ಉದಯವಾಹಿನಿ ಬಸವನಬಾಗೇವಾಡಿ: ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸ್ವಚ್ಚ ಭಾರತ ಮಷಿನ್ ಯೋಜನೆಯ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೋಟ್ಯಾಂತರ ರೂಗಳನ್ನು ಮೀಸಲಿಟ್ಟು ಶೌಚಾಲಯಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ನೀಡುತ್ರಿö್ತದೆ. ಪಟ್ಟಣದ ಮಸಬಿನಾಳಕ್ಕೆ ತೆರಳುವ ರಸ್ತೆಯ ಪಕ್ಕ ಹಲವು ವರ್ಷಗಳಿಂದ ಸ್ವಚ್ಚ ಭಾರತ ಮಶಿನ್ ಅಡಿಯಲ್ಲಿ ನಿರ್ಮಾಣವಾದ ಶೌಚಾಲಯದ ಕಟ್ಟಡದಲ್ಲಿರುವ ಶೌಚಾಲಯ, ಮೂತ್ರಿಗಳು ಬಳಕೆಯಿಂದ ದೂರವಾಗಿ ಅನೇಕ ವರ್ಷಗಳೇ ಕಳೆದರೂ ಪುರಸಭೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸದೇ ಹಾಳು ಬಿದ್ದಿರುವುದು ಕಂಡರೆ ಈ ಯೋಜನೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ ಎಂಬುವುದು ಕಂಡು ಬರುತ್ತಿದೆ.ಈ ಕಟ್ಟಡದಲ್ಲಿ ಹತ್ತಾರು ಮೂತ್ರಿಗಳು, ಶೌಚಾಲಯಗಳು ಹಾಗೂ ಸ್ನಾನದ ಕೊಣೆಗಳಿದ್ದು. ಮೂಗು ಮುಚ್ಚಿಕೊಂಡೇ ಹೋಗಬೇಕಾದ ಈ ಕಟ್ಟಡದಲ್ಲಿ ನೀರು ಸರಬರಾಜು ಪೈಪು ಹಾಗೂ ನೀರಿನ ತೊಟ್ಟಿ ಬಾಯಿ ತೆರೆದಿದ್ದು. ಇದರಿಂದ ಸನಿಹದಲ್ಲೇ ಸರಕಾರಿ ಪ್ರಾಥಮಿಕ ಶಾಲೆಯಿದ್ದು. ಮಕ್ಕಳು ಆಟವಾಡಲು ಹೋಗಿ ನೀರಿನ ತೊಟ್ಟಿಯಲ್ಲಿ ಬೀಳುತ್ತವೆ ಎಂಬ ಭಯ ಪಾಲಕರಿಗೆ ಕಾಡುತ್ತಿದೆ. ಕಟ್ಟಡದ ಮುಂಬಾಗ ಗಿಡಗಂಟಿಗಳು ಬೆಳೆದು ಹಾಳು ಬಿದ್ದು, ಇಲ್ಲಿಯ ವಾತಾವರಣ ಅನಾರೋಗ್ಯಕರವಾಗಿದೆ. ಇಷ್ಟಾದರೂ ಪುರಸಭೆಯ ಗಮನಕ್ಕೆ ಬರದಿರುವುದು ಯಕ್ಷ ಪ್ರಶ್ನೆಯಾಗಿದೆ. ಶೌಚಾಲಯ ಬಳಕೆಯಿಂದ ದೂರವಾದ ಕಾರಣ ಈ ಭಾಗದ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿದೆ. ಕೂಡಲೇ ಪುರಸಭೆಯ ಅಧಿಕಾರಿಗಳು ಶೌಚಾಲಯಕ್ಕೆ ಅಗತ್ಯ ನೀರು ಸರಬರಾಜು, ಸ್ವಚ್ಚತೆ ಹಾಗೂ ಸಿಬ್ಬಂದಿ ನೇಮಿಸಿದ್ದಲ್ಲಿ ಸಾರ್ವಜನಿಕರಿಗೆ ಬಳಕೆಗೆ ಹಾಗೂ ಪುರಸಭೆಗೆ ಆದಾಯ ಬರುತ್ತದೆ ಎಂಬುದು ಪುರಸಭೆಯ ಅಧಿಕಾರಿಗಳಿಗೆ ಮುಂದಾದರೂ ತಿಳಿಯಲಿ ಎಂಬುದು ಇಲ್ಲಿಯ ನಿವಾಸಿಗಳ ಆಗ್ರಹವಾಗಿದೆ.
