
ಉದಯವಾಹಿನಿ ನಾಗಮಂಗಲ: ಗ್ರಾಮೀಣ ಮಕ್ಕಳು ಇಂದಿನ ಪ್ರಗತಿಯ ವ್ಯಾಸಂಗದಲ್ಲಿ ಉನ್ನತ ಮಟ್ಟದ ಶಿಕ್ಷಣ ಮಾಡಿ ಉನ್ನತ ಮಟ್ಟದ ಕೀರ್ತಿ ಶಿಖರ ನಿಮ್ಮದಾಗಿಸಿಕೊಳ್ಳುವ ಕಾಲ ಬಂದಿದೆ ಎಂದು ಇಸ್ರೋ ವಿಜ್ಞಾನಿ ರವಿ ತಿಳಿಸಿದರು. ಅವರು ನಾಗಮಂಗಲ ತಾಲೂಕು ಅಂಚೆಚಿಟ್ಟನಹಳ್ಳಿಗ್ರಾಮದ ಎ.ಟಿ. ರವಿ ಗೌಡ ಇಸ್ರೋ ಚಂದ್ರಯಾನ 3 ರಲ್ಲಿ ಭಾಗಿಯಾಗಿದ್ದು ಅದು ಯಶಸ್ವಿಯಾಗಿ ದ ಬಳಿಕ ಮೊದಲನೇ ಬಾರಿಗೆ ತನ್ನಊರಿಗೆ ಆಗಮಿಸಿ ತವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿ ನಾನು ಬೆಳೆದಿದ್ದು ಈಗಿನ ಪರಿಸ್ಥಿತಿ ಶೈಕ್ಷಣಿಕವಾಗಿ ಮುಂದೆ ಇದ್ದು ಇಂತಹ ಸುಸಂದರ್ಭಗಳನ್ನ ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟದ ವ್ಯಾಸಂಗ ಮಾಡಿ ನಾನು ನಿಮ್ಮಗಳನ್ನೇ ಸನ್ಮಾನಿಸುವ ಸದಾವಕಾಶ ನೀಡಿ ನಮ್ಮ ಊರು ನಮ್ಮ ತಾಲೂಕಿಗೆ ಕೀರ್ತಿ ತರುವ ಕೆಲಸವಾಗಲಿ ಎಂದು ಮಾತನಾಡಿದರು. ತವರು ಸನ್ಮಾನ ಸ್ವೀಕರಿಸಿ ವಿದ್ಯೆ ಕಲಿಸಿದ ಗುರುಗಳು ಕಷ್ಟಪಟ್ಟು ವ್ಯಾಸಂಗ ಮಾಡಲು ಅವಕಾಶ ಮಾಡಿಕೊಟ್ಟ ತಂದೆ ತಾಯಿಗಳು ಈ ಸಂದರ್ಭದಲ್ಲಿ ನೆನಪಿಸಿ ಕನ್ನಡ ಮಾಧ್ಯಮದಿಂದ ಆಂಗ್ಲ ಮಾಧ್ಯಮದಲ್ಲಿ ಅಂದಿನ ಕಠಿಣ ಪರಿಸ್ಥಿತಿಯಲ್ಲಿ ವ್ಯಾಸಂಗ ಮಾಡಿ ದೇಶದ ಸೇವೆ ಮಾಡುವ ಅವಕಾಶ ಒದಗಿದ್ದು ನಿಮ್ಮಗಳ ಆಶೀರ್ವಾದ ಹಾರೈಕೆ ನೀಡಿದ್ದು ಮುಂದೆಯೂ ಉನ್ನತ ಮಟ್ಟದ ಸೇವೆ ಮಾಡಲು ಉತ್ಸಾಹಕನಾಗಿದ್ದು ತಮ್ಮಗಳ ಪ್ರೀತಿ ವಿಶ್ವಾಸ ಸದಾ ಚಿರಋಣಿ ಎಂದು ತಿಳಿಸಿದರು.ಗ್ರಾಮದ ಹೃದಯ ಭಾಗದ ಶ್ರೀರಾಮ ಮಂದಿರ ಹಾಗೂ ನಾಚಾರಮ್ಮನ ದೇವಸ್ಥಾನ ದ ಮುಂಭಾಗ ಬರಮಾಡಿಕೊಂಡು ಸನ್ಮಾನಿಸಲಾಯಿತು.ವಿಜ್ಞಾನಿಯಾದ ಕನ್ನಡದ ಕಣ್ಮಣಿಯಾಗಿರುವ ಎ ಟಿ ರವಿ ಗೌಡ ರವರನ್ನು, ಸನ್ಮಾನಿಸಲಾಗಿತ್ತು ಹಾಗೂ ಅವರ ತಂದೆಯಾದ ತಮ್ಮಣ್ಣ ಗೌಡ ತಾಯಿ ಜಯಮ್ಮ ಶಿಕ್ಷಕರಾದ ಪುಟ್ಟರಾಜು ಸನ್ಮಾನಿಸಲಾಗಿತ್ತು.ಇದೇ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಆಲಿ ಸದಸ್ಯ ಶಿವಲಿಂಗಯ್ಯ ಯುವಕರಾದ ಚಂದ್ರಶೇಖರ್ ಗ್ರಾಮದ ಹಿರಿಯ ಮುಖಂಡರುಗಳು ಯುವಕರು ಉಪಸ್ಥಿತರಿದ್ದರು
