
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಛಾಯಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾದ ಚಂದ್ರಶೇಖರ ಹೂಗಾರ,ಬಸವರೆಡ್ಡಿ ಮಕಾಶಿ ಅವರಿಗೆ ರಾಜ್ಯ ಮಟ್ಟದ ಗುರುವಂದನಾ ಪ್ರಶಸ್ತಿಯು ನೀಡಲಾಯಿತು ಎಂದು ತಾಲ್ಲೂಕಾ ಛಾಯಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಗಾರಂಪಳ್ಳಿ ತಿಳಿಸಿದ್ದಾರೆ. ಕರ್ನಾಟಕ ಛಾಯಾಚಿತ್ರಗ್ರಾಹಕ ಸಂಘವು,ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಪಿಏ ನೇತೃತ್ವದಲ್ಲಿ ಡಿಜಿ ಇಮೇಲ್ ಅಂತರರಾಷ್ಟ್ರೀಯ ಪೋಟೋ ವಸ್ತು ಪ್ರದರ್ಶನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಛಾಯಾಚಿತ್ರಗ್ರಾಹಕರಿಗೆ ರಾಜ್ಯ ಮಟ್ಟದ ಗುರುವಂದನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಅಂಬರೀಶ ಕಂದಿ,ಕಾರ್ಯದರ್ಶಿ ಶ್ರೀನಿವಾಸ ದೇಗಲಮಡಿ,ಶಿವಕುಮಾರ ಹೀರೆಮಠ,ಮಾಧವರಾವ ಪಾಟೀಲ್,ಮಲ್ಲಿಕಾರ್ಜುನ ಶಿರೋಳ್ಳಿ ಇದ್ದರು.
