ಉದಯವಾಹಿನಿ ಕೆ.ಆರ್.ಪೇಟೆ: ಕಂದಾಯ ಇಲಾಖೆಯ ಎಲ್ಲಾ ಕೆಲಸಗಳು ನಿಗಧಿತ ಕಾಲಮಿತಿಯೊಳಗೆ ಆಗುವಂತೆ ನೋಡಿಕೊಳ್ಳಬೇಕಾದುದು ನಿಮ್ಮ ಜವಾಬ್ದಾರಿಯಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗದ0ತೆ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಹೆಚ್,ಟಿ. ಮಂಜು ತಿಳಿಸಿದರು.ಅವರು ತಾಲೂಕಿನ ಬೂಕನಕೆರೆ ಹೋಬಳಿಯಲ್ಲಿ ಕಂದಾಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪೌತಿಖಾತೆ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಂದಾಯ ಇಲಾಖೆಗೆ ಪ್ರತಿದಿನ ನೂರಾರು ರೈತರು ತಮ್ಮ ಹವಾಲುಗಳನ್ನು ಹಿಡಿದು ಆಗಮಿಸುತ್ತಾರೆ ಕಳೆದ ಹಲವಾರು ವರ್ಷಗಳಿಂದಲೂ ಈ ಪ್ರಕ್ರಿಯೆ ಹೀಗೆ ಮುಂದುವರಿದಿದೆ. ಇದಕ್ಕೆ ಇತಿಶ್ರೀ ಹಾಡಬೇಕಾದುದು ಕಂದಾಯ ಇಲಾಖೆಯ ನೌಕರರ ಕೆಲಸವಾಗಿದ್ದು ಇದರಲ್ಲಿ ರೈತರ ಯಾವುದೇ ಪಾತ್ರ ಇಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ತಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಹಾಗೂ ಪ್ರಾಮಾಣಿಕವಾಗಿ ಮತ್ತು ನಿಗದಿತ ಕಾರ್ಮಿತಿಯೊಳಗೆ ನಿರ್ವಹಣೆ ಮಾಡಿದಲ್ಲಿ ಸಾರ್ವಜನಿಕರ ಅಲೆದಾಟವನ್ನು ತಪ್ಪಿಸಬಹುದಾಗಿದೆ ಆದ್ದರಿಂದ ಪೌತಿಖಾತೆ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯಬೇಕಿದೆ. ಇದು ತಾಲ್ಲೂಕಿನ ಎಲ್ಲಾ ರೈತರುಗಳ ಸಮಸ್ಯೆಯಾಗಿದ್ದು ಹೋದಲ್ಲಿ, ಬಂದಲ್ಲಿ ಈ ದೂರುಗಳನ್ನು ರೈತರುಗಳು ನನಗೆ ಸಲ್ಲಿಸುತ್ತಿದ್ದಾರೆ. ರೈತರು ನಮ್ಮ ಅನ್ನದಾತರು ಅವರುಗಳನ್ನು ಅಲೆದಾಡಿಸಬೇಡಿ.ರೈತರುಳು ನಮಗೆ ಅನ್ನ ನೀಡುವ ಅನ್ನದಾತರು ಅವರುಗಳನ್ನು ಖಾಸ ಸುಮ್ಮನೆ ಅಲೆದಾಡಿಸುವುದು, ಹಣಕ್ಕೆ ಬೇಡಿಕೆ ಇಡುವುದು ನಿಮಗೆ ತರವಲ್ಲ. ಇದರಿಂದ ನಿಮಗೆ ಒಳ್ಳೆಯದಾಗುವುದಿಲ್ಲ ಯಾವುದೇ ಕೆಲಸಕ್ಕಾದರೂ ಸಂಬ0ಧಿಸಿದ್ದ ಚಕ್‌ಲಿಸ್ಟ್ಟ್ನೊಂದಿಗೆ ಅರ್ಜಿ ಸಲ್ಲಿಸಲು ರೈತರಿಗೆ ತಿಳಿಸಬೇಕು. ಚಕ್ಲಿಸ್ಟ್ ಪರಿಶೀಲಿಸಿದ ನಂತರ ಕ್ರಮಬದ್ಧವಾಗಿ ಕೆಲಸಗಳು ನಿಗದಿತ ಕಾಲಮಿತಿಯೊಳಗೆ ಆಗುವಂತೆ ನೋಡಿಕೊಳ್ಳಬೇಕಾದದ್ದು ಸಂಬ0ಧಿಸಿದ ನೌಕರನ ಕರ್ತವ್ಯವಾಗಿರುತ್ತದೆ ಇದನ್ನು ಮೇಲಧಿಕಾರಿಗಳು ಪರಿಶೀಲನೆ ಮಾಡುವುದು ಕೂಡ ಅಷ್ಟೇ ಅಗತ್ಯವಾಗಿರುತ್ತದೆ. ಆದ್ದರಿಂದ ತಾಲೂಕಿನ ಎಲ್ಲಾ ಹೋಬಳಿಗಳ ನಾಡಕಚೇರಿಗಳಲ್ಲಿ ಪೌತಿಖಾತೆ, ಖಾತೆ ಆಂದೋಲನ ಸೇರಿದಂತೆ ಸಣ್ಣಪುಟ್ಟ ಯಾವುದೇ ರೈತರ ಕೆಲಸಗಳಿದ್ದರೂ ಅವುಗಳನ್ನು ಶೀಘ್ರವಾಗಿ ಪರಿಹರಿಸಿಕೊಡಬೇಕು ಎಂದು ತಹಶೀಲ್ದಾರ್ ನಿಸರ್ಗಪ್ರಿಯರವರಿಗೆ ಶಾಸಕ ಹೆಚ್.ಟಿ.ಮಂಜು ಸೂಚಿಸಿದರು. ನಿಮ್ಮ ವ್ಯಾಪ್ತಿಯ ಹಳ್ಳಿಗಳ ಕಡೆ ಹೋಗಿ ವಾಸ್ತವತೆ ಅರಿತು ಕೆಲಸ ಮಾಡಿ ಎಂದರು.ಇದೇ ಸಂದರ್ಭದಲ್ಲಿ ತಹಶೀಲ್ದಾರ್ ನಿಸರ್ಗಪ್ರಿಯ, ಎಡಿಎಲ್‌ಆರ್ ಪರಶಿವನಾಯಕ್, ಬೂಕನಕರೆ ಹೋಬಳಿ ಜೆಡಿಎಸ್ ಅಧ್ಯಕ್ಷ ನಂದೀಶ್ ಜೆಡಿಎಸ್ ಮುಖಂಡ ಹುಲ್ಲೇಗೌಡ, ಜವರಾಯಿಗೌಡ, ಶಾಸಕರ ಆಪ್ತಸಹಾಯಕ ಪ್ರತಾಪ್, ರಾಜಸ್ವ ನಿರೀಕ್ಷಕಿ ಚಂದ್ರಕಲಾ ಸೇರಿದಂತೆ ಹಲವರು ಹಾಜರಿದ್ದರು.ಇದೇ ವೇಳೆ ಪೌತಿಖಾತೆಯ ಫಲಾನುಭವಿಗಳಿಗೆ ಆದೇಶಪತ್ರಗಳನ್ನು ಶಾಸಕ ಮಂಜು ವಿತರಿಸಿದರು.

Leave a Reply

Your email address will not be published. Required fields are marked *

error: Content is protected !!