
ಉದಯವಾಹಿನಿ ಮುದ್ದೇಬಿಹಾಳ ; ಮುದ್ದೇಬಿಹಾಳ ತಾಲ್ಲೂಕಿನ ಅಡವಿಸೋಮನಾಳ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಘಟಕದ ಸಿಬ್ಬಂದಿಗಳು ತಮಗೆ ಕಳೆದ 3 ತಿಂಗಳಿಂದ ವೇತನ ನೀಡಿಲ್ಲವೆಂದು ಬಾಕಿ ವೇತನಕ್ಕೆ ಆಗ್ರಹಿಸಿ ಬುಧುವಾರ ನಾಗರಬೆಟ್ಟ ಬೆಟ್ಟದ ಮೇಲಿರುವ ಕುಡಿಯುವ ನೀರು ಪೂರೈಕೆ ಘಟಕದಲ್ಲಿ 32 ಹಳ್ಳಿಗಳಿಗೆ ನೀರು ಪೂರೈಕೆ ಸ್ಥಗಿತ ಗೂಳಿಸಿ ಗುತ್ತಿಗೆ ನೌಕರರು ದಿಡಿರ್ ಪ್ರತಿಭಟನೆ ನಡೆಸುತ್ತಿದ್ದಾರೆ ಈ ವೇಳೆ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಹಿರೇಮಠ ಜೂನ್ ತಿಂಗಳಿಂದ ನೌಕರರಿಗೆ ವೇತನ ಮಾಡಿಲ್ಲ ಬಾಕಿ ವೇತನ ನೀಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರ ಕೇಳಿದರೆ ಪರಸ್ಪರ ಒಬ್ಬರ ಮೇಲೆ ಒಬ್ಬರು ಹಾಕುತ್ತಿದ್ದಾರೆ ನಮ್ಮ ಬಾಕಿ ವೇತನಕ್ಕೆ ಯಾವ ಸ್ಪಂದನೆ ಮಾಡದ ಕಾರಣ ಇಂದು ದಿಢೀರ್ ಪ್ರತಿಭಟನೆ ಶಾಂತಿಯುತವಾಗಿ ಮಾಡುತ್ತಿದ್ದು ನಮ್ಮ ಬಾಕಿ ವೇತನ ನೀಡದೆ ಇದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು ಯಲ್ಲಪ್ಪ ಚಲವಾದಿ ಮಾತನಾಡಿ ಬರುವ ಅಲ್ಪ ಸಂಬಳದಲ್ಲಿ ನಮ್ಮ ಸಂಸಾರ ಸಾಗಿಸಬೇಕು ಮೂರು ತಿಂಗಳಿಂದ ವೇತನ ನೀಡಿಲ್ಲ ಮನೆಯಲ್ಲಿ ಮಕ್ಕಳ ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳಿವೆ ಸಂಸಾರ ನಿರ್ವಹಣೆ ಕಷ್ಟವಾಗಿದೆ ಮೂರು ತಿಂಗಳು ನಮಗೆ ಕಷ್ಟವಿದ್ದರು ಕರ್ತವ್ಯ ಕ್ಕೆ ಹಾಜರಾಗಿ ಕೆಲಸವನ್ನು ಮಾಡಿದ್ದೇವೆ ಈಗ ನಮ್ಮ ಕಷ್ಟಕ್ಕೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ ಹೀಗಾಗಿ ಬಹು ಹಳ್ಳಿಗಳಿಗೆ ನೀರು ಪೂರೈಕೆ ಸ್ಥಗಿತಗೂಳಿಸಿ ಹೋರಾಟ ಮಾಡುತ್ತಿದ್ದೇವೆ ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರರು ಬಾಕಿ ಇರುವ ವೇತನ ಬಿಡುಗಡೆ ಮಾಡಬೇಕು ಎಂದರು ಈ ವೇಳೆ ಪರಸಪ್ಪ ಒಳಕಲದಿನ್ನಿ, ಭೀಮಣ್ಣ ಒಳಕಲದಿನ್ನಿ, ನಿಸಾರುದ್ದಿನ್ ಪಾಷಾ , ಮಹಾಂತೇಶ ಹಿರೇಮಠ,ಅಮ್ಮಪ್ಪ ಚಲವಾದಿ,ಹಣಮಂತ ಚಲವಾದಿ,ಪರಸಪ್ಪ ಮುರಾಳ, ಗೌಡಪ್ಪ ಒಳಕಲದಿನ್ನಿ, ಶರಣಪ್ಪ ಒಳಕಲದಿನ್ನಿ, ಶರಣಪ್ಪ ಕಂಡಗೂಳಿ,ಸಿದ್ದಪ್ಪ ವಾಲಿಕಾರ, ಪರಮಣ್ಣ ಒಳಕಲದಿನ್ನಿ, ಬಸವರಾಜ ಒಳಕಲದಿನ್ನಿ, ರಾಜು ದೂಡಮನಿ, ಪರಮಣ್ಣ ರಕ್ಕಸಗಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ನೀರು ಪೂರೈಕೆ ಮಾಡುವ ಸಿಬ್ಬಂದಿಗಳು ಕುಡಿಯುವ ನೀರು ಪೂರೈಕೆ ಸ್ಥಗಿತಗೂಳಿಸಿ ಮಾಡುತ್ತಿರುವ ದಿಢೀರ್ ಪ್ರತಿಭಟನೆಯಿಂದ 32 ಹಳ್ಳಿಯ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ ಈ ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರು ನೌಕರರ ಮನವೊಲಿಸಿ ಬಾಕಿ ವೇತನ ನೀಡಿ ನೀರು ಸರಬರಾಜು ಮಾಡಬೇಕಿದೆ
