ಉದಯವಾಹಿನಿ ಮುದ್ದೇಬಿಹಾಳ : ಕಳೆದ 64 ವರ್ಷಗಳಿಂದ ನಮ್ಮ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರಂತರವಾಗಿ ಲಾಭದಲ್ಲಿ ಮುನ್ನೆಡೆಯುತ್ತಾ ಸಾಗಿದೆ ಈ ವರ್ಷ 2023 ಮಾರ್ಚ ಗೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ರೂ. 382.86 ಲಕ್ಷ ಲಾಭ ಸಂಪಾದಿಸಿ, ರೂ. 164.26 ಲಕ್ಷ ಕರಡು ಸಾಲ ನಿಧಿಗೆ, ರೂ. 126.33 ಲಕ್ಷ ಆದಾಯ ತೆರಿಗೆ ಪಾವತಿಸಿ ರೂ 92.27 ಲಕ್ಷ ನಿವ್ವಳ ಲಾಭಗಳಿಸಿದೆ, ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಿದೆ. ಆಯ್.ಡಿ.ಬಿ.ಆಯ್ ಬ್ಯಾಂಕಿನ ಸಹಯೋಗದಲ್ಲಿ ಐ.ಎಫ್. ಎಸ್.ಸಿ ಕೊಡ್, ಎನ್‌ಇಎಫ್ಟಿ/ಆರ್‌ಟಿ~ ಜಿಎಸ್ ಸೌಲಭ್ಯ ಹೊಂದಿದ್ದು, ಇದೇ ಸಪ್ಟೆಂಬರ 1 ರಿಂದ ಎಚ್ ಟು ಎಚ್ ಸೌಲಭ್ಯದಿಂದಾಗಿ ಗ್ರಾಹಕರು ದೇಶದ ಬೇರೆ ಸ್ಥಳದಿಂದ ತ್ವರಿತವಾಗಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಲು ಅನುಕೂಲವಾಗಿದೆ ಎಂದು ಅಧ್ಯಕ್ಷ ಸತೀಶ ಓಸ್ವಾಲ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನ‌ 64 ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರುಸಭೆಯಲ್ಲಿ ಬ್ಯಾಂಕ್ ನ ಸದಸ್ಯರ ಬೇಡಿಕೆಯಂತೆ ಬ್ಯಾಂಕ್ ಶಾಖೆಯನ್ನು ವಿಜಯಪುರ ಮತ್ತು ತಾಳಿಕೋಟಿ ಯಲ್ಲಿ ಆರಂಭಿಸಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ ಅವರು ಗ್ರಾಹಕರಿಗೆ ತ್ವರಿತ ಸೇವೆಗೆ ಡಿಜಿಟಲ್ ಪೇಮೆಂಟ್ ಸೇವೆ ಕೈಗೊಳ್ಳುವ ಕುರಿತು ಮತ್ತು ಹೆಚ್ಚಿನ ಲಾಭಾಂಶ ಶೇ ೯% ರಷ್ಟು ನೀಡಲು ಆಡಳಿತ ಮಂಡಳಿಯ ಸಮಿತಿಯ ಅನುಮೋದನೆ ನೀಡಿದ್ದಾಗಿ ತಿಳಿಸಿದರು ವಾರ್ಷಿಕ ವರದಿಯನ್ನು ಬ್ಯಾಂಕ್ ನ ನಿರ್ದೇಶಕ ವೆಂಕನಗೌಡ ಪಾಟೀಲ್ ಮಾಡಿದರೆ ,ಪ್ರಭುರಾಜ ಕಲಬುರಗಿ 2023/24 ನೇ ಸಾಲಿನ ಆಡಳಿತ ಮಂಡಳಿಯ ಕಾರ್ಯಚಟುವಟಿಕೆ ಕುರಿತು ವಿವರಿಸಿದರು ಕಾರ್ಯಕ್ರಮದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಗದು ರೂಪದಲ್ಲಿ ನೀಡಲಾಯಿತು ನಗದು ಪುರಸ್ಕೃತರು ಅನುಶ್ರೀ ದಡ್ಡಿ,ಸುದೀಪ ಸಾಸನೂರ, ಬನಶ್ರೀ ಮುದ್ದೇಬಿಹಾಳ, ಸುಮನ್ ಮುಲ್ಲಾ, ಸ್ವಾತಿ ಕೆಂಧೂಳಿ,ಸೃಷ್ಠಿತಾ ಬನೋಶಿ,ಜಗದೀಶ ದಡ್ಡಿ,ಮಹಾಂತೇಶ ಶೆಟ್ಟರ, ಆನಂದಕುಮಾರ್ ಪಾಟೀಲ್. ಸಭೆಯ ವೇದಿಕೆಯ ಮೇಲೆ ಉಪಾಧ್ಯಕ್ಷ ಚನ್ನಪ್ಪಗೌಡ ಬಿರಾದಾರ, ನಿರ್ದೇಶಕ ರಾಜಶೇಖರ ಕರಡ್ಡಿ, ಪ್ರಭುದೇವ ಕಲಬುರ್ಗಿ, ರುದ್ರಪ್ಪ ಕಡಿ, ವೆಂಕನಗೌಡ ಪಾಟೀಲ, ರವಿ ಕಮತ, ಗುರಲಿಂಗಪ್ಪಗೌಡ ಪಾಟೀಲ, ಶಶಿಕಾಂತ ಮಾಲಗತ್ತಿ, ಸುನೀಲ ಇಲ್ಲೂರ, ನಾಗಭೂಷಣ ನಾವದಗಿ,ಗುರುಲಿಂಗಪ್ಪಗೌಡ ಪಾಟೀಲ್, ರುದ್ರಪ್ಪ ಕಡಿ, ಹಾಗೂ ಮಹಿಳಾ ನಿರ್ದೇಶಕಿ ಶ್ರೀದೇವಿ ಮದರಿ, ದಾನಮ್ಮ ನಾಗಠಾಣ, ಪ್ರಧಾನ ವ್ಯವಸ್ಥಾಪಕ ಯು ವಿ ನಾಗಠಾಣ, ಉಪಸ್ಥಿತರಿದ್ದರು ಸಭೆಯಲ್ಲಿ ಎಂ.ಬಿ ನಾವದಿ, ಬಸನಗೌಡ ಪಾಟೀಲ್, ಬಾಬು ಬಿರಾದಾರ, ರಾಜೇಂದ್ರ ಭೋಸಲೆ, ಶಿವಾನಂದ ಸಾಲಿಮಠ, ಶ್ರೀನಿವಾಸ ಇಲ್ಲೂರ,ಸೇರಿದಂತೆ ಬ್ಯಾಂಕ್ ನ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು ಸಭೆಯ ಆರಂಭದಲ್ಲಿ ಅಗಲಿದ ಬ್ಯಾಂಕ್ ನ ನಿರ್ದೇಶಕ ಅಖಂಡಮೂರ್ತಿ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು ಸ್ವಾಗತ ನಾಗಭೂಷಣ ನಾವದಗಿ,ಕಾರ್ಯಕ್ರಮ ನಿರೂಪಣೆ ಬ್ಯಾಂಕ್ ನ ವ್ಯವಸ್ಥಾಪಕ ಎಂ.ಎಸ್ ಬಿದರಕುಂದಿ ಹಾಗೂ ಪಿ ಡಿ ಲಕ್ಷಟ್ಟಿ ಮಾಡಿದರೆ ವಂದನಾರ್ಪಣೆ ಸಹಾಯಕ ವ್ಯವಸ್ಥಾಪಕಿ ಶ್ರೀಮತಿ ಎಸ್ ಎಸ್ ನಾಡಗೌಡರ ಮಾಡಿದರು.

Leave a Reply

Your email address will not be published. Required fields are marked *

error: Content is protected !!