ಉದಯವಾಹಿನಿ, ಔರಾದ್ : ಪಟ್ಟಣದಲ್ಲಿ ಮಹಾ ಮಾನವತವಾದಿ ಮಂತ್ರ ಪುರುಷ ಲಿಂಗಾಯತ ಧರ್ಮ ಸಂಸ್ಥಾಪಕ ಅಪ್ಪ ಬಸವಣ್ಣನವರ ಪುತ್ತಳಿಯನ್ನು ಅನಾವರಣಗೊಳಿಸಲಾಯಿತು ಉದ್ಯಮಿಗಳು ಶರಣ ಜೀವಿಗಳು ಅದ ಜ್ಯೋತಿ ಸೂರ್ಯಕಾಂತ್ ಅಲ್ಮಾಜೆ ಅವರ ಮಹಾ ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದರ ಮೂಲಕ ಸಮಾನತೆ ಸಾರಿದ ಚಿಂತಕರ ಮೂರ್ತಿ ಮನೆಮನೆಗಳಲ್ಲಿ ಅನಾವರಣಗೊಳ್ಳಬೇಕೆಂಬ ಅವರದಾಗಿರುವ ಪ್ರಯುಕ್ತ ಮೂರ್ತಿ ಅನಾವರಣದ ದಿವ್ಯ ಸನ್ನಿಧಾನವನ್ನು ಅನುಭವ ಮಂಟಪದ ಅಧ್ಯಕ್ಷರಾದ ಪರಮಪೂಜ್ಯ ಡಾ ಬಸವಲಿಂಗ ಪಟ್ಟದೇವರು ವಹಿಸಿದ್ದರು. ನೇತೃತ್ವವನ್ನು ಪೂಜ್ಯ ಗುರುಬಸವ ಪಟ್ಟದೇವರು ವಹಿಸಿದ್ದರು. ಮೂರ್ತಿ ಅನಾವರಣವನ್ನು ರಾಜಕುಮಾರ್ ಪಾಟೀಲ್ ತೇಲ್ಕೂರ್ ಮಾಜಿ ಶಾಸಕರು ಸೇಡಂ ಅವರ ಲಿಂಗ ಹಸ್ತದಿಂದ ಉದ್ಘಾಟಿಸಲಾಯಿತು ನೇತೃತ್ವ ವಹಿಸಿ ಮಾತನಾಡಿದ ಪೂಜ ಬಸಲಿಂಗ ಪಟ್ಟದೇವರು ಜಾತಿ ರಹಿತ ಧರ್ಮಸಹಿತ ಸಮಾನತೆಯ ಧರ್ಮವನ್ನು ಸಾರಿದ ಸರ್ವರ ಸಕಲ ಜೀವಾತ್ಮರ ಲೆಸೆನ್ಯ ಬಯಸಿದ ಅಪ್ಪ ಬಸವಣ್ಣನವರ ಮೂರ್ತಿ ಇಂದು ಅನಾವರಣಗೊಂಡಿದ್ದು ಅಪಾರ ಸಂತಸವೆನಿಸಿದ ಜಗತ್ತಿಗೆ ಆಚಾರ ಸಂಹಿತೆ ನೀಡಿದ ಬಸವಣ್ಣನವರ ಆಚಾರ ವಿಚಾರ ನಡೆನುಡಿ ಎಲ್ಲವೂ ಮೈಗೂಡಿಸಿಕೊಂಡು ಸಾತ್ವಿಕ ಬದುಕು ಸಾಗಿಸಿದಲ್ಲಿ ಶರಣರ ವಿಚಾರಧಾರೆಗಳಿಗೆ ಮನ್ನಣೆ ನೀಡಿದಂತಾಗುತ್ತದೆ ಎಂದು ನುಡಿದರು. ಈ ಸಂದರ್ಭದಲ್ಲಿ ಸಾಗರ್ ಖಂಡ್ರೆ, ಜಯರಾಜ ವಸಂತ್ ಬಿರಾದಾರ್, ದೀಪಕ್ ಪಾಟೀಲ್, ರಮೇಶ್ ಅನಿತಾ ನಿಲ್ಲೇಶ್, ಗುರುನಾಥ್ ಬುಟ್ಟೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!