
ಉದಯವಾಹಿನಿ ಸಿಂಧನೂರು: ತಾಲೂಕಿನ 30 ಗ್ರಾಮ ಪಂಚಾಯತಿಗೆ 2023-24 ಪ್ರಸ್ತುತ ವರ್ಷದ ನಾವು ತಯಾರಿಸಿದ ನರೇಗಾ ಕಾಮಗಾರಿಗಳ ಕ್ರಿಯಾ ಯೋಜನೆಗೆ ಸಿ.ಇ.ಓ.ರವ ಅನುಮೋದನೆ ಕೊಟ್ಟಿದ್ದು. ಸಮುದಾಯ ಆಧಾರಿತ ಕಾಮಗಾರಿಗಳು ಇಲ್ಲಿಯವರೆಗೆ ಯಾವ ಪಂಚಾಯತಿಗಳಲ್ಲಿಯೂ ಪ್ರಾರಂಭವಾಗಿರುವುದಿಲ್ಲ ಎಂದು ತಾಲೂಕು ಗ್ರಾಮ ಪಂಚಾಯತಿ ಸದಸ್ಯರು ಒಕ್ಕೂಟ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು ನಂತರ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಮಹಾಂತೇಶ ಹಿರೇಗೌಡ ಪಿ.ಡಿ.ಓ ಗಳು ಮತ್ತು ನರೇಗಾ ಜೆಇಗಳನ್ನು ಕೇಳಿದರೆ ತಾಲೂಕ ಇ.ಓ ಮತ್ತು ನರೇಗಾ ಎ.ಡಿ ರವರು ಇನ್ನೂ ಸ್ವಲ್ಪ ದಿನಗಳು ಕಾಮಗಾರಿಗಳನ್ನು ಪ್ರಾರಂಬೀಸಬೇಡಿ ಎಂದು ಸೂಚಿಸಿದ್ದಾರೆ.ಎಂದು ತಿಳಿಸುತ್ತಿದ್ದಾರೆ.ಆದ್ದರಿಂದ ನಮ್ಮಗಳ ಪಂಚಾಯತಿ ವ್ಯಾಪ್ತಿಯಲ್ಲಿನ ಗ್ರಾಮಗಳ ಮಳೆಯಿಂದ ಮತ್ತು ಕೆಲ ಸಮಸ್ಯೆಗಳಿಂದ ಓಣಿಗಳಲ್ಲಿ ರಸ್ತೆಗಳು ಹಾಳಾಗಿದ್ದು ಹಾಗೂ ಇತರೆ ಕಾಮಗಾರಿಗಳ ನಮ್ಮಗಳ ವಾರ್ಡಿನ ಜನರು ಕ್ರಿಯಾ ಯೋಜನೆಯಲ್ಲಿ ಇದ್ದ ಕಾಮಗಾರಿಗಳನ್ನು ಬೇಗ ಮಾಡಿಕೊಡಿ ಎಂದ ಪ್ರತಿನಿತ್ಯ ಮೌಖಿಕವಾಗಿ ದೂರು ಸಲ್ಲಿಸುತ್ತಿದ್ದಾರೆ. ಎಂದು ಹೇಳಿದರು ಆದ್ದರಿಂದ ನರೇಗಾ ಕಾಮಗಾರಿಗಳು ತಕ್ಷಣವೇ ಪ್ರಾರಂಭಿಸುವಂತೆ ತಾವು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು, ಮುಂದುವರೆದು ಪಂಚಾಯತಿಗಳು ಪಿ.ಡಿ.ಓಗ ಕಾರ್ಯದರ್ಶಿಗಳು ಸರಕಾರದ ಆದೇಶ ಮತ್ತು ಸುತ್ತೋಲೆಗಳನ್ನು ತಿರಸ್ಕರಿಸಿ ಕೆಲಸ ಮಾಡುತ್ತಿದ್ದಾರೆ ಎಂ ದೂರು ನಮ್ಮ ಒಕ್ಕೂಟಕ್ಕೆ ಬಂದಿರುತ್ತೇವೆ. ಹಾಗೂ ಪಂಚಾಯತಿಗಳ ಸದಸ್ಯರು ಪಂಚಾಯತಿಯಲ್ಲಿ ಇರುವಂತ ಮಾಹಿತಿ ಕೇಳಿದರೆ ಕೊಡದೇ ಸುಮ್ಮನೆ ಕಾಲಹರಣ ಮಾಡಿ ದಾಖಲೆಗಳನ್ನು ಕೊಡದೇ ಇರುವುದ ಗಂಭೀರ ಆರೋಪವಾಗಿದೆ. ಇನ್ನೂ ಮುಂದೆ ಇಂತಹ ಆರೋಪಗಳು ಬಂದಲ್ಲಿ ತಕ್ಷಣ ಸಂಬಂಧಿಸಿದವ ಮೇಲೆ ಕ್ರಮ ಕೈಗೊಂಡು ದಿನಾಂಕ : 15-06-2022ರಂದು ರಾಯಚೂರು ಜಿಲ್ಲಾ ಪಂಚಾಯತಿ ಸಿ.ಇ. ರವರು ಹೊರಡಿಸಿದ ಸುತ್ತೋಲೆಯಲ್ಲಿ ನೀಡಿದ ನಿರ್ದೇಶನಗಳಂತೆ ಕರ್ತವ್ಯ ನಿರ್ವಹಿಸಲು ಕಟ್ಟುನಿಟ್ಟಾ ಸೂಚಿಸಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟ ತಮಗೆ ತಿಳಿಸಬಯಸುತ್ತದೆ ಎಂದು ಹೇಳಿದರು ಈ ಸಂ. ಒಕ್ಕೂಟದ ಕಾರ್ಯದರ್ಶಿ ರವಿ ಗೌಡ ಶ್ರೀಧರ್ ಗೌಡ ಹೊಸಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು. ಅಶೋಕ ಗೊರೇಬಾಳ. ನಿರುಪಾದಿ ಸಸಾಲಮರಿ ಸೇರಿದಂತೆ ಇತರರು ಉಪಸ್ಥಿತರಿದ್ದರು
