ಉದಯವಾಹಿನಿ ಇಂಡಿ : ಇಂಡಿ ತಾಲೂಕಿನಲ್ಲಿ ದಿನಾಂಕ 13.09.2023 ರಂದು 220/10/33/11ಕಿ. ಇಂಡಿ ಹಾಗೂ ಆಹೇರಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿಂದ, ಸದರಿ ವಿದ್ಯುತ್ ಕೇಂದ್ರಗಳಲ್ಲಿ ಬೆಳಗ್ಗೆ 08,00 ಘಂಟೆಯಿಂದ ಸಾಯಂಕಾಲ 04.00 ಘಂಟೆಯ ವರೆಗೆ 220/10/11 ಕೆ.ವಿ ವಿದ್ಯುತ್‌ ವಿತರಣಾ ಕೇಂದ್ರ ಇಂಡಿ, ಮತ್ತು ಆಹೇರಿ ಮೇಲೆ ಬರುವ ಇಂಡಿ, ಚಡಚಣ, ಸಿಂದಗಿ ಹಾಗೂ ದೇವರ-ಹಿಪ್ಪರಗಿ ತಾಲೂಕಿನ ಎಲ್ಲಾ 110/11 ಕೆ.ವಿ ಮತ್ತು 33/11 ಕೆ.ಬ್ಲಿ ಉಪಕೇಂದಗಳಲ್ಲಿ ಸರಬರಾಜು ಆಗುವು ಎಲ್ಲ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಎಲ್ಲ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು (ವಿ) ಹೆಸ್ಕಾಂ, ಇಂಡಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!