
ಉದಯವಾಹಿನಿ ಕೊಲ್ಹಾರ:ತಾಲೂಕಿನ ಮಸೂತಿ ಗ್ರಾಮದ ಶ್ರೀ ಜಗದೀಶ್ವರ ಹಿರೇಮಠದ ಪೂಜ್ಯ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಹುಟ್ಟು ಹಬ್ಬದ ನಿಮಿತ್ಯ ವಿವಿಧ ಕಾರ್ಯಕ್ರಮ ಸ.14 ಗುರುವಾರ ಸಾಯಂಕಾಲ 5:00ಗೆ ಹಮ್ಮಿಕೊಳ್ಳಲಾಗಿದೆ. ಶ್ರೀ ಜಗದೀಶ್ವರ ಹಿರೇಮಠದ ಪೂಜ್ಯ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 56 ನೇ ಹುಟ್ಟು ಹಬ್ಬದ ನಿಮಿತ್ಯತಾಲೂಕಿನ 30 ಗ್ರಾಮಗಳ ಗ್ರಾಮಕ್ಕೆ ಇಬ್ಬರಂತೆ ಒಬ್ಬ ಮಾಜಿ ಸೈನಿಕ ಹಾಗೂ ಪ್ರಗತಿಪರ ರೈತ ಸೇರಿ ಒಟ್ಟು 60 ಜನರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ರೇಣುಕಾ ಯಲ್ಲಮ್ಮ ಧಾರಾವಾಹಿಯ ಯಲ್ಲಮ್ಮ ಪಾತ್ರದಾರಿ ಕುಮಾರಿ ಭೈರವಿ ಎಂ ಇವರಿಂದ ವಿಶೇಷ ನೃತ್ಯ ಹಾಗೂ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಭೆಯ ನೇತೃತ್ವವನ್ನು ಮಲಘಾಣ ಗ್ರಾಮದ ನಾಗಲಿಂಗೇಶ್ವರ ಆಶ್ರಮದ ಶ್ರೀ ಸ.ಸ.ಸದಾನಂದ ಮಹಾರಾಜರು ವಹಿಸಿಕೊಳ್ಳುವರು
ಮುಖ್ಯ ಅತಿಥಿಗಳಾಗಿ ಕರ್ನಾಟಕ ಜನಸ್ಪಂದನ ಟ್ರಸ್ಟ್ ರಾಜ್ಯಾಧ್ಯಕ್ಷರಾದ ಶ್ರೀ ಹನುಮಂತಪ್ಪ ಎಸ್ ಮೆಂಡೆಗಾರ.ವಿಷೇಶ ಉಪನ್ಯಾಸಕರಾಗಿ ವಿಜಯಪುರದ ಅಭಿ: ಪೌಂಡೇಶನ್ ಸಂಸ್ಥಾಪಕರಾದ ಶ್ರೀ ಬಸವರಾಜ ಬಿರಾದಾರ ಹಾಗೂ ಮಸೂತಿ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಎಲ್ಲ ಶರಣ ತಂದೆ ತಾಯಂದಿರು ಆಗಮಿಸಲಿದ್ದಾರೆ.
