ಉದಯವಾಹಿನಿ ಹೊಸಕೋಟೆ :ರೈತರುಗುಣಮಟ್ಟದ ಹಾಲು ಪಡೆಯಬೇಕಾದರೆವೈಜ್ಞಾನಿಕತಂತ್ರಜ್ಞಾನಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ನಿಯಮಾನುಸಾರ ಹಾಲು ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಿದಾಗ ಮಾತ್ರರೈತರುಆರ್ಥಿಕವಾಗಿ ಸದೃಢರಾಗಬಹುದುಎಂದುಬಮೂಲ್‌ಹೊಸಕೋಟೆಶಿಬಿರದ ಉಪ ವ್ಯವಸ್ಥಾಪಕಡಾ. ಶಿವಾಜಿನಾಯಕ್ ಹೇಳಿದರು. ತಾಲೂಕಿನ ಬೈಲನರಸಾಪುರ ಗ್ರಾಪಂ ವ್ಯಾಪ್ತಿಯಹೆಡಕನಹಳ್ಳಿ ಎಂಪಿಸಿಎಸ್‌ನ 2೦22-23ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಮಳೆಗಾಲದಲ್ಲಿ ಹೆಚ್ಚಾಗಿ ಒಣ ಮೇವು ಕೊಡಬೇಕು.ಗುಣಮಟ್ಟದ ಹಾಲು ಪಡೆಯಲು ರಾಸುಗಳಿಗೆ ಪ್ರೋಟಿನ್, ಖನಿಜಾಂಶಭರಿತಗೋಧಾರ್ ಶಕ್ತಿ ಅಹಾರ ನಿಗದಿತವಾಗಿ ನೀಡಬೇಕು.ವರ್ಷಕ್ಕೆರಡು ಬಾರಿ ಜಂತುಹುಳ ಔಷಧಿ ನೀಡಬೇಕು.ಕೆಚ್ಚಲು ಬಾವು, ಕಾಲುಬಾಯಿ ರೋಗ ಬಾರದಂತೆಜಾಗ್ರತೆ ವಹಿಸಬೇಕೆಂದರು.ಬಮೂಲ್‌ನಮಾರ್ಗ ವಿಸ್ತಾರಣಾಧಿಕಾರಿಟಿ.ಎಂ.ಆನ0ದ್ ಮಾತನಾಡಿ, 2022-23ನೇ ಸಾಲಿನಲ್ಲಿ8.72 ಲಕ್ಷರೂ.ವ್ಯಾಪಾರ ಲಾಭ ಗಳಿಸಿ, ಸಂಘಕ್ಕೆ 5.23 ಲಕ್ಷರೂ.ನಿವ್ವಳ ಲಾಭ ಬಂದಿದೆ.ಉತ್ಪಾದಕರಿಗೆ ಶೇ.3.78ರಷ್ಟು ಬೋನಸ್ ವಿತರಿಸಲಾಗುವುದು.ಉತ್ಪಾದಕರೆಲ್ಲರೂಗುಣಮಟ್ಟದ ಹಾಲು ಉತ್ಪಾದಿಸಿಅಧಿಕ ಲಾಭ ಗಳಿಸಬೇಕು ಎಂದರು. ಕಾರ್ಯಕ್ರಮದಲ್ಲಿನೆಲವಾಗಿಲು ಎಸ್‌ಎಫ್‌ಸಿಎಸ್ ಅಧ್ಯಕ್ಷಎಸ್. ಮಂಜುನಾಥ್,ಮಾಜಿಅಧ್ಯಕ್ಷರಾದಎನ್. ಚಂದ್ರಪ್ಪ, ಎಂ.ರಾಜಣ್ಣ, ಹೆಚ್.ಎಸ್. ನಾರಾಯಣಸ್ವಾಮಿ, ಗ್ರಾಪಂ. ಸದಸ್ಯಎನ್.ಡಿ.ಬೈರೇಗೌಡ, ಎಂಪಿಸಿಎಸ್ ಅಧ್ಯಕ್ಷಹೆಚ್.ಜಿ.ರಾಜೇಶ್, ಉಪಾಧ್ಯಕ್ಷಮಂಜುನಾಥ್‌ಹೆಚ್.ಸಿ, ನಿರ್ದೇಶಕರಾದಹೆಚ್.ಎನ್.ಬೈರೇಗೌಡ, ಶ್ರೀನಿವಾಸ್, ಹೆಚ್.ಸಿ.ಬೈರೇಗೌಡ, ಮುನಿರಾಜು, ಸಂಗೀತಾ, ವೆಂಕಟಲಕ್ಷö್ಮಮ್ಮ, ಸುಜಾತ, ಶಾಮಲಮ್ಮ, ಹೆಚ್.ಎ.ಪ್ರಕಾಶ್, ಮುಖಂಡರಾದವೆAಕಟಸ್ವಾಮಪ್ಪ, ಸಂಘದಮುಖ್ಯಕಾರ್ಯನಿರ್ವಾಹಕಹೆಚ್.ಎಸ್.ದಿವಾಕರ್, ಸಹಾಯಕ ಬಾಲಕೃಷ್ಣ ಹಾಗೂ ಹೈನುಗಾರರು ಹಾಜರಿದ್ದರು.
