
ಉದಯವಾಹಿನಿ ದೇವರಹಿಪ್ಪರಗಿ: ತಾಲೂಕಿನ ಕಡ್ಲೆವಾಡ ಹಾಗೂ ಚಿಕ್ಕರೂಗಿ ಕೆರೆಗಳಿಗೆ ಕಾಲುವೆ ಮೂಲಕ ನೀರು ತುಂಬಿಸುವಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರದಂದು ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಈ ಬಾರಿ ಮುಂಗಾರು ವಿಳಂಬದಿಂದ ಹಾಗೂ ಕಾಲುವೆಗಳ ಮೂಲಕ ನೀರು ಪೂರೈಕೆ ಮಾಡದ ಕಾರಣ,ಕೆರೆಗೆ ನೀರು ತುಂಬಿಸಬೇಕಾದ ಅನಿವಾರ್ಯತೆ ಇದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಜನ ಜಾನುವಾರುಗಳ ಹಿತದೃಷ್ಟಿಯಿಂದ ಕಾಲುವೆ ಮೂಲಕ ನೀರು ಪೂರೈಕೆ ಮಾಡಿ ಕೆರೆಗಳು ತುಂಬಿಸಬೇಕು ಇಲ್ಲದಿದ್ದರೆ ದಿ.15-09-2023 ರಂದು ತಹಶೀಲ್ದಾರ್ ಕಚೇರಿಯ ಮುಂದೆ ವಿವಿಧ ಸಂಘಟನೆಗಳು ಕೂಡಿಕೊಂಡು ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಇದೇ ಸಂದರ್ಭದಲ್ಲಿ ಸದಯ್ಯನ ಮಠದ ಷ.ಬ್ರ.ಶ್ರೀ ವೀರಗಂಗಾಧರ ಶಿವಾಚಾರ್ಯರು, ರೈತ ಸಂಘದ ತಾಲೂಕು ಅಧ್ಯಕ್ಷ ಅಜೀಜ್ ಯಲಗಾರ.ಎಸ್.ಜೆ.ರೂಗಿ, ರವಿ ಚೌದರಿ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಸುತ್ತಮುತ್ತಲಿನ ರೈತರು ಉಪಸ್ಥಿತರಿದ್ದರು.
ಆಲಮಟ್ಟಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದ ಕಾರಣ ಕಾಲುವೆಗಳಿಗೆ ನೀರು ಹರಿಸಲಾಗಿದೆ ಹೊರತು ಕೆರೆ ತುಂಬುವ ಯೋಜನೆಗೆ ನೀರು ಹರಿಸಿಲ್ಲ. ವಾರ ಬಂದಿಯಲ್ಲಿ 3ನೇ ಹಂತದ ಕೆರೆ ತುಂಬ ಯೋಜನೆಯ ಬಗ್ಗೆ ನೀರು ನಿಗದಿಯಾಗಿಲ್ಲ. ಕಳೆದ ಬಾರಿ ಆಣೆಕಟ್ಟಿನಲ್ಲಿ ನೀರಿನ ಒಳಹರಿವು ಹೆಚ್ಚಾದ ಕಾರಣ 3 ಯಂತ್ರದ ಮೂಲಕ ನೀರು ಹರಿಸಲಾಗಿತ್ತು. ಕಡ್ಲೆವಾಡ ಹಾಗೂ ಚಿಕ್ಕರೂಗಿ ಕೆರೆಗಳಿಗೆ ನೀರು ಬರಬೇಕಾದರೆ 3ಯಂತ್ರಗಳು ಪ್ರಾರಂಭಿಸಬೇಕು. ಈ ಬಾರಿ ಕೆರೆ ತುಂಬುವ ಸಲುವಾಗಿ ನೀರು ಬಿಡುತ್ತಿಲ್ಲ ಎಂದು ಆಲಮಟ್ಟಿಯ ಅಧಿಕಾರಿಗಳೇ ತಿಳಿಸಿದ್ದಾರೆ.
