ಉದಯವಾಹಿನಿ, ಬೆಂಗಳೂರು: ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನದ ವಿಚಾರದಲ್ಲಿ ತಮ್ಮನ್ನು ಎಳೆದು ತಂದ ಕಾಂಗ್ರೆಸ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ. ನಿಮ್ಮದೇ ಸರ್ಕಾರ ಇರೋದು ಅಲ್ಲವೇ, ಮಾನ ಮರ್ಯಾದೆ ಇದ್ದರೇ ಕೂಲಂಕುಷವಾಗಿ ತನಿಖೆ ಮಾಡಿಸಿ, ನೀವು ಟ್ವೀಟ್ ಡಿಲೀಟ್ ಮಾಡಿ ಓಡಿ ಹೋಗಬೇಡಿ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಚೈತ್ರಾ ಕುಂದಾಪುರ ಇದ್ದ ಫೋಟೋವನ್ನು ಟ್ವೀಟ್ ಮಾಡಿತ್ತು. ಅದಲ್ಲದೇ ಕಳ್ಳರು, ಸುಳ್ಳರು, ವಂಚಕರು ಕರ್ನಾಟಕ ಬಿಜೆಪಿ ನಾಯಕರಿಗೇ ಆಪ್ತವಾಗುವುದೇಕೆ ಎಂದು ಪ್ರಶ್ನಿಸಿತ್ತು. ಇದರಿಂದ ಕೆರಳಿದ ಯತ್ನಾಳ್, ನಿಮ್ಮದೇ ಸರ್ಕಾರ ಇರೋದು ಅಲ್ಲವೇ? ಮಾನ ಮರ್ಯಾದೆ ಇದ್ದರೇ ಕೂಲಂಕುಷವಾಗಿ ತನಿಖೆ ಮಾಡಿಸಿ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯತ್ನಾಳ್, ನೀವು ಟ್ವೀಟ್ ಡಿಲೀಟ್ ಮಾಡಿ ಓಡಿ ಹೋಗಬೇಡಿ. ನಾನು ಹೇಳಿದ್ದು ಎಲ್ಲಾ ಪಕ್ಷದಲ್ಲೂ ದಲ್ಲಾಳಿಗಳು ಇರಬಹುದು ಅಂತ, ನನ್ನ ಹೇಳಿಕೆಯನ್ನು ತನಿಖೆ ಮಾಡಿಸಿ ಮೂರ್ಖರೇ! ನಿಮ್ಮಂತಹ ರೌಡಿ, ಪುಡಾರಿ, ಕೊತ್ವಾಲ್ ಶಿಷ್ಯರಿಗೆ ನನ್ನ ಹೇಳಿಕೆ ಎಲ್ಲಿ ಅರ್ಥ ಆಗಬೇಕು ಅಲ್ಲವೇ ಎಂದು ಕಾಂಗ್ರೆಸ್ಗೆ ಟಾಂಗ್ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!