ಉದಯವಾಹಿನಿ,ಚಿಂಚೋಳಿ: ಪಟ್ಟಣದ ಚಂದಾಪೂರದ ತಾಲ್ಲೂಕ ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆವರಣದಲ್ಲಿರುವ ಗೋದಾಮನ್ನು ಹರಾಜು ಮಾಡಿ ಬಂದಂತಹ ಹಣದಿಂದ ಅವರಣದಲ್ಲಿಯೇ ಕಲ್ಯಾಣ ಮಂಟಪ ನಿರ್ಮಿಸೋಣ ಎಂದು ತಾಲ್ಲೂಕಾ ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ರಮೇಶ ಯಾಕಾಪೂರ ಹೇಳಿದರು.
ಪಟ್ಟಣದ ತಾಲ್ಲೂಕಾ ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 64ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು,ಸಂಘದ ಕಛೇರಿಯ ಲೆಕ್ಕ ಪರಿಶೋಧಕ ಏಡಿಟ್ ಮಾಡಲು ಪ್ರತಿವರ್ಷ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಹಕಾರ ಸಂಘದವರು ಆಗಮಿಸಿ ಮಾಡಬೇಕು ಆದರೆ ಕಳೆದ ಎರಡು ವರ್ಷದಿಂದ ಏಡಿಟ್ ಮಾಡಲು ಬರುತ್ತಿಲ್ಲಾ,ಕಾರಣ ಎಲ್ಲಾ ಆಡಳಿತ ಮಂಡಳಿಯವರು ಒಪ್ಪಿಗೆ ಸೂಚಿಸಿದರೆ ಚಾರ್ಟೆಡ್ ಅಕೌಂಟ್ ಯಿಂದ ಸಂಘದ ಲೆಕ್ಕ ಪರಿಶೋಧಕ ಏಡಿಟ್ ಮಾಡಬೇಕು.
ಸದಸ್ಯರ ಷೇರು ಬಂಡವಾಳವನ್ನು 1000ರಿಂದ 1500ರೂಪಾಯಿ ಏರಿಕೆ ಮಾಡಲಾಗುವುದು,ಈ ಸಂಘವು ತಾಲ್ಲೂಕಿಗೆ ಸಂಬಂಧಿಸಿದಂತೆ ಇರುತ್ತದೆ ಆದರೆ ಕೆಲವೊಂದು ಗ್ರಾಮಗಳು ಕಾಳಗಿ ಹಾಗೂ ಕಮಲಾಪೂರ ತಾಲ್ಲೂಕಿಗೆ ಸೇರಿಕೊಂಡಿದ್ದು ಆದರಿಂದ ತಾಲ್ಲೂಕಿಗೆ ಅನ್ವಯವಾಗುವ ಗ್ರಾಮಗಳು ತೆಗೆದುಕೊಂಡರೆ ಸಹಕಾರ ಸಂಘದ ಕಾನೂನು ತಿದ್ದುಪಡೆ ಮಾಡಬೇಕಾಗುತ್ತದೆ,ಹಾಗೆಯೇ ಸದ್ಯ ರೀತಿಯಲ್ಲಿ ಇರಲಿ ಎಂದರೆ 17ನಿರ್ದೇಶಕರು ಆಯ್ಕೆ ಮಾಡಬೇಕಾಗುತ್ತದೆ,ಆದರೆ ಎರಡು ವರ್ಷ ಅವಧಿವಿದೆ ಬೇಡವೆಂದರೆ ಸಾಮಾನ್ಯ ಚುನಾವಣೆ ನಡೆಯುವ ಸಂದರ್ಭದಲ್ಲಿ ಸರ್ಕಾರ ತಿದ್ದುಪಡಿ ಮಾಡುವುದು ಖಚಿತ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅತೀಖ ಪಾಶಾ ವಾರ್ಷಿಕ ಆದಾಯ ಖರ್ಚು ವರದಿ ಓದಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪೀರಪ್ಪ ಸಾಸರಗಾಂವ,ವೀರಶೇಟ್ಟಿ ಪಾಟೀಲ,ಜಗದೀಶಸಿಂಗ್ ಠಾಕೂರ್,ಮುಕುಂದ ದೇಶಪಾಂಡೆ,ಶಂಕರ ಬೋಗವಂತಿ,ಜಗದೇವಯ್ಯ,ಬಕ್ಕಮ್ಮಾ,ಅಮೃತ,ಶಾಂತಪ್ಪ ಪೂಜಾರಿ,ರವಿಕಾಂತ ಪಾಟೀಲ,ಮಲ್ಲಿಕಾರ್ಜುನ,ತುಳಸಿರಾಮ,ಜಗದೀಶ,ಅನೇಕ ಸದಸ್ಯರು ನಿರ್ದೇಶಕರು ಇದ್ದರು.
ಸಂಘದ ಮುಂದಿನ ಗುರಿಗಳು:-ಬೆಳೆ ಕಾರ್ಖಾನೆ ಮಾರಾಟ ಮಾಡುವುದು,ಕಲ್ಯಾಣ ಮಂಟಪ ನಿರ್ಮಿಸುವ ಯೋಜನೆ,ಶಾಪಿಂಗ್ ಕಾಂಪ್ಲೆಕ್ಸ್ ಗಳು ಬಾಡಿಗೆ ಆಧಾರ ಮೇಲೆ ನೀಡುವುದು,ಸಾರ್ವಜನಿಕರಿಗಾಗಿ ಜನ ಔಷಧಾಲಯ ಅಂಗಡಿ ಪ್ರಾರಂಭಿಸುವುದು,ಪ್ರಸ್ತುತ ಸಾಲಿನಲ್ಲಿ ರೈತರಿಂದ ಆಹಾರ ಧಾನ್ಯಗಳು ಖರೀದಿಸುವುದು ಇದೆ.
:-ರಮೇಶ ಯಾಕಾಪೂರ ಅಧ್ಯಕ್ಷರು ತಾ.ಒ.ಹು.ಮಾ.ಸ.ಸಂ.ನಿ ಚಿಂಚೋಳಿ.

Leave a Reply

Your email address will not be published. Required fields are marked *

error: Content is protected !!