
ಉದಯವಾಹಿನಿ ಮುದಗಲ್: ಪಟ್ಟಣದ ಸಿದ್ಧಾರ್ಥ ನಗರದ ಸಿದ್ಧಾರೂಢ ಮಠದ ಜಾತ್ರಾ ಮಹೋತ್ಸವ ಸಂಭ್ರಮ ದಿಂದ ನೆರವೇರಿತು.ಶ್ರಾವಣಮಾಸದಲ್ಲಿ ತಿಂಗಳ ಪೂರ್ತಿ ಶಿವ ಭಜನೆ, ವಿಶೇಷ ಪೂಜೆ ಕಾರ್ಯಕ್ರಮ ಜರುಗಿದವು.ಜಾತ್ರೆ ನಿಮಿತ್ತ ಸಿದ್ಧಾರೂಢರ ಭಾವ ಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡ ಲಾಯಿತು.ಮೆರವಣಿಗೆಯಲ್ಲಿ ಸುಮಂಗಲೆಯರು ನೂರಾರು ಕುಂಭಗಳನ್ನು ಹೊತ್ತು ಮೆರುಗು ಹೆಚ್ಚಿಸಿದರು.ಜಾತ್ರೆಯ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಸಹಜಾನಂದ ಶ್ರೀಗಳು ಹಾಗೂ ಕಷ್ಣಾನಂದ ಮಹಾಸ್ವಾಮಿಗಳನ್ನು ಮೆರವಣಿಗೆ ಮಾಡಲಾಯಿತು. ಪರಶುರಾಮ, ಬಸವರಾಜ, ಕೊಟ್ಟೂರು , ರಘುವೀರ, ಮಂಜುನಾಥ ನಾಗಳಪೂರ ,ದಿಲೀಪ್, ಕಷ್ಣ ಚಲುವಾದಿ, ಗೋಪಾಲ , ಹಾಗೂ ಸಮಾಜದ ಹಿರಿಯರು ಉಪಸ್ಥಿತರಿದ್ದರು.
