
ಉದಯವಾಹಿನಿ ಯಾದಗಿರಿ : ಯಾದಗಿರಿ ನಗರದಲ್ಲಿ ಚಿಂದಿ ಆಯುವ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಅವರು ತಿಳಿಸಿದ್ದಾರೆ. ಯಾದಗಿರಿ ನಗರದ ಚಿತ್ತಾಪೂರ ರಸ್ತೆಯಲ್ಲಿ ಮೂರು ಮಕ್ಕಳು ಶಾಲೆ ಬಿಟ್ಟು ಚಿಂದಿ, ಬಾಟಲ್ ಆಯುತ್ತಿದ್ದಾರೆ ಎಂಬ ದೂರಿನ ಮೇರೆಗೆ ಮಕ್ಕಳನ್ನು ರಕ್ಷಿಸಲು ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ವೀರನಗೌಡ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಪ್ರೇಮಮೂರ್ತಿ.ಕೆ ಅವರು ನಿರ್ದೇಶನದಂತೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ, ಮಕ್ಕಳ ರಕ್ಷಣಾಧಿಕಾರಿ (ಅಸಾಂಸ್ಥಿಕ) ದಶರಥ ನಾಯಕ ಅವರ ನೇತೃತ್ವದಲ್ಲಿ ಮೂರು ಮಕ್ಕಳನ್ನು ರಕ್ಷಣೆ ಮಾಡಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು. ಪ್ರಸ್ತುತ ಈ ಮಕ್ಕಳನ್ನು ಸರಕಾರಿ ಬಾಲಕರ ಬಾಲ ಮಂದಿರಕ್ಕೆ ಒಪ್ಪಿಸಲಾಗಿರುತ್ತದೆ. ಈ ರಕ್ಷಣಾ ತಂಡದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ ಶ್ರೀ ತ್ರಿಶೂಲ.ಎನ್, ಕ್ಷೇತ್ರ ಕಾರ್ಯಕರ್ತ ಪರ್ವತರಡ್ಡಿ, ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ನಿರ್ದೇಶಕರಾದ ಶ್ರೀ ರೀಯಾಜ್ ಪಟೇಲ್, ಮಕ್ಕಳ ಸಹಾಯವಾಣಿ 1098, ಜಿಲ್ಲಾ ಸಂಯೋಜಕರಾದ ಶ್ರೀ ಶರಭಯ್ಯ ಕಲಾಲ್ ಹಾಗೂ ಪೊಲೀಸ್ ಇಲಾಖೆಯ 112 ಸಿಬ್ಬಂದಿಯ ಅವರು ಭಾಗವಹಿಸಿದ್ದರು.
