ಉದಯವಾಹಿನಿ ದೇವದುರ್ಗ: ಸಿರಿಧಾನ್ಯ ಆಹಾರ ಸೇವನೆಯಿಂದ ಮಹಿಳೆಯರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ನಿವಾರಣೆ ಮಾಡಬಹುದು. ಮಿಲೆಟ್ಸ್ನಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅಬ್ಬುಮೊಹಲ್ಲಾ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶಮಶಾದ್ ಬೇಗಂ ಹೇಳಿದರು.
ಪಟ್ಟಣದ ಪಟೇಲ್ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟಿçÃಕ ಪೌಷ್ಟಿಕ ಆಹಾರ ಸಪ್ತಾಹ ಮಾಸಾಚರಣೆ-2023 ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಸಿರಿಧಾನ್ಯ ಆಹಾರ ಸೇವನೆಯಿಂದ ರೋಗ ದೂರ ಮಾಡಬಹುದಾಗಿದೆ. ಅಲ್ಲದೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಮಹಿಳೆಯರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ಹಾಗೂ ಕಡಿಮೆ ತೂಕದ ರೋಗವನ್ನು ನಿವಾರಣೆ ಮಾಡುವ ಜತೆಗೆ ಜಾಗೃತಿ ಮೂಡಿಸಲು ರಾಷ್ಟಿçÃಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ತಿಂಗಳ ಪೂರ್ತಿ ಎಲ್ಲ ಅಂಗನವಾಡಿ ಕೇಂದ್ರದಲ್ಲಿ ಸಪ್ತಾಹ ಮಾಸಾಚರಣೆ ಆಯೋಜಿಸಿ ಮಹಿಳೆಯರು ಹಾಗೂ ಮಕ್ಕಳಿಗೆ ಪೌಷ್ಟಿಕ ನೀಡುವ ಮೂಲಕ ಆರೋಗ್ಯ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಕಾರ್ಯಕರ್ತೆ ಸುಜಾತ ನಾಯಕ ಮಾತನಾಡಿ, ಪೃಕೃತಿ ಕೂಡ ವಾತಾವರಣಕ್ಕೆ ತಕ್ಕಂತೆ ತನ್ನಷ್ಟಕ್ಕೆ ತಾನು ವ್ಯತ್ಯಾಸ ಮಾಡಿಕೊಂಡು ಆಹಾರಗಳನ್ನು ಕೊಡುತ್ತದೆ. ಅದರಂತೆ ಮನುಷ್ಯ ಕಡಿಮೆ ಬೆಲೆಯ ಹಣ್ಣು ತರಕಾರಿಗಳನ್ನು ಸಂದರ್ಭಕ್ಕೆ ತಕ್ಕಂತೆ ಸೇವನೆ ಮಾಡಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರಮುಖವಾಗಿ ನವಜಾತ ಶಿಶುಗಳು, ಗರ್ಭಿಣಿ ಸ್ತ್ರೀಯರಲ್ಲಿ ಅಪೌಷ್ಠಿಕತೆಯಿಂದ ಸಾವನ್ನಪ್ಪುವ ಸಂಖ್ಯೆ ಹೆಚ್ಚಾದ ಹೆನ್ನೆಲೆ ಸರ್ಕಾರಗಳು ಪೌಷ್ಠಿಕ ಆಹಾರದ  ಸಪ್ತಾಹ ಕಾರ್ಯಕ್ರಮ ರೂಪಿಸಿ ಅಂಗನವಾಡಿ,  ಕಾರ್ಯಕರ್ತರ ಮೂಲಕ.ಕೆಲಸ ಮಾಡುತ್ತಿದೆ. ಎಂದರು
ಅAಗನವಾಡಿ ಕಾರ್ಯಕರ್ತೆಯರಾದ ರತ್ನಾ, ಶಾಂತಮ್ಮ, ಅನುಸೂಯ, ನಾಗಮಣಿ, ಸುಜಾತ ನಾಯಕ, ರತ್ನಾಬಾಯಿ, ರೇಣುಕಾ, ಕೌಸರ್ ಬೇಗಂ,  ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!