ಉದಯವಾಹಿನಿ, ಯಾದಗಿರಿ: ತಾಲ್ಲೂಕಿನ ಯರಗೋಳ ಗ್ರಾಮದ ಸರ್ವೆ ನಂ: 92,591,592,93,821,15,53,52 ಈ ಜಮೀನುಗಳು ರಾಮಚಂದ್ರ ಯರಗೋಳ ಇವರ ಹೆಸರನಲಿದ್ದು ಇವರು ಮೃತಪಟ್ಟ ನಂತರ ಇವರ ಮೂರು ಜನ ಮಕ್ಕಳ ತಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕಿತ್ತು ಆದರೆ ಬಸವರಾಜ ತಂದೆ ರಾಮಚಂದ್ರಪ್ಪ ಅವರ ಗಮನಕ್ಕೆ ತರದೇ ಅವರ ಸಹಿ ಪಡೆಯದೇ ದಾಖಲೆಗಳು ತೆಗೆದುಕೊಳ್ಳುದೆ, ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೇಖಪಾಲಕರು ಸೇರಿಕೊಂಡು ಬಸವರಾಜ ತಂದೆ ಚಂದ್ರಾಮಪ್ಪನ ಒಬ್ಬ ಮಗನ ಹೆಸರಿನ ಮೇಲೆ ಪಹಣಿಯಲ್ಲಿ ಈ ಮೂರು ಜನ ಮಕ್ಕಳ ಜಂಟಿ ವರ್ಗಾವಣೆ ಮಾಡಿದ್ದಾರೆ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಮಿತಿ ಜಿಲ್ಲಾ ಅಧ್ಯಕ್ಷ ಕಾಶಿನಾಥ ನಾಟೇಕರ್ ಆರೋಪಿಸಿದರು.ಪ್ರತಿಭಟನೆ ಉದೇಶಿಸಿ ಮಾತನಾಡಿದ ಅವರು ಮುಂದೆ ಬರುವ ಸರಕಾರದಿಂದ ಯಾವುದಾದರೂ ಸವಲತ್ತುಗಳನ್ನು ಪಡೆಯಲು ಇವರಿಗೆ ಅನುಕೂಲವಾಗದಂತೆ ಮಾಡಿದ್ದು ಭಾರಿ ಅನ್ಯಾಯ ಮಾಡಿದ್ದಾರೆ ಆಧಾರ ಕಾರ್ಡ್, ವಂಶಾವಳಿ, ಯಾವುದೂ
ದಾಖಲೆಯನ್ನು ಪಡೆಯದೇ ಹಣದ ಆಮೀಷಕ್ಕೆ ಒಳಗಾಗಿ ಈ ಜಮೀನು ವರ್ಗಾವಣೆ ಮಾಡಿರುವ ಕಂದಾಯ ನಿರೀಕ್ಷಕರು ಈ ಜಮೀನು ವರ್ಗಾವಣೆ ಮಾಡಿದ್ದಾರೆ ಇವರ ಮೇಲೆ ಶಿಸ್ತು ಕ್ರಮ ಜರುಗಿಸಿ ಈ ಮೂರು ಮಕ್ಕಳಿಗೆ ಸಮಾನವಾಗಿ ಜಮೀನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
*ಅನ್ಯಾಯದ ಪರ ಧ್ವನಿಯೆತ್ತಿದರೆ ಬೆಲೆ ಇಲ್ವಾ*
ವಾರದಿಂದ ಧರಣಿ ಕುಂತರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಯಾದಗಿರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಕರೆ ಮಾಡಿ ಸಮಸ್ಯೆ ಕುರಿತು ಹೇಳಬೇಕೆಂದರೆ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ನಮ್ಮ ಹೋರಾಟಕ್ಕೆ ಬೆಲೆ ಇಲ್ಲದಂತಾಗದೆ ಕಾನೂನು ಬಾಹಿರ ಚಟುವಟಿಕೆ ಮಾಡುವ ಅಧಿಕಾರಿಗಳಿಗೆ ಇವರು ಬೆಂಬಲವನ್ನು ನೀಡಿತ್ತಿದ್ದಾರೆ ಎಂದು ಅನಿಸುತ್ತದೆ ನಾವು ಹಗಲು ರಾತ್ರಿ ಕೂಳು ನೀರಿಲ್ಲದೆ ನಾವು ಧರಣಿ ಮಾಡುತ್ತಿದರು ಅಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ ಇದು ಎಂತಹ ವಿಪರ್ಯಾಸ ನಮ್ಮ ಸಂಘಟನೆಗಳು ಅನ್ಯಾಯದ ಪರ ಧ್ವನಿಯೆತ್ತಿದರೆ ಬೆಲೆ ಇಲ್ವಾ.
*ಬೆಂಬಲ ನೀಡಿದ ಮಾದಿಗ ದಂಡೋರ*
ಎಂಟು ದಿನದಿಂದ ಯಾದಗಿರಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ ಕುಳಿತುಕೊಂಡು ಹೋರಾಟ ಮಾಡುತ್ತಿರುವ ಅಂಬೇಡ್ಕರ್ ಸ್ವಾಭಿಮಾನಿ ಸೇನೆಗೆ ಮಾದಿಗ ದಂಡೋರ ಬೆಂಬಲ ನೀಡಿ ನಾವು ಕೂಡ ನಿಮ್ಮ ಜೊತೆ ಇದ್ದೇವೆ ಹೋರಾಟ ಮುಂದುವರಿಸಿ ಎಂದು ಧೈರ್ಯ ಹೇಳಿದರು. ದೇಶದಲ್ಲಿ ಸಂವಿಧಾನ ಮತ್ತು ಕಾನೂನು ಇದ್ದರು ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಇನ್ನೂ ನಿಂತ್ತಿಲ್ಲ ಜಮೀನ್ದಾರರ ಗಮನಕ್ಕೆ ತರದೆ ಜಂಟಿ ಪಹಣಿ ತಯಾರಿ ಮಾಡುತ್ತಾರೆ ಎಂದರೆ ಇವರು ಸಂವಿಧಾನದ ವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮೌನೇಶ ಯಡ್ಡಳ್ಳಿ, ಹಂಪಯ್ಯ ಎನ್, ಶೇಂಗಿನೊರ್, ಮರೆಪ್ಪ ಗುರುಸುಣಿಗಿ, ಅಮೀನರೆಡ್ಡಿ, ಬಸವರಾಜ, ಶರಣಪ್ಪ ಜಯಶ್ರೀ, ಮಲ್ಲಿಕಾರ್ಜುನ ಕುಮನೂರ,

Leave a Reply

Your email address will not be published. Required fields are marked *

error: Content is protected !!