ಉದಯವಾಹಿನಿ ಚಿತ್ರದುರ್ಗ: ಬಾಲಗೋಕುಲ ಸಂಸ್ಥೆ ಸಂಸ್ಥೆ ಚಿತ್ರದುರ್ಗ ಹಾಗೂ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಚಿತ್ರದುರ್ಗ ಸಂಯುಕ್ತವಾಗಿ ದಿನಾಂಕ 10 ಸೆ‌.2023ರ ಭಾನುವಾರ ಸಂಜೆ ನಗರದ ತುರುವನೂರು ರಸ್ತೆಯ ಶ್ರೀ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಕೃಷ್ಣ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯರ ವೇಷಭೂಷಣ ತೊಟ್ಟು  ಭಾಗವಹಿಸಿ ಕುಣಿದು ಕುಪ್ಪಳಿಸಿ ಸಂಭ್ರಮ ಪಟ್ಟರು. ವೇದಿಕೆ ಕಾರ್ಯಕ್ರಮದ ನಂತರ ಶ್ರೀಕೃಷ್ಣನ ವೇಷಧರಿಸಿದ ಮಕ್ಕಳೊಂದಿಗೆ ಶೋಭಾಯಾತ್ರೆ ನಡೆಸಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಂಸ್ಥೆವತಿಯಿಂದ ಉಡುಗೊರೆ ಹಾಗೂ ಅಭಿನಂದನಪತ್ರ ನೀಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಬಾಲಗೋಕುಲ ಸಂಸ್ಥೆ ಸಂಚಾಲಕಿ ಶ್ರೀಮತಿ ನಾಗಲತ ಮಾತರವರು ಮಾತನಾಡಿ ” ಶ್ರೀಕೃಷ್ಣ ಜನ್ಮಾಷ್ಠಮಿಯಾಗಲಿ ಅಥವಾ ಇನ್ಯಾವುದೇ ಆಚರಣೆಗಳಾಗಲಿ ಕೇವಲ ಆಚರಣೆಯಾಗಿ ಮಾಡದೆ ಈ ಮೂಲಕ ಮುಂಬರುವ ನಮ್ಮ ಪೀಳಿಗೆಗೆ ನಮ್ಮ ಭಾರತೀಯ ಕಲೆ ಸಂಸ್ಕೃತಿಯನ್ನು ತಿಳಿಯಪಡಿಸುವಂತಾಗಬೇಕು ” ಎಂದು ಅಭಿಪ್ರಾಯ ಪಟ್ಟರು.
ಇದೇ ಸಂಧರ್ಭದಲ್ಲಿ ಮಕ್ಕಳಿಗೆ ಶ್ರೀಕೃಷ್ಣನ ಲೀಲೆಗಳನ್ನು ಹಾಡು ಮತ್ತು ನೃತ್ಯಗಳ ಮೂಲಕ ಮಕ್ಕಳಿಗೆ ಕಲಿಸಿ ಮಾತನಾಡಿದ ದಾವಣಗೆರೆಯ ರಾಷ್ಟ್ರೋತ್ಥಾನ ಪ್ರತಿಷ್ಠಾನದ ಮಾತಾ ಮೇಘನಾ ಮಾತನಾಡಿ ” ಹಿಂದೂ ಧರ್ಮದ ಅತ್ಯಂತ ಪ್ರೀತಿಯ ದೇವರುಗಳಲ್ಲಿ ಒಬ್ಬನಾದ ಶ್ರೀ ಕೃಷ್ಣನು ತನ್ನ ಜೀವನ ಮತ್ತು ಬೋಧನೆಗಳಿಂದ ವಿಶ್ವದಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿದ್ದಾನೆ. ತಾಯಿ ಯಶೋದೆ ಶ್ರೀಕೃಷ್ಣನನ್ನು ಬೆಳೆಸಿದ ರೀತಿ ಎಲ್ಲಾ ತಾಯಂದಿರಿಗೂ ಮಾದರಿ ಮಕ್ಕಳನ್ನು ಸಮಾಜಕ್ಕೆ ಒಬ್ಬ ಒಳ್ಳೆಯ ಪ್ರತಿನಿಧಿಯಾಗಿ ಕೊಡಬೇಕೆಂದರೆ ಅದರಲ್ಲಿ ಪೋಷಕರ ಪಾತ್ರ ತುಂಬಾ ಮಹತ್ವದ್ದು. ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಅವರು ಮಾಡುತ್ತಿರುವ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಿ ಅವರನ್ನು ಒಳ್ಳೆಯ ಮಾರ್ಗದಲ್ಲಿ ಬೆಳೆಸಬೇಕು ಒಳ್ಳೆಯ ಪೋಷಕರ ಮಕ್ಕಳು ನಾಳಿನ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಬದುಕುತ್ತಾರೆ ಮತ್ತು ಬದುಕುವ ದಾರಿಯನ್ನು ತೋರಿಸಿಕೊಟ್ಟ ಎಲ್ಲರಿಗೂ ಚಿರಋಣಿಯಾಗಿರುತ್ತಾರೆ. ಶ್ರೀಕೃಷ್ಣ  ಮತ್ತು ಯಶೋಧೆಯರ ಕಥೆ ಒಳ್ಳೆಯ ಪೋಷಕರಿಗೆ ಪಾಠವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಆರ್.ಸತ್ಯಣ್ಣನಿ.ಡಿಡಿಪಿಇ ನಾಗರಾಜ್, ನಿ.ಪೋಲಿಸ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಚಾರ್, ಭಾ.ಯೋ.ಶಿ.ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್ ಹಾಗೂ ಹಲವಾರು ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!