ಉದಯವಾಹಿನಿ ಮಸ್ಕಿ: ಎರಡನೇ ಶ್ರೀಶೈಲ ಎಂದೇ ಖ್ಯಾತಿ ಪಡೆದಿರುವ ಮಲ್ಲಯ್ಯನ ದರ್ಶನ ಪಡೆಯಲು ಭಕ್ತ ಸಾಗರ ಹರಿದು ಬಂತು, ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರಿಗೆ ಪೂಜೆ ಸಲ್ಲಿಸಿ ಹರಕೆ ತಿರಿಸಿದರು. ನಸುಕಿನ ಜಾವ ೩ಗಂಟೆಯಿAದ ಆರಂಭವಾದ ದರ್ಶನ ಸಂಜೆ ೫ಗಂಟೆಯ ತನಕ ಮಲ್ಲಯ್ಯನ ದರ್ಶನ ಪಡೆಯಲಾಯಿತು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ರಣಗೂಡುತ್ತಿರುವ ಬಿಸಿಲಿನಲ್ಲಿ ನೂರಾರು ಮೆಟ್ಟಿಲು ಮೂಲಕ ಬೆಟ್ಟದ ಮಲ್ಲಯ್ಯನ ದೇವಸ್ಥಾನಕ್ಕೆ ತೆರಳಿದರು, ಮೆಟ್ಟಿಲು ಮೂಲಕ ಮೇಲೇರಿದ ಭಕ್ತರ ದೃಶ್ಯ ಇರುವೆ ಸಾಲಿನಂತೆ ಕಾಣುತಿತ್ತು, ಶ್ರಾವಣ ಮಾಸದ ಕೊನೆ ಸೋಮವಾರ ಹಿನ್ನಲ್ಲೆಯಲ್ಲಿ ಬಂಡೆಯಲ್ಲಿ ಮೂಡಿರುವ ಮಲ್ಲಯ್ಯನ ವಿಗ್ರಹಕ್ಕೆ ಅಭಿಷೇಕ ಮಾಡುವುದರ ವಿವಿಧ ಧಾರ್ಮಿಕ ಪೂಜೆಗಳನ್ನು ನೆರವೇರಿಸಲಾಯಿತು. ಮಲ್ಲಯ್ಯನ ದರ್ಶನ ಪಡೆಯಲು ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
