ಉದಯವಾಹಿನಿ ಮಾಲೂರು : ಕಸಮುಕ್ತ ಮಾಲೂರು ಪಟ್ಟಣವನ್ನಾಗಿಸಲು ಪ್ರತಿಯೊಬ್ಬ ನಾಗರಿಕರುಕಸವನ್ನುಎಲ್ಲೆಂದರಲ್ಲಿ ಹಾಕದೆ ಪುರಸಭೆಯ ಆಟೋಟಿಪ್ಪರ್ ಗಳಿಗೆ ಹಾಕುವ ಮೂಲಕ ಪಟ್ಟಣದ ಸ್ವಚ್ಛತೆಕಾಪಾಡಲು ಪುರಸಭೆಗೆ ಸಹಕರಿಸುವಂತೆ ಮುಖ್ಯಅಧಿಕಾರಿ ಎಂ .ಪ್ರದೀಪ್ ಹೇಳಿದರು. ಪಟ್ಟಣದ ಅರಣ್ಯ ಇಲಾಖೆ ಹಾಗೂ ಸರ್ಕಾರಿ ಬಾಲಕಿಯರ ಕಾಲೇಜಿನ ಹಿಂಭಾಗದಲ್ಲಿರುವ ರಸ್ತೆಯನ್ನು ಕಸಮುಕ್ತ ರಸ್ತೆಯನ್ನಾಗಿಸಲು ಸ್ವಚ್ಛತಾ ಲೀಗ ಅಂಗವಾಗಿ ಕಸ ಹಾಕುವ ಜಾಗ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪಟ್ಟಣದ ನಾಗರಿಕರುಕಸವನ್ನುಎಲ್ಲೆಂದರಲ್ಲಿ ಹಾಕುವುದರಿಂದ ಪಟ್ಟಣದ ಸ್ವಚ್ಛತೆ ಹಾಳಾಗುತ್ತದೆ ಪಟ್ಟಣದ ಸ್ವಚ್ಛತೆಯ ಹಿತದೃಷ್ಟಿಯಿಂದ ನಾಗರಿಕರುಕಸವನ್ನುಎಲ್ಲೆಂದರಲ್ಲಿ ಹಾಕದೆತಮ್ಮ ಮನೆಗಳ ಬಳಿ ಬರುವ ಪುರಸಭೆಯ ಆಟೋಟಿಪ್ಪರ್ ಗಳಿಗೆ ತಮ್ಮ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ಹಸಿ ಕಸ ಹಾಗೂ ಒಣಕಸವನ್ನಾಗಿ ವಿಂಗಡಿಸಿ ಆಟೋಟಿಪ್ಪರ್ ಗಳಿಗೆ ನೀಡಬೇಕುತಾವು ನೀಡುವ ಹಸಿ ಕಸ ಹಾಗೂ ಒಣ ಕಸವನ್ನು ಹಸಿ ಕಸವನ್ನುಗೊಬ್ಬರವನ್ನಾಗಿ ಒಣ ಕಸವನ್ನು ಪುನರ್ ಬಳಕೆಗೆ ಕಳುಹಿಸಲಾಗುವುದು ಪುಟ್ಬಾತ್ ಅಂಗಡಿಗಳ ವರ್ತಕರು ಬೆಳಗ್ಗೆ ಸಂಜೆತಮ್ಮಲ್ಲಿ ಸಂಗ್ರಹವಾಗುವ ಕಸವನ್ನುರಸ್ತೆಗೆ ಹಾಕದೆ ಪುರಸಭೆಯಿಂದ ಬೆಳಗ್ಗೆ ಸಂಜೆ ಬರುವಆಟೋಟಿಪ್ಪರ್ ಗಳಿಗೆ ಹಾಕುವ ಮೂಲಕ ಪಟ್ಟಣದ ಸ್ವಚ್ಛತೆಕಾಪಾಡಬೇಕುಎಂದಅವರು ಸ್ವಚ್ಛತೆಯನ್ನು ಕೈಗೊಳ್ಳುವುದು ಪುರಸಭೆ ಮಾತ್ರವಲ್ಲ ಸಾರ್ವಜನಿಕರು ಸಹ ಪುರಸಭೆಯೊಂದಿಗೆ ಕೈಜೋಡಿಸಿ ಸ್ವಚ್ಛತೆಗೆ ಸಹಕರಿಸುವಂತೆ ಹೇಳಿದರು. ಪರಿಸರಅಭಿಯಂತರ ಶಾಲಿನಿ ಮಾತನಾಡಿ, ಪೌರಾಡಳಿತ ನಿರ್ದೇಶನಾಲಯಆದೇಶದ ಮೇರೆಗೆ ಸ್ವಚ್ಛತಾ ಲೀಗ್ ಅಂಗವಾಗಿ ಪಟ್ಟಣದಲ್ಲಿ ಸ್ವಚ್ಛತೆಯನ್ನುಕಾಪಾಡಲುತಮ್ಮ ಮನೆಗಳಲ್ಲಿ ಸಂಗ್ರಹವಾಗುವಕಸವನ್ನುರಸ್ತೆಗೆ ಸುರಿಯದೆ ಪುರಸಭೆಯಿಂದ ಬರುವಆಟೋಟಿಪ್ಪರ್ ಗಳಿಗೆ ಕಸವನ್ನುಒಣಕಸ ಹಾಗೂ ಹಸಿ ಕಸ ವಿಂಗಡಿಸಿ ಹಾಕಬೇಕು ಎಂದರು. ಈ ಸಂದರ್ಭದಲ್ಲಿಆರೋಗ್ಯ ಶಾಖೆಯ ಹಿರಿಯ ನಿರೀಕ್ಷಕ ಶ್ರೀನಿವಾಸ್, ಆರೋಗ್ಯಧಿಕಾರಿರಾಜಣ್ಣ, ಸಹಾಯಕಆರೋಗ್ಯಅಧಿಕಾರಿ ವೆಂಕಟೇಶ್, ಪುರಸಭೆಯ ಪೌರಕಾರ್ಮಿಕರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!