ಉದಯವಾಹಿನಿ ಕೋಲಾರ : ವಿಧ್ಯಾರ್ಥಿಗಳು ಸೇವಾ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಸ್ವಚ್ಛತೆ ಕುರಿತು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ಜೊತೆಗೆ ಸಮಾಜದ ನೈಜತೆಯನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಂ.ನವೀನ ತಿಳಿಸಿದರು.ತಾಲೂಕಿನ ಹೋಳೂರು ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಮಹಿಳಾ ಸಮಾಜ ಕಾಲೇಜಿನ ವಾರ್ಷಿಕ ಎನ್‌.ಎಸ್‌.ಎಸ್‌ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂತಹ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಹಾಗೂ ನಾಯಕತ್ವದ ಗುಣಗಳನ್ನು ಮೂಡಿಸುವಲ್ಲಿ ಸಹಕಾರಿಯಾಗಲಿವೆ ವಿಧ್ಯಾರ್ಥಿಗಳು ಹಿರಿಯರ ಸೇವಾ ಮನೋಭಾವನೆಯ ಗುಣಗಳನ್ನು ತಮ್ಮ ಜೀವನದಲ್ಲಿ ಬೆಳೆಸಿಕೊಂಡಲ್ಲಿ ಉತ್ತಮ ಪ್ರಜೆಗಳಾಗಲೂ ಸಹಕಾರಿಯಾಗಲಿದೆ ಎಂದರು.ವಿಧ್ಯಾರ್ಥಿಗಳು ಕಲಿಕೆಯಲ್ಲಿ ಕೇವಲ ಪಠ್ಯ ಮತ್ತು ಅಂಕಗಳಿಗೆ ಮಾತ್ರ ಸೀಮಿತವಾಗದೇ ಮಾನಸಿಕ, ಬೌದ್ಧಿಕ ಮತ್ತು ಭಾವನಾತ್ಮಕ ವಿಕಾಸಕ್ಕೆ ಪೂರಕವಾಗಿರುವ ಇಂತಹ ಶಿಬಿರಗಳಲ್ಲಿ ಭಾಗವಹಿಸಬೇಕು ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಗೆ ಜಿಲ್ಲೆಯಲ್ಲಿ ತನ್ನದೇ ಆದ ಇತಿಹಾಸವಿದ್ದು ಎಲ್ಲಾ ಹಂತದ ಸ್ಪರ್ಧೆಗಳಲ್ಲಿ ವಿಧ್ಯಾರ್ಥಿಗಳು ಮುಂಚೂಣಿಯಲ್ಲಿ ಇದ್ದಾರೆ ಮುಂದೆ ಎಲ್ಲಾ ವಿಭಾಗದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪ್ರಾರಂಭಿಸಿ ವಿಧ್ಯಾರ್ಥಿಗಳಿಗೆ ಮತ್ತಷ್ಟು ಸೇವೆ ನೀಡಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಜಡೇರಿ ಗೋಪಾಲಗೌಡ ಮಾತನಾಡಿ ಇಂತಹ ಶಿಬಿರಗಳು ವಿಧ್ಯಾರ್ಥಿಗಳ ಕೌಶಲ್ಯವನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ ಪಠ್ಯೇತರ ಚಟುವಟಿಕೆಗಳು ಕೂಡ ಜೀವನದ ಅವಿಭಾಜ್ಯ ಅಂಗವಾಗಿದ್ದು ಹೆಚ್ಚಿನ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಶಿಕ್ಷಣದಲ್ಲಿ ಮೂಢನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಪ್ರತಿಯೊಬ್ಬರೂ ತಾನು ತನಗಾಗಿ ಅನ್ನೋದನ್ನು ಬಿಟ್ಟು ಸಮಾಜಕ್ಕಾಗಿ ಅನ್ನೋ ಮನಸ್ಥಿತಿ ಎಲ್ಲರಲ್ಲೂ ಬರಬೇಕು ನಿಮ್ಮ ಶಿಬಿರದ ಗುರಿ ಉದ್ದೇಶ ಸಾಧಿಸುವ ನಿಟ್ಟಿನಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರ ಓಂಕಾರ್ ಮೂರ್ತಿ ಮಾತನಾಡಿ ಪ್ರತಿಯೊಬ್ಬ ವಿಧ್ಯಾರ್ಥಿಯಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ ಯಾವುದೇ ಕ್ಷೇತ್ರದಲ್ಲಿ ಶ್ರದ್ಧೆಯಿಂದ ನಿಮ್ಮನ್ನು ತೊಡಗಿಸಿಕೊಂಡಾಗ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಕಷ್ಟ ಪಟ್ಟು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾಗ ಮುಂದೆ ಪ್ರತಿಫಲ ಸಿಗುತ್ತದೆ ಸೇವೆ ಅನ್ನುವ ಗುಣ ಎಲ್ಲರಲ್ಲೂ ಸ್ವಯಂ ಪೇರಿತವಾಗಿ ಬರಬೇಕು ಎಂದರು. ಈ ಸಂದರ್ಭದಲ್ಲಿ ಹೋಳೂರು ಗ್ರಾಪಂ ಅಧ್ಯಕ್ಷೆ ಅನಿತಾ ವಿ.ಲೋಕೇಶ್, ಉಪಾಧ್ಯಕ್ಷೆ ಬಿ.ಪ್ರಿಯಾಂಕಾ, ಸದಸ್ಯೆ ಲಲಿತಾ, ಪಿಡಿಒ ನಾಗರಾಜ್, ಮುಖಂಡರಾದ ಜನಪನಹಳ್ಳಿ ಆನಂದ್ ರೆಡ್ಡಿ, ಗಿರೀಶ್, ಸುಧಾಕರ್ ರೆಡ್ಡಿ, ಶ್ರೀನಿವಾಸಮೂರ್ತಿ, ರಾಮಯ್ಯ, ಶಿಕ್ಷಕರಾದ ಶಿವಕುಮಾರ್, ರಮೇಶ್,ಶರಣಪ್ಪ ಜಮಾದಾರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಚಾನ್ ಪಾಷ, ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ನಂದನ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಮಂಜುನಾಥ್, ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!