ಉದಯವಾಹಿನಿ ಸಿರುಗುಪ್ಪ : ಸಮಾಜದಲ್ಲಿ ಆರೋಗ್ಯ,ಪೋಲೀಸ್ ಇಲಾಖೆ,ಶಿಕ್ಷಣ ಕ್ಷೇತ್ರ ಬಹು ಮುಖ್ಯ ಪಾತ್ರವಹಿಸುವವ ಕ್ಷೇತ್ರಗಳಾಗಿದ್ದು ಇವುಗಳಲ್ಲಿ ಶಿಕ್ಷಣ ಕ್ಷೇತ್ರದ ಶಿಕ್ಷಕರು ತಮ್ಮದೇ ಆದ ಕೆಲಸ ಕಾರ್ಯಗಳಲ್ಲಿ ತೊಡಗಿ ಮಹಾನ್ ವ್ಯಕ್ತಿಗಳನ್ನು ಹೊರತರುವ ಶಕ್ತಿಗಳನ್ನಾಗಿಸುತ್ತಾರೆ.ಪವಿತ್ರೆತೆಯನ್ನು ಕಾಪಾಡುವಂತಹ ಶಿಕ್ಷಕನ ವೃತ್ತಿಯು ಮಕ್ಕಳ ಶ್ರೇಯೋಭಿವೃದ್ದಿಗಾಗಿ ಹಗಲಿರುಳು ಪ್ರಮಾಣಿಕವಾಗಿ ಶ್ರಮಿಸುವ ವ್ಯಕ್ತಿಯಾಗಿದ್ದಾನೆ.ಎಂದು ಸಮಾಜ ಸೇವಕ ರಾಮ್‌ಬಾಬು ಶನಿವಾರ ವಿವಿಧ ಸಂಘಟನೆಗಳ ಒಕ್ಕೂಟದಿಂದ ಸಿರಿಗೇರಿ ಮತ್ತು ಎಂ.ಸೂಗೂರು ಕ್ಲಸ್ಟರ್ ಮಟ್ಟದ ಶಿಕ್ಷಕರಿಗೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು. ಗ್ರಾಮದ ಕ್ರಿಯಾಶೀಲವಾಗಿರುವ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ ಸಹಕಾರದಿಂದ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಯಿತು.ಇಸಿಒ ಪಂಪಾಪತಿ ಮಾತನಾಡಿ ಶಿಕ್ಷಣ ಇಲಾಖೆಯು ಮಾಡುವಂತಹ ಕಾರ್ಯಕ್ರಮವನ್ನು ಸಿರಿಗೇರಿಯ ವಿವಿಧ ಸಂಘಟನೆಗಳು ಮುತುವರ್ಜಿ ವಹಿಸಿ ಶಿಕ್ಷಕರನ್ನು ರಂಜಿಸಿ ಆಟವಾಡಿಸಿಪ್ರಶಸ್ತಿಗಳನ್ನು ವಿತರಿಸಿದ್ದಾರೆ.ತಾಲೂಕು,ಜಿಲ್ಲಾ ಮಟ್ಟದ ಕಾರ್ಯಕ್ರಮ ಗ್ರಾಮೀಣ ಮಟ್ಟದಲ್ಲಿ ನಡೆದಿದ್ದು ಶ್ಲಾಘನೀಯವಾದುದು ಎಂದರು.
ಬಿಆರ್‌ಪಿ ಎಸ್.ಯೋಗನಂದಯ್ಯ ಮಾತನಾಡಿದರು.ಬೆಳಿಗ್ಗೆಯಿಂದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದ ಕ್ರಿಕೆಟ್,ಕಬ್ಬಡ್ಡಿ,ಕೇರಂ,ಚೆಸ್,ರ0ಗೋಲಿ,ಚಿತ್ರಕಲೆ,ಚುಟುಕು ಕಲೆಗಳಲ್ಲಿ ಈಶ್ವರಪ್ಪ,ಎನ್.ಪಂಪಾಪತಿ,ಜೆಡೇಶ್,ದೇವಪ್ಪ,ಮನೋಜ್ ಕುಮಾರ್,ಷಣ್ಮುಖ,ಶರಣಪ್ಪ,ವೆಂಕಟೇಶ್,ತಿಪ್ಪೇಶ್,ಚಿದಾನ0ದ ಶಿಕ್ಷಕ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೊಳ್ಳಿ ಪವಾಡಿ ನಾಯಕ,ಹೊಳಗುಂದಿ ಈರಣ್ಣರನ್ನು ಸನ್ಮಾನಸಿದರು.ಸಿಆರ್‌ಪಿ ಪ್ರಭು,ಮುಖ್ಯಶಿಕ್ಷಕರಾದ ಶಿವುಕುಮಾರ್,ರಂಗಸ್ವಾಮಿ,ಶೆಕ್ಷಾವಲಿ,ಈಶ್ವರಪ್ಪ,ಶಾ0ತಮ್ಮ,ಕಾತ್ಯಾಯಿನಿ,ಭೀಮಣ್ಣ ಸಜ್ಜನ್,ಕೆ.ಎಂ.ದೇವರಾಜ್,ಗೋವಿ0ದರಾಜ್,ರವಿ,ದೊಡ್ಡಬಸಪ್ಪ,ದುರ್ಗಪ್ಪ,ತೀರ್ಪುಗಾರರಾದ ಮಂಜುಳ,ಜೀವಿತಾ.
