
ಉದಯವಾಹಿನಿ,ಚಿಂಚೋಳಿ: ಶಾಲೆಗಳಲ್ಲಿ ಪ್ರತಿಯೊಂದು ಶಾಲಾಮಕ್ಕಳಲ್ಲಿ ಎನಾದರೂಂದು ಪ್ರತಿಭೆ ಇದ್ದೆ ಇರುತ್ತದೆ ಅಂಥಹ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಲ್ಲಿ ಹೊರ ಹಾಕಬೇಕು ಎಂದು ಸುಲೇಪೇಟ ಗ್ರಾಪಂ ಅಧ್ಯಕ್ಷ ಸಂತೋಷ ರಾಠೋಡ್ ಹೇಳಿದರು. ತಾಲ್ಲೂಕಿನ ಸುಲೇಪೇಟ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು,ಮಕ್ಕಳಲ್ಲಿರುವ ಪ್ರತಿಭೆಯನ್ನು ವ್ಯಕ್ತಪಡಿಸುತ್ತಾರೆ ಆದರೆ ಆ ಮಕ್ಕಳ ಪ್ರತಿಭೆಯನ್ನು ತೀರ್ಪುಗಾರರು ತಾರತಮ್ಯ ಮಾಡದೆ ನಿಜವಾದ ಪ್ರತಿಭಾವಂತ ಮಕ್ಕಳಿಗೆ ಗುರುತಿಸುವ ಕೆಲಸ ನ್ಯಾಯಯುತವಾಗಿ ತೀರ್ಪುಗಾರರು ಮಾಡಬೇಕು ಎಂದರು. ವಲಯ ಸಿ.ಆರ್.ಪಿ ಮಕ್ಸೂದ್ ಅಲಿ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೀಂದ್ರಪ್ಪಾ ಹೋಳ್ಕರ ಮಾತನಾಡಿದ್ದರು. ಈ ಸಂದರ್ಭದಲ್ಲಿ ಎಂ.ಡಿ.ಫಾಜೀಲ್,ಎಸ್ಡಿಎಂಸಿ ಅಧ್ಯಕ್ಷ ತಾಹೇರ ಪಾಷ,ಅಬ್ದುಲ್ ಮನ್ನಾನ,ಉಮರ ಹುದ್ದಾರ,ಜೋಹರಾ ಖಾನಂ,ಅಕ್ಬರ ಪಟೇಲ,ಅನ್ವರ ಶಾಹ,ಶಕೀಲ ಅಹೇಮದ,ರಿಜ್ವಾನ ಬೇಗಂ,ಆನಂದ ಚವ್ಹಾಣ,ಸೇರಿದಂತೆ ಅನೇಕ ಶಾಲಾಮಕ್ಕಳು ಇದ್ದರು.
