ಉದಯವಾಹಿನಿ ಬಸವನಬಾಗೇವಾಡಿ: ಕನ್ನಡ ಸಾಹಿತ್ಯದಲ್ಲಿ ಜಾನಪದ ಅಗ್ರ ಶ್ರೇಣಿಯಲ್ಲಿದೆ. ನಾಡಿನಲ್ಲಿ ಜಾನಪದ ಸಾಹಿತ್ಯ ವಿಫುಲವಾಗಿ ಬೆಳೆಯಲು ವಿಜಯಪುರ ಜಿಲ್ಲೆ ಕಾರಣಿಭೂತವಾಗಿದೆ.ಹಲಸಂಗಿ ಗೆಳೆಯರ ಜಾನಪದ ಸಾಹಿತ್ಯ ಇಡೀ ನಾಡಿಗೆ ಪ್ರಥಮವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಬಸವೇಶ್ವರ ಜಾತ್ರೆಯ ನಿಮಿತ್ಯ, ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ, ತಾಲೂಕು ಘಟಕ ,ವಲಯ ಘಟಕ ಮನಗೂಳಿ ಸಹಯೋಗದಲ್ಲಿ ರ‍್ಪಡಿಸಿದ್ದ ” ಜಾನಪದ ಸಂಭ್ರಮ” ಕರ‍್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ,ಜಿಲ್ಲೆಯಲ್ಲಿ ವೈಶಿಷ್ಟ್ಯವಾದ ಜಾನಪದ ಕಲೆಗಳು ಪ್ರರ‍್ಶನ ನೀಡುತ್ತವೆ.ಕಲಾವಿದರು ಬೆಳೆಯಲು ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದರು.
ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಡಿಎಸ್ ಧುರೀಣ ಸೋಮನಗೌಡ ಪಾಟೀಲ (ಅಪ್ಪುಗೌಡ) ಜಾತ್ರೆ – ಉತ್ಸವಗಳು ಜಾನಪದ ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ನಮ್ಮ ಪರಂಪರೆಯನ್ನು ಪರಿಚಯಿಸುವ ಕರ‍್ಯ ಮಾಡುತ್ತವೆ. ಜಾನಪದ ಕಲೆ ಮತ್ತು ಸಾಹಿತ್ಯ ನಮ್ಮ ಪ್ರಾಚೀನ ಇತಿಹಾಸ ಹೇಳುವ ಎರಡು ಮೈಲುಗಲ್ಲುಗಳಾಗಿವೆ .ನಾವು ಜಾನಪದ ಸಂಸ್ಕೃತಿ ಕಾಪಾಡಬೇಕು ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಪ್ರಾಸ್ತಾವಿಕವಾಗಿ ಮಾತನಾಡಿ ಪರಿಷತ್ ಕರ‍್ಯ ವಿವರಿಸಿದರು. ವೇದಿಕೆಯಲ್ಲಿ ಜಿ ಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ,ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಭಾಸಗೌಡ ಪಾಟೀಲ,ಜಾನಪದ ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಗಿರೀಶ್ ಲಕ್ಷೀನಾರಾಯಣ, ನ್ಯಾಯವಾದಿ ವಿಜಯ ಕೊಪ್ಪ (ಮಂಡ್ಯ) ಕಜಾಪ ಜಿಲ್ಲಾ ಸದಸ್ಯ ಮೌಲಾಸಾಬ ಜಹಾಗಿರದಾರ ಉಪಸ್ಥಿತರಿದ್ದರು. ಕಜಾಪ ವಲಯ ಅಧ್ಯಕ್ಷ ಸಿದ್ಧರಾಮ ಬಿರಾದಾರ ಸ್ವಾಗತಿಸಿದರು.ಪ್ರೊ ಗುರುರಾಜ ಹಳ್ಳೂರ ನಿರೂಪಿಸಿದರು.ರಾಜುಗೌಡ ಪಾಟೀಲ ವಂದಿಸಿದರು. ಕರ‍್ಯಕ್ರಮದಲ್ಲಿ ಬಳೂತಿ ಹೆಜ್ಜೆ ಕುಣಿತ, ಕೊಲ್ಹಾರ ಶಹನಾಯಿ, ನಿಡಗುಂದಿ ಚೌಡಿಕೆ, ಮನಗೂಳಿ ಭಜನೆ ಸೇರಿದಂತೆ ಹಲವಾರು ಕಲಾವಿದರು ಪ್ರರ‍್ಶನ ನೀಡಿದರು.
