
ಉದಯವಾಹಿನಿ ಕುಶಾಲನಗರ : ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ನೂರು ದಿನಗಳು ಸಾಗಿದೆ ಅಭಿವೃದ್ಧಿ ಮಾತ್ರ ಶೂನ್ಯ ರಸ್ತೆಯ ಒಂದು ಗುಂಡಿಯನ್ನು ಕೂಡ ಮುಚ್ಚುವ ಕೆಲಸ ಮಾಡಲಿಲ್ಲ ಆದರೆ ಕೊಡಗು ಜಿಲ್ಲೆಯ ನೂತನ ವಿಶ್ವವಿದ್ಯಾಲಯವನ್ನು ಮುಚ್ಚಲು ಉನ್ನಾರ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ ಎಂದು ಕಿಡಿಕಾರಿದರು ಕುಶಾಲನಗರದಲ್ಲಿ ಭಾರತೀಯ ಜನತಾ ಪಾರ್ಟಿ ಸೋಮವಾರಪೇಟೆ ಮಂಡಲ ವತಿಯಿಂದ .ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತದ ವಿರುದ್ಧ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು ನಗರದ ಪ್ರಮುಖ ಬೀದಿಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರವನ್ನು ಕೂಗುತ್ತಾ ತಹಶಿಲ್ದಾರರ ಕಚೇರಿಗೆ ತೆರಳಿ ಜನಸಾಮಾನ್ಯರು ಅನುಭವಹಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ .ಎ.ಸಿ.ಹಾಗೂ ತಹಶಿಲ್ದಾರರ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ಮಾತನಾಡಿದರು ಅಲ್ಲದೆ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಲವಾರು ರೈತ ಪರ ಯೋಜನೆಗಳಾದ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ರೈತ ವಿದ್ಯಾನಿಧಿ ಯೋಜನೆ.ಭೂ ಸಿರಿ ಯೋಜನೆ.ಶ್ರಮಶಕ್ತಿ ಯೋಜನೆ. ರೈತ ಸಂಪದ ಯೋಜನೆ .ಎಪಿಎಂಸಿ ಕಾನೂನು. ಕೃಷಿ ಭೂಮಿ ಮಾರಾಟ ಕಾನೂನು. ಜಿಲ್ಲೆಗೊಂದು ಗೋಶಾಲೆ .ಇನ್ನೂ ಅನೇಕ ಯೋಜನೆಗಳನ್ನು ರದ್ದು ಮಾಡುವ ಮೂಲಕ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ಆದೇ ರೀತಿಯಲ್ಲಿ ನಮ್ಮ ಸರ್ಕಾರದ ಆಡಳಿತದ ಸಮಯದಲ್ಲಿ 8 ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಿದ್ದು ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಈ ಹೊಸ ವಿಶ್ವವಿದ್ಯಾಲಯಗಳನ್ನು ರದ್ದುಗೊಳಿಸುವ ಪ್ರಯತ್ನ ಮಾಡುತ್ತಿದ್ದು ಹೀಗಾಗಲೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಅಳವಾರದಲ್ಲಿರುವ ಕಾವೇರಿ ವಿಶ್ವವಿದ್ಯಾಲಯ ರದ್ದಾಗಿದ್ದೆ ಆದಲ್ಲಿ ಜಿಲ್ಲೆಯ ಸಾಕಷ್ಟು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಆದುದರಿಂದ ಇಂತಹ ಪ್ರಸ್ತಾವನೆಗಳನ್ನು ಕೂಡಲೇ ಕೈಬೀಡಬೇಕು .ಇಲ್ಲದಿದ್ದ ಪಕ್ಷದಲ್ಲಿ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಎಚ್ಚರಿಕೆಯನ್ನು ನೀಡಿದರು.ಈ ಸಂದರ್ಭದಲ್ಲಿ ರಾಜ್ಯ ನಾಯಕ ಬಿ.ಬಿ.ಭಾರತೀಶ್ ಮಾತನಾಡಿದರು. ಪ್ರತಿಭಟನೆ ಮೆರವಣಿಗೆಯಲ್ಲಿ .ಬಿಜೆಪಿ ಸ್ಥಳೀಯ ಪ್ರಮುಖರಾದ .ಎಂ.ಡಿ.ಕೃಷ್ಣಪ್ಪ.ಕೆ.ಜಿ.ಮನು. ಜಯವರ್ಧನ್.ನವನೀತ್.ಚರಣ್.ಜಿ.ಎಲ್.ನಾ ಗರಾಜ್. ಭಾಸ್ಕರ್ ನಾಯಕ್.ವರದ.ಶಿವಾಜಿ.ಮುಂತಾದವರು ಪಾಲ್ಗೊಂಡಿದ್ದರು.
