
ಉದಯವಾಹಿನಿ ದೇವದುರ್ಗ: ವೃತ್ತಿಗೆ ಬಂದಾಗ ವಿದ್ಯಾರ್ಥಿಗಳು ತೋರಿಸುವ ಶ್ರದ್ಧೆ ಮತ್ತು ಆಸಕ್ತಿಗಿಂತ ಈಗಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೋರಿಸುವ ಶ್ರದ್ಧೆ ಆಸಕ್ತಿ ಕಡಿಮೆಯಾಗುತ್ತಿದೆ. ವೈಜ್ಞಾನಿಕತೆ ಬೆಳೆದಂತೆ ಸುದ್ದಿ ಮಾಧ್ಯಮಗಳ ಪ್ರಭಾವದಿಂದ ಈಗಿನ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮೊದಲಿನಷ್ಟು ಆಸಕ್ತಿ ತೋರಿಸದಿರುವುದು ಖೇದಕರ ವಿಷಯವಾಗಿದೆ ಎಂದು ಮಸರಕಲ್ ಪ್ರೌಢಶಾಲೆಯಿಂದ ಬೀಳ್ಕೊಡುವ ಸಮಾರಂಭದಲ್ಲಿ ಶಾಲೆಯಿಂದ ಶ್ರೀ ಮಹಾದೇವ ಕುಳಲಿ ಗೌರವ ಸನ್ಮಾನ ಸ್ವೀಕರಿಸಿ ಮನದಾಳದ ನೋವನ್ನು ತೋಡಿಕೊಂಡರು. ವೃತ್ತಿಬದುಕಿನ ಈ 17 ವರ್ಷದಲ್ಲಿ ನಾನು ಕಲಿಸಿದ್ದಕ್ಕಿಂತ ಹೆಚ್ಚಾಗಿ ಕಲಿತಿದ್ದೆ ಹೆಚ್ಚು ಎನ್ನುತಾ ಊರಿನ ಜನತೆಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ಇನ್ನೋರ್ವ ಸನ್ಮಾನಿತರಾದ ಸದ್ದಾಮ್ ಹುಸೇನ ಅಭಿಮಾನ ವ್ಯಕ್ತಪಡಿಸುತ್ತಾ,ನನ್ನ ಜೀವನದಲ್ಲಿ ಆಯ್ಕೆ ಮಾಡಿಕೊಂಡ ಮಸರಕಲ್ ಶಾಲೆಯನ್ನು ಯಾವತ್ತು ಮರೆಯೋದಿಲ್ಲ, ಇಲ್ಲಿನ ಶಿಕ್ಷಕರು , ಊರಿನ ಜನರು, ನನ್ನ ವಿದ್ಯಾರ್ಥಿಗಳು ನನ್ನೊಳಗಿನ ದೈಹಿಕ ತೊಂದರೆಯ ನೋವು ಯಾವತ್ತೂ ಬಾಧಿಸದಿರುವಂತೆ ನೋಡಿಕೊಂಡರು. ಸಂಕಷ್ಟ ಸಮಯದಲ್ಲಿ ಸ್ಪಂದಿಸಿದ ಶಿಕ್ಷಕ ಸಮೂಹಕ್ಕೆ ವಂದನೆಗಳನ್ನು ತಿಳಿಸಿದರು.
ಕೊನೆಯಲ್ಲಿ ಸನ್ಮಾನಿತರಾದ ಶ್ರೀಮತಿ ಮುಕ್ತಾಯಿ ನಾವದಗಿ ಮಾತನಾಡುತ್ತಾ, ನನ್ನ ಅಪ್ಪ ಅಮ್ಮ ನನಗೆ ಮುಕ್ತಾಯಿ ಎಂದು ಹೆಸರಿಟ್ಟಾಗ ಮೊದಲು ನನಗೆ ಸಂಕೋಚವಾಗುತ್ತಿತ್ತು. ಇಂದು ಮಹಾಮಾತೆ ಶಿವಶರಣೆ ಮುಕ್ತಾಯಕ್ಕನ ವನವನ್ನು ಸ್ವತಃ ನಾನೆ ಲೋಕಾರ್ಪಣೆ ಮಾಡಿದ್ದು ಹೆಮ್ಮೆಯ ವಿಷಯ ಹಾಗೂ ನನ್ನ ಜೀವನದ ಅದೃಷ್ಟವಾಗಿದೆ. ನಾನಿಲ್ಲಿ ಕೇವಲ ಎರಡು ತಿಂಗಳು ಕೆಲಸ ಮಾಡಿದರೂ ನೀವು ಕೊಟ್ಟ ಪ್ರೀತಿ ಹಾಗೂ ತೋರಿದ ಗೌರವ ಸದಾ ಸ್ಮರಿಸುವೆ ಎನ್ನುತಾ ಶಿವಶರಣೆ ಮುಕ್ತಾಯಕ್ಕನ ಈ ವನಕೆ ಹೂವಿನ ಗಿಡಗಳನ್ನು ಕಳುಹಿಸುವ ಇಚ್ಚೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಶಮೀನಾ ದೇವರಾಜ್ ಮತ್ತು ನಿತೀಶ್ ಕುಮಾರ ಶಿಕ್ಷಕರಾದ ರವಿಶಂಕರ್ ಮತ್ತು ಗಿರಿಯಪ್ಪ ವರ್ಗಾವಣೆಯಾದ ಶಿಕ್ಷಕರ ಸೇವೆಯನ್ನು ಸ್ಮರಿಸಿಕೊಂಡು ಮೆಚ್ಚಿಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯ ಗುರುಗಳಾದ ಎ. ವಿ. ಬಸವರಾಜ ತ್ರಿಮೂರ್ತಿಗಳ ಮುಂದಿನ ವೃತ್ತಿ ಬದುಕು ಸುಖಕರವಾಗಿ ಮತ್ತು ಶ್ರೀಮಂತರವಾಗಿರಲಿ ಎಂದು ಹಾರೈಸಿದರು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಬಸವರಾಜ್ ಪಾಟೀಲ್, ನಾಗರತ್ನಾ, ಶೋಭಾ, ಪರಮಾನಂದ, ಗ್ರಾ ಪಂ. ಅಧ್ಯಕ್ಷರ ಪುತ್ರರಾದ ಸೋಪಿಸಾಬ ಸಿದ್ದರಾಮರೆಡ್ಡಿ ಹನುಮಂತರಾವ್ ಮತ್ತು ನಿಂಗಪ್ಪ ಸರ್, ಶ್ರೀಮತಿ ರಾಜೇಶ್ವರಿ ಬಾಬಾ ಜಾನಿ, ಶಾಂತುಕುಮಾರ, ಆಂಜನೆಯ್ಯ, ಹಿರಿಯ ವಿದ್ಯಾರ್ಥಿಗಳು ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು ಪರಿಚಯವನ್ನು ನೀಲಕಂಠ ಮಳ್ಳಿಮಠ ನೀಡಿದರೆ ಶಕೀಲಾ ಅಹ್ಮದ ಚೌಧರಿ ಸ್ವಾಗತಿಸಿದರು. ಕಾಶಿಮ್ ಅಲಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಹೇಳಿದರೆ, ಮೋಹಿನಿದ್ದೀನ್ ಮತ್ತು ಬಸವರಾಜ್ ಮೇತ್ರಿ ಕಾರ್ಯಕ್ರಮ ನಿರ್ವಹಣೆ ಮಾಡಿ ಕೊನೆಯಲ್ಲಿ ಶಾಂತಪ್ಪ ಸರ್ ವಂದಿಸಿದರು.
