
ಉದಯವಾಹಿನಿ ಮುದ್ದೇಬಿಹಾಳ ; ಜಾತಿ ವ್ಯವಸ್ಥೆ ನಿರ್ಮೂಲನೆ ಜನರಲ್ಲಿ ಸಾಮರಸ್ಯ ಮೂಡಿಸಲಿ ಬಂದ ಮಹಾಪುರುಷ ಶ್ರೀ ಫಕಿರೇಶ್ವರರು ,ಹಿಂದೂ ಮುಸ್ಲಿಂ ವೈಷಮ್ಯ ದ್ವೇಷ ಅಸೂಹೆ ತೊಡೆದು ಹಾಕಿ ಎಲ್ಲರೂ ಸಮಾನೆಂದು ಸಾರಿದವರು ಫಕಿರೇಶ್ವರರು ಎಂದು ಶಿರಹಟ್ಟಿ ಭಾವೈಕ್ಯತಾ ಸಂಸ್ಥಾನಮಠದ ಕಿರಿಯ ಜಗದ್ಗರು ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು ಅವರು ಶ್ರಾಮಣ ಕೊನೆ ಸೋಮುವಾರ ನಿಮಿತ್ತ ನಡೆಯುವ ಮುದ್ದೇಬಿಹಾಳ ಶಿರೋಳದ ಶ್ರೀ ಪಕೀರೇಶ್ವರ ಜಾತ್ರಾ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು ಮುದ್ದೇಬಿಹಾಳದಲ್ಲಿ ನೆಲೆಸಿ ತೋರಿದ ಅನಂತ ಲೀಲೆ ಜನತೆಗೆ ಗೊತ್ತಾಗಬೇಕು 500 ವರ್ಷಗಳ ಹಿಂದೆ ತಪ್ಪಸಿಗೆ ಈ ಮುದ್ದೇಬಿಹಾಳ ಸ್ಥಳವನ್ನು ಆಯ್ಜೆ ಮಾಡಿಕೊಂಡು ಮುದ್ದೇಬಿಹಾಳ ಹಿರೇಮಠದಲ್ಲಿ ತೋರಿದ ಮಹಿಮೆಯಿಂದ ಪಕೀರಶಿವಯೋಗಿಗಳನ್ನು ಶಿವನ ರೂಪದಲ್ಲಿ ಕಂಡ ಮುದ್ದೇಬಿಹಾಳ ಹಿರೇಮಠದವರು ತಮ್ಮನ್ನು ಶಿವಯೋಗಿಮಠದವರೆಂದು ಪಕೀರೇಶ್ವರನ್ನು ತಮ್ಮ ಮನೆಯ ದೇವರಾಗಿಸಿಕೂಂಡರು ಎಂದರು ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಮಾತನಾಡಿ ಫಕಿರೇಶ್ವರರು ಧರ್ಮ ಎಂದರೆ ಎಲ್ಲಾ ಒಂದೆ ಎಂದು ಹೇಳಿದರು ಶ್ರೀ ಫಕಿರೇಶ್ವರರು, ಮೌನೇಶ್ವರರು, ಕೂಡೆಕಲ್ ಬಸವಣ್ಣನವರು ಸಾರಿದ್ದು ಭಾವೈಕ್ಯತೆಯ ಸಾರವನ್ನು ಈ ಎಲ್ಲರ ಶರಣರ ಸಾರಿದ ಭಾವೈಕ್ಯತೆಯ ಸಾರದ ಸಂದೇಶದಿಂದ ಅಂದಿನ ಮೊಘಲರ ದಬ್ಬಾಳಿಕೆ ಮತಾಂತರ ನಿಲ್ಲಲ್ಲು ಕಾರಣವಾಯಿತು ಶರಣರ ವಾಣಿಯ ಪ್ರೇರಣೆಯಿಂದ ಶರಣರಾಗಿ ಏಕತೆ ಈ ವೇಳೆ ಕುಂಟೋಜಿ ಹಿರೇಮಠ ಸಂಸ್ಥಾನದ ಚನ್ನವೀರದೇವರು, ಇಟಗಿ ಭೂ ಕೈಲಾಸ ಹಿರೇಮಠದ ಶಾಂತವೀರ ಶಿವಾಚಾರ್ಯರು, ಮಾಜಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ದೇವಿ ಉಪಾಸಕರಾದ ಬಸವಪ್ರಭು ಹಿರೇಮಠ ಮಾತನಾಡಿ ಮುದ್ದೇಬಿಹಾಳ ಶಿರೋಳ ಸೀಮೆಯ ಶ್ರೀ ಪಕೀರೇಶ್ವರ ದೇವಾಲಯದ ಜೀರ್ಣೋದ್ಧಾರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಶಾಸಕ ನಾಡಗೌಡರು ಮಾಡಬೇಕು ಎಂದು ವಿನಂತಿಸಿದರು.ಕಾರ್ಯಕ್ರಮದಲ್ಲಿ ಕಿರಿಯ ಶ್ರೀ ಫಕಿರ ದಿಂಗಾಲೇಶ್ವರ ತುಲಾ ಭಾರವನ್ನು ಚನ್ನವೀರಸ್ವಾಮಿ ನಿಜಲಿಂಗಯ್ಯಾ ಶಿವಯೋಗಿಮಠ ತಮ್ಮ ತಂದೆ ತಾಯಿಗಳ ಸ್ಮರಣಾರ್ಥ ನಾಣ್ಯಗಳಿಂದ ಶ್ರೀಗಳ ತುಲಾ ಭಾರ ಮಾಡಿದರು. ಬೆಳಗ್ಗೆ ಪಟ್ಟಣದ ಖಾಸ್ಗತೇಶ್ವರ ಮಠದಿಂದ ದಿಂಗಾಲೇಶ್ವರ ಮಹಾಸ್ವಾಮಿಗಳ ಭವ್ಯ ಮೆರವಣಿಗೆ ಸಾರೋಟದಲ್ಲಿ ಮುದ್ದೇಬಿಹಾಳದ ಸಕಲ ಭಕ್ತಾದಿಗಳು ಮಾಡಿದರು ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭವನ್ನು ಹೊತ್ತು ಶ್ರೀಮಠದ ವರೆಗೆ ಸಾಗಿದರು. ಕಾರ್ಯಕ್ರಮದಲ್ಲಿ ಮುಂಬಯಿ ಉದ್ಯಮಿ ಶಿವಲಿಂಗಯ್ಯಾ ಶಿವಯೋಗಿಮಠ, ಎಂ.ಬಿ ನಾವದಗಿ, ಸಿದ್ದಲಿಂಗಯ್ಯ ಕಲ್ಯಾಣಮಠ,ಅಪ್ಪು ಮದರಿ,ಪ್ರಭುರಾಜ ಕಲಬುರಗಿ, ಸಿ ಪಿ ಸಜ್ಜನ,ಶಿವನಗೌಡ ಬಿರಾದಾರ, ರಾಯನಗೌಡ ಪಾಟೀಲ್, ಮಲ್ಲನಗೌಡ ಬಿರಾದಾರ,ಶಕುಂತಲಾ ಹಂಡರಗಲ್, ಗುರುಮೂರ್ತಿ ದೇವರು, ಆರ್ ಐ ಹಿರೇಮಠ, ಮಹಾಂತೇಶ ಬೂದಿಹಾಳಮಠ, ಡಾ.ಚಂದ್ರಶೇಖರ ಶಿವಯೋಗಿಮಠ, ಶಾಂತಯ್ಯಾ ಶಿವಯೋಗಿಮಠ, ಕುಮಾರಸ್ವಾಮಿ ಶಿವಯೋಗಿಮಠ,ಪರಶುರಾಮ ಪವಾರ್, ಸದು ಮಠ ಸೇರಿದಂತೆ ಮುದ್ದೇಬಿಹಾಳ ಪಟ್ಟಣದ ಎಲ್ಲಾ ಸಮಾಜದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಫಕಿರೇಶ್ವರರು ದರ್ಶನವನ್ನು ಪಡೆದರು.ಸ್ವಾಗತ ಬಂಡಯ್ಯಾ ಶಿವಯೋಗಿಮಠ ಮಾಡಿದರೆ ಡಾ.ಸೋಮಶೇಖರಯ್ಯಾ ಹಿರೇಮಠ, ಶ್ರೀಮತಿ ಚೈತನ್ಯಾ ಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
