
ಉದಯವಾಹಿನಿ ಸಿಂಧನೂರು: ತಾಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ರೈತ ವಿರೋಧಿ ಮತ್ತು ಕೇಂದ್ರ ಸರ್ಕಾರದ ಜನಪರವಾದ ಯೋಜನೆಗಳನ್ನು ನಿಲ್ಲಿಸುವುದರ ಜೊತೆಗೆ ರಾಜ್ಯ ಜನತೆಗೆ ಸುಳ್ಳು ಭರವಸೆಗಳ ಬಂದಿರುವ ಸರ್ಕಾರದ ನೀತಿಯನ್ನು ಖಂಡಿಸಿ ತಾಲ್ಲೂಕು ತಹಶೀಲ್ದಾರ್ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು ನಗರದ ಪ್ರವಾಸಿ ಮಂದಿರದಿಂದ ತಾಲ್ಲೂಕು ತಹಶೀಲ್ದಾರ್ ಕಛೇರಿ ವರಿಗೆ ಪಾದಯಾತ್ರೆ ಮೂಲಕ ರಾಜ್ಯ ಸರ್ಕಾರದ ನೆಡೆ ಖಂಡಿಸಿ ವಿರುದ್ಧ ಪೋಷಣೆ ಕೂಗುತ್ತಾ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು ಈ ಪ್ರತಿಭಟನೆ ಕುರಿತು ಮಾತನಾಡಿದ. ಬಿಜೆಪಿ ಮುಖಂಡರಾದ ಎಂ.ದೊಡ್ಡ ಬಸವರಾಜ ನಮ್ಮ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಸಹಿಸಿಕೊಳ್ಳಲಾಗದೆ ರಾಜ್ಯ ಸರ್ಕಾರ ಸುಮಾರು ಯೋಜನೆಗಳು ನಿಲ್ಲಿಸಿದ್ದಾರೆ. ಮತ್ತು ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಕಿಡಿಕಾರಿದರು. ನಮ್ಮ ,ಮಾಜಿ ಜಿ. ಪಂ ಸದಸ್ಯ ಅಮರೇಗೌಡ ವಿರುಪಾಪುರ, ಮಾತನಾಡಿದರು.
ಮಾಜಿ ನಗರ ಯೋಜನದ ಪ್ರಾಧಿಕಾರದ ಅಧ್ಯಕ್ಷ ಮಧ್ವಾಚಾರ್ಯ ಮಾತನಾಡಿದ ಅವರು ರಾಜ್ಯ ಸರ್ಕಾರವು ಸುಳ್ಳು ಭರವಸೆಗಳನ್ನು ನೀಡಿ ಜನರ ಅದರಲ್ಲೂ ರೈತಾಪಿ ಜನರ ವಿಶ್ವಾಸವನ್ನೂ ಉಳಿಸಿಕೊಳ್ಳಲು ಸಂಪೂರ್ಣ ವಿಫಲವಾಗಿದ್ದು ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ರೈತಾಪಿ ಜನತೆಯ ಅನುಕೂಲಕ್ಕಾಗಿ ಜಾರಿಗೊಳಿಸಿದ್ದ ಹತ್ತು ಹಲವು ಯೋಜನೆ ಮತ್ತು ಕಾಯ್ದೆಗಳನ್ನು ರದ್ದು ಪಡಿಸಿದ್ದು ಕೂಡಲೇ ಈ ಕಾಯ್ದೆಗಳನ್ನು ಮುಂದೆ ವರಿಸಬೇಕೆಂದು ಆಗ್ರಾಸಿ ಬರದ ಮನವಿ ಪತ್ರವನ್ನು ಶಿರಸ್ದಾರ ಉಮೇಶ್ ರಾಠೋಡ ರವರಿಗೆ ಸಲ್ಲಿಸಲಾಗಿತ್ತು.
ಈ ಸಂಧರ್ಭದಲ್ಲಿ ಬಿಜೆಪಿ ನಗರ ರೈತ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಕಟಿಗಲ್, ರವಿ ಉಪ್ಪಾರ, ಯಂಕೊಬ ನಾಯಕ ರಾಮತ್ನಾಳ , ಲಿಂಗರಾಜ ಹೂಗಾರ, ಮಲ್ಲಿಕಾರ್ಜುನ್ ಜಿನೂರ , ಪರಮೇಶಪ್ಪ, ಯಲ್ಲೋಸ್ ಬದಿ, ಮಂಜುನಾಥ ಗಾಣಿಗೇರ, ಜಯಶ್ರೀ, ನೀಲಮ್ಮ,ಶರಣು , ನಾಗರಾಜ ದೇವರಗುಡಿ, ಸೇರಿದಂತೆ ಅನೇಕರು ಇದ್ದರು. ಜೊತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿತ್ತು.
