
ಉದಯವಾಹಿನಿ ದೇವನಹಳ್ಳಿ: ಜಾಲಿಗೆ ಪಂಚಾಯಿತಿ ವ್ಯಾಪ್ತಿಯ ಬೆಟ್ಟೇನಹಳ್ಳಿ ಗ್ರಾಮದ 700 ವರ್ಷಗಳ ಪುರಾತನ ಶ್ರೀಪಳೇಕಮ್ಮ ದೇವಿ ದೇಗುಲ ಜೀರ್ಣೋದ್ಧಾರದ ಮೊದಲನೇ ವರ್ಷದ ವಾರ್ಷಿಕೋತ್ಸವದಲ್ಲಿ. ಸ್ಥಿರ ಬಿಂಬ, ವಿಮಾನ ಗೋಪುರ, ಶಿಖರ ಕಳಸ ಸ್ಥಾಪನೆ ಹಾಗೂ ಕುಂಬಾಭಿಷೇಕ ಮಹೋತ್ಸವೂ ಭಾನುವಾರ ನೆರವೇರಿಸಲಾಗಿದೆ.ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭಾಗವಹಿಸಿ ಮಾತನಾಡಿ, ಅನಾದಿ ಕಾಲದ ಸಂಪ್ರದಾಯಗಳನ್ನು ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿರುವುದು ಸಂತಸದ ವಿಚಾರವಾಗಿದೆ. ದೇವರ ಅಸ್ತಿತ್ವವೂ ವ್ಯಕ್ತಿಗತವಾದ ನಂಬಿಕೆಗಳಿಗೆ ಸಂಬಂಧಪಟ್ಟ ವಿಚಾರವಾಗಿದೆ. ಹಿಂದಿನ ಕಾಲದ ಆಚರಣೆಯನ್ನು ಇಷ್ಟು ವರ್ಷಗಳ ಕಾಲ ಮುಂದುವರೆಸಿಕೊಂಡು ಬಂದು, ದೇಗುಲ ಜೀರ್ಣೋದ್ದಾರ ಮಾಡಿ, ವಾರ್ಷಿಕೋತ್ಸವ ಸಂಭ್ರಮಾಚರಣೆ ಮಾಡಿರುವ ಯುವಕರ ನಡೆಗೆ ಶ್ಲಾಘನೀಯ ಹಾಗೂ ಗ್ರಾಮೀಣ ಭಾಗಗಳಲ್ಲಿ ಇರುವ ದೇಗುಲಗಳನ್ನು ಆಧುನಿಕ ಮಾನಸಿಕ ನೆಮ್ಮದಿ ಕೇಂದ್ರಗಳೆಂದು ಗುರುತಿಸಬಹುದಾಗಿದೆ. ಹೊರ ರಾಷ್ಟ್ರದಲ್ಲಿ ಇರುವ ಮಾನಸಿಕ ತೊಡಕುಗಳು ಭಾರತೀಯರಲ್ಲಿ ಕಾಣಸಲು ಸಾದ್ಯವಿಲ್ಲ ಪ್ರತಿಯೊಬ್ಬರು ದೇವರ ಆರಾಧನೆ, ಧ್ಯಾನ ಹಾಗೂ ಸಾಮಾಜಿಕ ನಂಬಿಕೆಯಲ್ಲಿ ಜೀವನ ಕಟ್ಟಿಕೊಂಡಿದ್ದು ಅವುಗಳು ಏಕಾಗ್ರತೆಯನ್ನು ಹೆಚ್ಚಿಸಿ, ಸಧೃಡ ಮನಸ್ಸುಗಳಿಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಜಾಲಿಗೆ ಗ್ರಾಪಂ ಸದಸ್ಯ ಮಹೇಶ್ ಕುಮಾರ್ ಮಾತನಾಡಿ ಸಾಕಷ್ಟು ಪುರಾತನ ದೇಗುಲವಾಗಿರುವುದಿಂದ ಅನೇಕ ಜನ ಭಕ್ತಾಧಿಗಳು ದೂರದೂರಿನಿಂದ ಬರುತ್ತಾರೆ. ದೇವಿಯ ದರ್ಶನಕ್ಕೆ ವಿಶೇಷ ವವಸ್ಥೆ ಮಾಡಲಾಗಿದ್ದು, ವಿವಿಧ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಭಕ್ತ ಗಣಕ್ಕೆ ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ಅಚ್ಚು ಕಟ್ಟಾದ ವ್ಯವಸ್ಥೆ ಕಲ್ಪಿಸುವಲ್ಲಿ ಗ್ರಾಮದ ಯುವಕರು ಶ್ರಮವಹಿಸಿದ್ದಾರೆ ಎಂದರು.ಇದೇ ವೇಳೆ ಜಾಲಿಗೆ ಗ್ರಾಪಂ ಅಧ್ಯಕ್ಷ ಆನಂದ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಬಿದಲೂರು ಗ್ರಾಪಂ ಅಧ್ಯಕ್ಷ ಎಸ್.ಪಿ.ಮುನಿರಾಜು,ಚಿನ್ನಪ್ಪ, ಜಾಲಿಗೆ ಶ್ರೀರಾಮಣ್ಣ, ದೇವರಾಜ್, ಜಾಲಿಗೆ ಮುನಿರಾಜು, ಅರದೇಶನಹಳ್ಳಿ ಸುಬ್ಬಣ್ಣ, ಬಸವನಪುರ ಮುನಿರಾಜು, ಬೆಟ್ಟೇನಹಳ್ಳಿ ಸದಸ್ಯರಾದ ಮುನೇಗೌಡ, ಮುನಿರಾಜಪ್ಪ, ಕುರ್ಲಪ್ಪ, ಚಿಕ್ಕಮುನಿಯಪ್ಪ, ದೊಡ್ಡ ಕೆಂಪಣ್ಣ, ಕೇಶವ, ಮುನಿಶಾಮಪ್ಪ, ಮುನಿರಾಜಪ್ಪ, ರಮೇಶ್, ಎಂಪಿಸಿಎಸ್‌ನ ಜಯಂತ್, ಋತೀಶ್, ಜನಾರ್ಧನ್,ವೆಂಕಟರಾಜು, ಹರೀಶ್ ಸೇರಿದಂತೆ ಹನುಮ ಸೇನೆಯ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
