
ಉದಯವಾಹಿನಿ,ತಾಳಿಕೋಟಿ: ಹಡಿಗಿನಾಳ ಸಂಪರ್ಕ ರಸ್ತೆ ಸಂಪೂರ್ಣ ಹದಿಗೆಟ್ಟು ಹಾಳಾಗಿ ಹೋಗಿ ಇಲ್ಲಿಂದ ಹಲವಾರು ಗ್ರಾಮಗಳಿಗೆ ಸಂಚರಿಸುವ ವಾಹನ ಸವಾರರಿಗೆ ಹಾಗೂ ಹೊಲಗದ್ದೆಗಳಿಗೆ ಹೋಗುವ ರೈತರಿಗೆ ತೀವ್ರ ತೊಂದರೆಯಾಗಿತ್ತು. ಈಗ ರಸ್ತೆ ದುರಸ್ತಿ ಕಾಮಗಾರಿ ಆರಂಭವಾಗಿ ಗ್ರಾಮಸ್ಥರು ನಿಟ್ಟಿಸಿರು ಬಿಡುವಂತಾಗಿದೆ. ತಾಳಿಕೋಟಿ ಪಟ್ಟಣದಿಂದ ಹಡಗಿನಾಳ-ಮೂಕೀಹಾಳ ಗ್ರಾಮಗಳಿಗೆ ಸಂಪರ್ಕವನ್ನು ಕಲ್ಪಿಸುವ ಸುಮಾರು 3 km ರಸ್ತೆ ಹಾಳಾಗಿ ಹೋಗಿ ಸಂಚಾರವೇ ದುಸ್ತರವಾಗಿತ್ತು ಇದನ್ನು ಗಮನಿಸಿದ ಪತ್ರಿಕೆ ಸಾರ್ವಜನಿಕರ ಹಿತಾಸಕ್ತಿ ಅಡಿಯಲ್ಲಿ ದಿನಾಂಕ 12 ರಂದು ತನ್ನ ಸಂಚಿಕೆಯಲ್ಲಿ ಈ ಗಂಭೀರ ಸಮಸ್ಯೆ ಕುರಿತು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು ವರದಿಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶಾಸಕ ಅಪ್ಪಾಜಿ ನಾಡಗೌಡರ ಆದೇಶದ ಮೇರೆಗೆ ಬಹುಬೇಗನೆ ಈ ರಸ್ತೆ ದುರಸ್ತಿ ಕಾಮಗಾರಿಯನ್ನು ಆರಂಭಿಸಿ ಈ ಭಾಗದ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಅಪ್ಪಾಜಿ ನಾಡು ಗೌಡರಿಗೆ ಒಂದು ತಿಂಗಳ ಹಿಂದೆ ಭೇಟಿ ಮಾಡಿದ ಈ ಭಾಗದ ಗ್ರಾಮಸ್ಥರ ನಿಯೋಗ ಆದಷ್ಟು ಬೇಗ ಈ ರಸ್ತೆಯನ್ನು ದುರಸ್ತಿ ಮಾಡಿಸುವಂತೆ ಮನವಿ ಮಾಡಿತ್ತು ಮನವಿಗೆ ಸ್ಪಂದಿಸಿದ ಶಾಸಕರು ಅಧಿಕಾರಿಗಳೊಂದಿಗೆ ಮಾತನಾಡಿ ಮಳೆಗಾಲ ಇರುವುದರಿಂದ ನೂತನ ರಸ್ತೆ ಸಾಧ್ಯವಿಲ್ಲವಾದರೂ ಕನಿಷ್ಠ ದುರಸ್ತಿಯನ್ನಾದರೂ ಮಾಡಿ ಈ ಭಾಗದ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಿ ಎಂದು ಆದೇಶಿಸಿದ್ದರು. ಜೊತೆಗೆ ಒಂದೆರಡು ತಿಂಗಳ ಒಳಗಾಗಿ ಈ ರಸ್ತೆ ನಿರ್ಮಾಣದ ಕಾರ್ಯ ಮಾಡಿ ಮುಗಿಸಬೇಕು ಎಂದು ತಿಳಿಸಿದ್ದರು ಜನಪ್ರತಿ ಯಾದವರು ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿದಲ್ಲಿ ಎಂಥ ಸಮಸ್ಯೆಯಾದರೂ ಬೇಗನೆ ಪರಿಹರಿಸಬಹುದಾಗಿದೆ ಎಂಬುದಕ್ಕೆ ಈ ಕಾರ್ಯ ಅತ್ಯುತ್ತಮ ಉದಾಹರಣೆಯಾಗಿದೆ
