ಉದಯವಾಹಿನಿ ಹೊಸಕೋಟೆ : ಹಣ ಆಸ್ತಿಗಿಂತ ಆರೋಗ್ಯ ಭಾಗ್ಯವೇಅಮೂಲ್ಯವಾದದು, ನಿಯಮಿತವಾದಆಹಾರ ಸೇವನೆ ಸದೃಢವಾದಆರೋಗ್ಯ ಹೊಂದಲು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕುಎಂದು ಎಪಿಎಂಸಿ ಮಾಜಿಅಧ್ಯಕ್ಷ ಹೆಚ್.ಎನ್. ಧರ್ಮೇಶ್ ತಿಳಿಸಿದರು. ತಾಲೂಕಿನ ಕೊಂಡ್ರಹಳ್ಳಿ ಶ್ರೀಧರ್ಮೇಶ್ವರ ಕ್ಷೇತ್ರದ ಸಮುದಾಯ ಭವನದಲ್ಲಿಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದಉಚಿತಆರೋಗ್ಯತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ರೈತಾಪಿ ವರ್ಗ, ಗೃಹಿಣಿಯರುತಮ್ಮಆರೋಗ್ಯದಕಡೆಗೆ ಗಮನ ಹರಿಸದೆ, ನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ.ರಕ್ತದಒತ್ತಡ, ಮಧು ಮೇಹಗಳಂತಹ ಕಾಯಿಲೆಗಳು ಮನುಷ್ಯನಿಗೆ ಸರ್ವೆ ಸಾಮಾನ್ಯವಾಗಿದೆ. ಜನರುಆರೋಗ್ಯದ ಬಗ್ಗೆ ನಿರ್ಲಕ್ಷ ವಹಿಸಿ, ಕಾಯಿಲೆ ಪ್ರಮಾಣ ಹೆಚ್ಚಾದಾಗಆಸ್ಪತ್ರೆಯತ್ತ ಮುಖ ಮಾಡುತ್ತಾರೆ. ಸರ್ವರಿಗೂಆರೋಗ್ಯ ಸೇವೆ ಲಭಿಸಬೇಕೆಂಬ ಸದುದ್ದೇಶದಿಂದಗ್ರಾಮೀಣ ಪ್ರದೇಶಗಳಲ್ಲಿ ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರೋಗ್ಯ ಶಿಬಿರಗಳನ್ನು ಅಯೋಜಿಸಿ, ತಪಾಸಣೆ ನಡೆಸಿ ಅರ್ಹರಿಗೆ ಉಚಿತವಾಗಿ ಶಸ್ತಚಿಕಿತ್ಸೆಗೆ ಒಳಪಡಿಸಿ ಜನರ ಸೇವೆ ಸಲ್ಲಿಸುತ್ತಿರುವುದು. ಶ್ಲಾಘನೀಯವಾದದು.ಗ್ರಾಮೀಣ ಜನರು ಇದರ ಸದುಪಯೋಗ ಪಡೆಯಬೇಕೆಂದರು.ಇದೇ ಸಂದರ್ಭದಲ್ಲಿಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ಮುನಿರಾಜು ನೇತೃತ್ವದಲ್ಲಿ 25೦ಕ್ಕೂ ಹೆಚ್ಚು ಮಂದಿ ಜನರಿಗೆ ವಿವಿಧ ತಪಾಸಣೆಗಳನ್ನು ನಡೆಸಿ ಉಚಿತವಾಗಿ ಔಷಧಿಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿಗ್ರಾಪಂನಅಧ್ಯಕ್ಷೆ ಮುನಿವೆಂಕಟಮ್ಮ ಬಚ್ಚಪ್ಪ, ಸದಸ್ಯಎನ್.ಎನ್. ಮಂಜುನಾಥ್‌ಎಸ್‌ಎಫ್‌ಎಸ್‌ಸಿಎಸ್‌ನ ನಿರ್ದೇಶಕ ರವಿಶಂಕರ್, ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಕಿರಣ್, ಡಾ.ರವಿ ಮತ್ತು ಸಿಬ್ಬಂದಿ ವರ್ಗ, ಯುವ ಮುಖಂಡರಾದ ಸಂತೋಷಕುಮಾರ್, ಹರೀಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
