
ಉದಯವಾಹಿನಿ,ಚಿಂಚೋಳಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ ಪೋಟೋವಿಟ್ಟು ಪೂಜಿಸಿ ರಾಷ್ಟ್ರಧ್ವಜಾರೋಹಣ ನೇರವೇರಿಸುವಾಗ ಧ್ವಜದಲ್ಲಿ ಯಾವುದೇ ನ್ಯೂನತೆ ಇರದೆ ನೂತನವಾಗಿ ಧ್ವಜ ಇರಬೇಕು ಹಾಗೂ ಹಾರಿಸುವಾಗ ಯಾವುದೇ ತಪ್ಪುಗಳು ಆಗದಂತೆ ತಾಲ್ಲೂಕಾ ಮಟ್ಟದ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಗ್ರೇಡ್2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ಹೇಳಿದರು. ಪಟ್ಟಣದ ಚಂದಾಪೂರದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಮುಂಬರುವ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ ವಿಶ್ವಕರ್ಮ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು,ಸರ್ಕಾರಿಯ ಎಲ್ಲಾ ಕಛೇರಿಗಳಲ್ಲಿ ದೀಪಾಲಂಕಾರ ಮಾಡಿ ಬೆಳಿಗ್ಗೆ 8.30ಕ್ಕೆ ಕ.ಕ ವಿಮೋಚನಾ ಹಾಗೂ ವಿಶ್ವಕರ್ಮ ಜಯಂತಿ ತಪ್ಪದೆ ಆಚರಿಸಿ 9ಗಂಟೆಗೆ ತಾಲ್ಲೂಕು ಆಡಳಿತ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಎಲ್ಲಾ ಅಧಿಕಾರಿಗಳು ಆಗಮಿಸಿಬೇಕು ಎಂದರು.
ಸಭೆಯಲ್ಲಿ ಆಗಮಿಸಿದ ಮುಖಂಡರು 371 (ಜೆ) ರೂವಾರಿ ಮಾಜಿ ಸಚಿವರು ದಿ.ವೈಜನಾಥ ಪಾಟೀಲ್ ಸ್ಮಾರಕಕ್ಕೆ ತಾಲೂಕು ಆಡಳಿತದಿಂದ ವಿಶೇಷ ಪೂಜೆ ಸಲ್ಲಿಸಬೇಕು,ಹಾಗೂ ಸರ್ಕಾರದಿಂದ ಪುತ್ಹಳಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಪ್ರಾಥಮಿಕ,ಪ್ರೌಢಶಾಲಾ ಮಕ್ಕಳಿಂದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಂದ್ದು ಪ್ರಬಂಧ ಸ್ಪರ್ಧೆ ಹಾಗೂ ಸಂಸ್ಕೃತಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು,ಹತ್ತನೆಯ ತರಗತಿಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಸನ್ಮಾನಿಸಬೇಕು ಎಂದು ಸಭೆಯಲ್ಲಿ ಮುಖಂಡರು ಹೇಳಿದರು. ಈ ಸಂದರ್ಭದಲ್ಲಿ ತಾ.ಪಂ ಇಓ ಶಂಕರ ರಾಠೋಡ,ಟಿಹೆಚ್ಓ ಡಾ.ಮಹ್ಮುದ್ ಗಫಾರ್,ಸಮಾಜ ಕಲ್ಯಾಣ ಜನ್ನಾತ್ ಬೀ,ಜೇಸ್ಕಾಂ ಸುರೇಶ ಬಾಬು,ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ,ಮಲ್ಲಿಕಾರ್ಜುನ ಪಾಲಾಮೋರ್,ಜಗದೀಶ್ಚಂದ್ರ ವಿಶ್ವಕರ್ಮ,ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ,ಮಂಜೂರ ಅಹೇಮದ್,ಪ್ರಭು ಐನೋಳ್ಳಿ,ವಿಜಯಕುಮಾರ,ಚಂದ್ರಕಾಂತ,ಸೇ ರಿದಂತೆ ಅನೇಕ ಗಣ್ಯರು ಇದ್ದರು.
