ್ತಾರೆ. ವಡಗಾಂವ ಬೀದರ್ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ವಡನಬಾಗ್ ತಾಂಡಾದಿಂದ ಮುಖ್ಯ ರಸ್ತೆ ವರೆಗಿನ ಒಂದು ಕಿಲೋ ಮೀಟರ್ ರಸ್ತೆ ಕೆಸರುಮಯವಾಗಿದ್ದು ತಾಂಡಾ ಹುಟ್ಟಿನಿಂದ ರಸ್ತೆ ನಿರ್ಮಾಣವಾಗಿಲ್ಲ. ತಾಂಡ ಹತ್ತಿರದಿಂದ ಹಳ್ಳ ಹರಿಯುತ್ತದೆ ಅದರ ಮೇಲೆ ಕಟ್ಟಿದ ಸೇತುವೆ ಕೊಚ್ಚಿಕೊಂಡು ಹೋಗಿದೆ ಇದರಲ್ಲಿಯೇ ನಿತ್ಯ ಸಂಚಾರಿಸಬೇಕಾಗುತ್ತದೆ. ಥಾಂಡದಲ್ಲಿ ಪ್ರಾಥಮಿಕ ಶಾಲೆ ಇದ್ದು ಮಳೆ ಬಂದರೆ ಸಾಕು ಶಿಕ್ಷಕರಿಗೆ ಬರಲು ಆಗುವುದಿಲ್ಲ. ಹಳ್ಳ ಬಂದರೆ ಆ ಕಡೆ ಹೋದವರು ತಿರುಗಿ ಈ ಕಡೆ ಬರುವಂತಿಲ್ಲ ತಾಂಡಾ ಹುಟ್ಟಿನಿಂದ ರೊಡ ಕಾಣಿಲ್ಲ ನಮ್ಮ ತಕಲಿಪಿ ಭಾಳ ಆದ ಯಾರಿಗೂ ಹೆಳತಿರದಂತಾಗಿದೆ ಎನ್ನುತ್ತಾರೆ ಥಾಂಡ ನಿವಾಸಿ ಮೂತಿರಾಮ. ದೇಶ ಸ್ವಾತಂತ್ರ್ಯ ಕಂಡು 76 ವರ್ಷಗಳು ಕಳೆದರೂ ಇನ್ನೂ ಗ್ರಾಮಿಣ ಭಾಗದಲ್ಲಿ ಮೂಲ ಸೌಕರ್ಯ ಸಿಗದೆ ಇರುವುದು ಅತ್ಯಂತ ಸೂಚನೀಯ ಸಂಗತಿ.
ತುರ್ತು ಪರಿಸ್ಥಿತಿಗೆ ಮಂಚವೆ ಅಂಬುಲೆನ್ಸ್: ಮಳೆಗಾಲದಲ್ಲಿ ಅನಾರೋಗ್ಯ ಕೆಟ್ಟರೆ ತಾಂಡದ ಮಕ್ಕಳ, ವಯೋವೃದ್ಧರು ಮತ್ತು ಬಾಣಂತಿಯರು ಹಳ್ಳದಲ್ಲಿ ದಾಟಲು ಬರುವುದಿಲ್ಲ ಎರಡು ಮೂರು ಬಾಣಂತಿಯರಿಗೆ ಮಂಚದ ಮೇಲೆ ಎತ್ತುಕೂಂಡು ಹೋಗಿದ್ದೆವೆ, ಇನ್ನೂ ಜೋರಾಗಿ ಮಳೆಯಿಂದಾಗಿ ಹೋಗಲಾಗದೆ ಹಳ್ಳದ ಪಕ್ಕದಲ್ಲಿ ಬಾಣಂತಿಯಾಗಿದೆ.
ನಿತ್ಯ ಕೆಸರಿನಲ್ಲೆ ನಡೆದುಕೊಂಡು ಶಾಲೆಗೆ ಹೋಗಬೇಕು. ಮಳೆಬಂದರೆ ಸಾಕು ಶಾಲೆಗೆ ರಜೆ ಹಾಕಬೇಕಾಗುತ್ತದೆ ನಮಗೆ ಭಾಳ ಕಷ್ಟ ಆಗಲತುದರಿ.
-ನರೇಂದ್ರ ಥಾಂಡದ ವಿಧ್ಯಾರ್ಥಿ
ವಡನಬಾಗ್ ತಾಂಡಾಕ್ಕೆ ಹೋಗಲು ದಾರಿಯ ಸಮಸ್ಯೆ ಇದೆ. ಸುತ್ತಮುತ್ತಲಿನ ಹೂಲದ ಮಾಲಿಕರ ತಕರಾರು ಇದೆ ಇತ್ಯರ್ಥವಾದರೆ ರಸ್ತೆ ನಿರ್ಮಿಸಿ ಕೂಡಲಾಗುವುದು.
– ಪ್ರಭು ಚವ್ಹಾಣ, ಶಾಸಕರು ಔರಾದ್
