
ಉದಯವಾಹಿನಿ ತಾಳಿಕೋಟಿ: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಷ್ಟು ದಾರಿದ್ರೆ ಜೆಡಿಎಸ್ ಗೆ ಬಂದಿಲ್ಲ- ಇದು ಒಂದು ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ ಮಾತು ಸದಾ ಮೈತ್ರಿ ಮೂಲಕವೇ ತನ್ನ ಪಕ್ಷದ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡು ಬರುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ನಂತರ ಕೋಪದಿಂದಲೂ ಅಥವಾ ಆತ್ಮಸ್ಥೈರ್ಯ ಕಡಿಮೆಯಾಗಿರುವುದರಿಂದಲೂ ರಾಜಕೀಯ ದ್ವಂದ್ವ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ ಜಾತ್ಯತೀತ ಮತಗಳು ಯಾವಾಗ ತನ್ನ ಪಕ್ಷದಿಂದ ದೂರು ಸರಿದು ಹೋಗಿವೆ ಎಂದು ಗೊತ್ತಾಯಿತು ಅಂದಿನಿಂದ ಕುಮಾರಣ್ಣ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿಕ್ಕಾಗಿ ಬಿಜೆಪಿಯ ಮೈತ್ರಿಗಾಗಿ ಪ್ರಯತ್ನಿಸುತ್ತಲೇ ಇದ್ದರು ಜೆಡಿಎಸ್ ಪರಮ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರು ಸಮ್ಮತಿ ನೀಡಿದ ಕಾರಣಕ್ಕೆ ಅವರು ಹಿಂಜರಿಯುವಂತ ವಾತಾವರಣ ನಿರ್ಮಾಣವಾಗಿತ್ತು ಆದರೆ ಈಗ ಮೈತ್ರಿಯನ್ನು ಮಾಡಿಕೊಳ್ಳಲೇಬೇಕಾದಂತಹ ಅನಿವಾರ್ಯತೆಗೆ ಸಿಲುಕಿಕೊಂಡಿದ್ದಾರೆ ಎಂದು ಅನಿಸುತ್ತಿದೆ ಇದನ್ನು ದೇವೇಗೌಡರಿಗೆ ಮನವರಿಕೆ ಮಾಡಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬರುತ್ತದೆ ದೇವೇಗೌಡರು ಕೂಡ ಇತ್ತೀಚಿಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳುತ್ತವೆ ಇದೀಗ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಸಮ್ಮತಿಸಿದ್ದಾರೆ ಎಂದು ಹೇಳಲಾಗುತ್ತಿದೆ ಒಂದೊಮ್ಮೆ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಇದರ ಲಾಭ ಎಷ್ಟಾಗುತ್ತದೆ ಗೊತ್ತಿಲ್ಲ ಆದರೆ ಬಿಜೆಪಿಗೆ ಖಂಡಿತವಾಗಿಯೂ ಲಾಭ ಆಗಲಿದೆ ಒಕ್ಕಲಿಗ ಜನಾಂಗ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಆ ಜನಾಂಗದ ಮತಗಳು ಬಿಜೆಪಿಗೆ ಬರುವ ಸಾಧ್ಯತೆಗಳಿವೆ ಒಂದಂತೂ ಸ್ಪಷ್ಟ ಯಾವ ಸಣ್ಣ ಪ್ರಾದೇಶಿಕ ಪಕ್ಷಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿವೆಯೋ ಎಲ್ಲ ಪಕ್ಷಗಳನ್ನು ಬಿಜೆಪಿ ನುಂಗಿ ನೀರು ಕುಡಿದ ಉದಾಹರಣೆಗಳಿವೆ ಈಗ ಜೆಡಿಎಸ್ ನ ಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ ಎಂದು ಹೇಳಬಹುದಾಗಿದೆ ಮುಂದೊಂದು ದಿನ ಜೆಡಿಎಸ್ ಪಕ್ಷ ಬಿಜೆಪಿಯಲ್ಲಿ ಸಂಪೂರ್ಣವಾಗಿ ವಿಲೀನವಾದರೂ ಅಚ್ಚರಿ ಪಡಬೇಕಾಗಿಲ್ಲ ಆದರೂ ತಂದೆ ಮಕ್ಕಳ ಚಾಣಾಕ್ಷ ರಾಜಕಾರಣ ಯಾರಿಗೂ ತಿಳಿದುಬರುವುದಿಲ್ಲ ಎಂಬುದು ಸಾಬೀತಾದ ವಿಷಯವಾಗಿದೆ.
