ಉದಯವಾಹಿನಿ  ಕೆಂಭಾವಿ :ತಂದೆತಾಯಿ ಹಾಗೂ ಗುರುಗಳನ್ನು ಗೌರವದಿಂದ ಕಾಣುವವರಿಗೆ ಜೀವನದಲ್ಲಿ ಯಶಸ್ಸು ಖ0ಡಿತವಾಗಿ ದೊರೆಯುತ್ತದೆ ಎ0ದು ಶಿಕ್ಷಕ ಶ್ರೀಶೈಲ್ ಹದಗಲ್‌ ಅವರು ಅಭಿಪ್ರಾಯಪಟ್ಟರು.ಪಟ್ಟಣದ ಆಶ್ರಯ ಕಾಲೋನಿಯಲ್ಲಿರುವ ಸರಕಾರಿ ಶಾಲೆಯ ಬೇರೆಡೆವರ್ಗಾವಣೆಗೊಂಡ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಂಡಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದಅವರು, ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಹೀಗಾಗಿ ಪ್ರತಿಯೊಬ್ಬರು ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ವರ್ಗಾವಣೆಗೊಂಡಇನ್ನೋರ್ವ ಶಿಕ್ಷಕ ವೆಂಕಟೇಶ ಮಾತನಾಡಿ, ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸಿರುವ ತೃಪ್ತಿ ನನ್ನಗಿದ್ದು, ಇಲ್ಲಿನ ಸಾರ್ವಜನಿಕರು,ಪಾಲಕರು ಸಹಕಾರಕ್ಕೆಧನ್ಯವಾದ ಅರ್ಪಿಸಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಬಸಮ್ಮ ಗುಂಡಕನಾಳ, ಎಸ್‌ಡಿಎಂಸಿ ಅಧ್ಯಕ್ಷ ಹರಿಚಂದ್ರ, ಮುಕ್ತುಂ ಪಟೇಲ್, ಭೂದಾನಿ ಬಸವರಾಜ ಬಸರಿಗಿಡ, ಕರವೇ ವಲಯಾಧ್ಯಕ್ಷ ಕುಮಾರ ಮೋಪಗಾರ, ದಲಿತ ಮುಖಂಡ ಸಾಯಿಬಣ್ಣಎಂಟಮಾನ್, ದೇವಪ್ಪ ಹಂದ್ರಾಳ ಸೇರಿ ಹಲವರಿದ್ದರು. ಸಿದ್ದು ಹಲಗಿ ನಿರೂಪಿಸಿ,ವಂದಿಸಿದರು.

 

Leave a Reply

Your email address will not be published. Required fields are marked *

error: Content is protected !!