
ಉದಯವಾಹಿನಿ ಸಿಂಧನೂರು: ಜಿಲ್ಲಾ ಪಂಚಾಯಿತಿ ರಾಯಚೂರು ತಾಲೂಕ ಪಂಚಾಯತ್ ಸಿಂಧನೂರು 02 ನೇ ಸಾಮಾನ್ಯ ಸಭೆಗೆ ಕೆಲ ಅಧಿಕಾರಿಗಳ ಗೈರುಯಾಗಿದ್ದರು.ಇನ್ನು ವಿವಿಧ ಅಧಿಕಾರಿಗಳ ಸಮಯಕ್ಕೆ ಸರಿಯಾಗಿ ಬಂದಿದ್ದರು.ಆದರೆ ತಮ್ಮ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಸಿಕಾಂತ ಶಿವಪುರಿ ಅವರ ನೇತೃತ್ವದಲ್ಲಿ 11 ಗಂಟೆಗೆ ನಡೆಯುವ ಈ ಸಾಮಾನ್ಯ ಸಭೆ. ಸುಮಾರು 2.30 ವರೆಗೆ ಗಂಟೆ ಕಾಯ್ದು ಸುಸ್ತಾದ ಅಧಿಕಾರಿಗಳು.ಆದರೆ ಇಲ್ಲಿ ಕಂಡು ಬಂದಿದ್ದು. ಬೇಕಾ ಬಿಟ್ಟಿಯಾಗಿ ಸಾಮಾನ್ಯ ಸಭೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಗುಸುಗುಸು ಮಾತನಾಡುತ್ತಿದ್ದರು.ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಾಮಾನ್ಯ ಸಭೆಗೆ 10.30 ಗಂಟೆಗೆ ಕೆಲ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಇನ್ನು ಅಧಿಕಾರಿಗಳು ಗೈರುಯಾಗಿದ್ದರು. ಸಮಯ ಸರಿಯಾಗಿ ಬೆಳಿಗ್ಗೆ 11 ಗಂಟಗೆ ಸಾಮಾನ್ಯ ಸಭೆ ಪ್ರಾರಂಭವಾಗಿದೆ.ಮಧ್ಯಾಹ್ನ 01 ಸಮಯ ಕಳೆದರು ಸಹ ಬಾರದೇ ಇರುವ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಸಿಕಾಂತ ಶಿವಪುರಿ ಅವರು. ಕಾಯ್ದು ಕುಳಿತಿರುವ ಅಧಿಕಾರಿಗಳು ಸುತ್ತಾಗಾಗಿ ಆಕಳಿಕೆ ಮೂಲಕ ನಿದ್ದೆಗೆ ಜಾರಿದೆರು. ಕೆಲವರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಹೊರಗಡೆ ಹೋಗಿ ಚಕ್ಕರ್ ಹೊಡೆದರು.ಸಭೆ 11 ಗಂಟಗೆ ಅಂತ ಹೇಳಿದ್ರೆ ಈಗ ನೋಡಿದರೆ 3 ಗಂಟೆ ಸಮಯ ಕಳೆದಿದ್ದೇವೆ ಆದರು ಸಹ ಏಕೆ ಸಭೆ ತಡವಾಗುತ್ತದೆ ಎಂದು ಪತ್ರಕರ್ತರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ಪ್ರಶ್ನೆ ಮಾಡಿದರು.ಆವರು ಇನ್ನು 30. ನಿಮಿಷದಲ್ಲಿ ಬರುತ್ತಾರೆ ಅಂತ ಹೇಳಿದ್ದಾರೆ ಅಷ್ಟೇ. ಕೊನೆಗೂ ಸಮಯ ಮೀರಿ ಬಂದು. ನಂತರ ಮಾತನಾಡಿದ ಅವರು ಸಭೆಗೆ ತಡವಾಗಿ ಬಂದಿದ್ದಕ್ಕೆ ಕ್ಷಮೆಯಿರಲಿ ನಮ್ಮ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಒಬ್ಬ ನಿಧಾನರಾಗಿದರಿಂದ ತಡವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ. ತಾಲ್ಲೂಕು ಶಿಕ್ಷಣಾಧಿಕಾರಿ ಸೋಮಶೇಖರ್ ಗೌಡ. ತಾಲೂಕು ವೈದ್ಯಾಧಿಕಾರಿ ಅಯ್ಯನಗೌಡ. ಪಿಡಬ್ಲ್ಯೂಡಿ ಜೈ.ಪಾಂಡರಂಗ ವಿದ್ಯುತ್ ಎಇಇ ಮಲ್ಲಿಕಾರ್ಜುನ ಉಪ ಜಿಲ್ಲಾ ಪಂಚಾಯಿತಿ ಎಇ ಶಿವಪ್ಪ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಇತರರು ಉಪಸ್ಥಿತರಿದ್ದರು
