
ಉದಯವಾಹಿನಿ ಶಿಡ್ಲಘಟ್ಟ: ಆ.24 ರಂದು ನಡೆದ ದಲಿತ ಮುಖಂಡ ನಾರಾಯಣಸ್ವಾಮಿಯ ಅಮಾನುಷ ಕೊಲೆಯನ್ನು ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಮೇಲೂರು ಮಂಜುನಾಥ್ ಹೇಳಿದರು.ನಗರದ ಪ್ರವಾಸ ಮಂದಿರದಲ್ಲಿ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸೆ 15 ರಂದು ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ರೇಷ್ಮೆ ವಿಸ್ತೀರ್ಣಾಧಿಕಾರಿಗಳ ಕಛೇರಿಯಿಂದ ನಗರದ ಪ್ರಮುಖ ರಸ್ತೆಯ ಮೂಲಕ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ತಾಲ್ಲೂಕು ಕಛೇರಿ ಮುಂಭಾಗ ಬಹಿರಂಗ ಸಭೆಯನ್ನು ಆಯೋಜನೆ ಮಾಡಲಾಗುವುದು ಎಂದರು.
ಬೈರಗಾನಹಳ್ಳಿಯಲ್ಲಿ ನಡೆದ ಕೊಲೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ಮಾಡಿ ಸಮಾಜದಲ್ಲಿ ಹೋರಾಟಗಾರರನ್ನು ಭಯಭೀತರನ್ನಾಗಿ ಸಿದೆ.ಈ ಕೊಲೆ ಸಂಸ್ಕೃತಿಯನ್ನು, ಎಲ್ಲಾ ವಿದ್ಯಾವಂತ ಯುವಕರು,ಪ್ರಗತಿ ಪರ ಚಿಂತಕರು, ಹಲವಾರು ಸಂಘಟನೆಗಲು, ಮುಖಂಡರನ್ನು ಭಯಪಿಸಿದೆ. ಈ ಹೋರಾಟದಲ್ಲಿ ಎಲ್ಲಾ ಸಂಘಟನೆಗಳು ಪಾಲ್ಗೊಂಡು ಮುಂದೆ ಈ ರೀತಿ ಘಟನೆಗಳು ಮರುಕಳಿಸದಂತೆ ತಡೆಯುವ ಜವಾಬ್ದಾರಿ ಮಾಡೋಣ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ಟಿ ಎ ಚಲಪತಿ ದಿನಾಂಕ 24-09-2023 ರಂದು ಬೈರಗಾನಹಳ್ಳಿಯ ದಲಿತ ಮುಖಂಡ ನಾರಾಯಣಸ್ವಾಮಿಯ ಕೊಲೆ ಆಗಿರುತ್ತದೆ. ಈ ಕೊಲೆಯನ್ನು ಖಂಡಿಸಿ ದಲಿತ ಸಂಘಟನೆಗಳು ಮಾತ್ರ ಮಾತನಾಡುತ್ತಿದ್ದಾರೆ. ರಾಜಕೀಯದಲ್ಲಿ ಇರುವ ನಮ್ಮ ಕ್ಷೇತ್ರದ ಶಾಸಕರಾಗಲಿ ಅಥವಾ ಲೋಕಸಭಾ ಸದಸ್ಯ ಮುನಿಸ್ವಾಮಿ ಮತ್ತು ಉಸ್ತುವಾರಿ ಸಚಿವರು ಕೊಲೆಯಾದ ನೊಂದ ಕುಟುಂಬವನ್ನು ಸೌಜನ್ಯಕ್ಕಾದರೂ ಅವರ ಮನೆಗೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಆದ್ದರಿಂದ ಸೆ.15 ಶುಕ್ರವಾರದಂದು ಶಿಡ್ಲಘಟ್ಟ ನಗರದಲ್ಲಿ ಬೃಹತ್ ಪ್ರತಿಭಟನೆಯ ಮೂಲಕ ಹೋರಾಟ ಹಮ್ಮಿಕೊಳ್ಳಲಾಗಿದೆ ಎಲ್ಲಾ ಸಂಘ ಸಂಸ್ಥೆಗಳು ನಮ್ಮ ಜೊತೆ ಕೈ ಜೋಡಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಲಿತ ಮುಖಂಡ ಅರುಣ್ ಕುಮಾರ್ ಮಾತನಾಡಿ ನಿಷ್ಕಲ್ಮಶ ಹೋರಾಟ ಮಾಡುವವರನ್ನು ಟಾರ್ಗೆಟ್ ಮಾಡಲು ಇದರದೇ ಆದ ಒಂದು ಜಾಲ ಹುಟ್ಟಿಕೊಂಡಿದೆ ಎಂದು ಕೆಲವು ಕಡೆಯಿಂದ ಮಾಹಿತಿ ಬಂದಿದೆ. ಆದ್ದರಿಂದ ಗುಪ್ತಚರ ಇಲಾಖೆ ಅಧಿಕಾರಿಗಳು ಅವರು ಮೇಲೆ ನಿಗಾ ಇರಿಸಬೇಕು. ಈ ಘಟನೆಗೆ ಸಂಬಂಧಿಸಿದಂತೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಎಲ್ಲೋ ಒಂದು ಕಡೆ ದಲಿತ ಸಮುದಾಯವನ್ನು ತುಳಿಯ ಬೇಕಂತಲೇ ಅಧಿಕಾರಿಗಳು ಬರುತ್ತಿದ್ದಾರೆ ಎಂಬಂತಿದೆ. ಅಧಿಕಾರಿಗಳು ಹೊರಗಡೆ ಬಂದಾಗ ಸಂವಿಧಾನ ಆಶಯದಂತೆ ಕೆಲಸ ಮಾಡುತ್ತೇವೆ ಅನ್ನುತ್ತಾರೆ ಹೊಳಗಡೆ ಸಂವಿಧಾನದ ವಿರೋಧಿ ಚಟುವಟಿಕೆಗಳು ಮಾಡುತ್ತಾರೆ ಎಂದು ನೇರವಾಗಿ ಪೋಲಿಸ್ ಅಧಿಕಾರಿಗಳಿಗೆ ಚಾಟಿ ಬೀಸಿದರು.
ರೇಷ್ಮೆ ನಗರಕ್ಕೆ ಪ್ರಸಿದ್ಧವಾದ ಇತಿಹಾಸವಿದೆ ಅದನ್ನು ಅಳಿಸುವಂತ ಕೆಲಸ ಯಾರಿಂದಲೂ ಆಗಬಾರದು. ಇತ್ತೀಚಿನ ದಿನಗಳಲ್ಲಿ ಕೊಲೆ ಸಂಸ್ಕೃತಿ ನಮ್ಮ ತಾಲೂಕಿಗೆ ಒಂದು ಕಪ್ಪು ಚುಕ್ಕೆ. ಯಾವುದೇ ಕೊಲೆ ಆದಾಗ ಯಾರು ಸಹ ಪ್ರತಿಕ್ರಿಯೆ ಕೊಡುವುದಿಲ್ಲ ಆದರೆ ಸಮಾಜಕ್ಕಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವಂತಹವರು ಇಂತಹ ಘಟನೆಗಳಿಂದ ಅದರ ವಿರುದ್ಧ ಧ್ವನಿಯಾಗಬೇಕಾದಾಗ ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಮ್ಮೆಲ್ಲರ ಕರ್ತವ್ಯ ಎಂದು ದಲಿತ ಮುಖಂಡ ವೆಂಕಟೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರು ಇದ್ದರು.
