ಉದಯವಾಹಿನಿ, ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಹಿರೇಮಠದಲ್ಲಿ ಪಠ್ಯಾಧ್ಯಕ್ಷರಾದ ಅಭಿನವ ಸಂಗನಬಸವ ಶಿವಾಚರ‍್ಯರರ ಸಮ್ಮುಖದಲ್ಲಿ ಗೋಮಾತೆಗೆ ಸೀಮಂತ ಕರ‍್ಯಕ್ರಮವನ್ನು ಆಯೋಜಿಸಿದ್ದು ವಿಶೇಷವಾಗಿತ್ತು. ಕರ‍್ಯಕ್ರಮಕ್ಕೆ ಆಗಮಿಸಿz ಮಾತೆಯರೆಲ್ಲಾ ರೊಟ್ಟಿ, ಪಲ್ಯೆ, ಸಿಹಿ ಬುತ್ತಿರೊಟ್ಟಿ ತಂದು ಗೋಮಾತೆಗೆ ಅರ್ಪಿಸಿ ತಾವು ಸ್ವೀಕರಿಸಿ ಧನ್ಯರಾದರು. ಈ ಸಂದರ್ಭದಲ್ಲಿ ಮಹಾದೇವಿ ಅರುಟಗಿ, ನೀಲಕ್ಕ ಬಬಲೇಶ್ವರ, ರೇಣುಕಾ ಮಣ್ಣೂರ, ಭಾರತಿ ಕೋಟ್ಯಾಳ, ಲಲಿತಾ ಕರಿಶಂಕರಿ, ಬೋರಮ್ಮ ಪಾಟೀಲ, ವಾಣಿ ನುಚ್ಚಿ, ಜ್ಯೋತಿ ಹಿಟ್ನಳ್ಳಿ, ಭಾಗಮ್ಮ ಕೋಳುರ, ಶಂಕ್ರಮ್ಮ ಬಿರಾದಾರ, ಕಸ್ತೂರಿ ಬೂದಿಹಾಳ, ಮಾದೇವಿ ಉಪ್ಪಾರ, ಪವಿತ್ರ ಘೋರ್ಪಡೆ, ರೇಣುಕಾ ಬನಸೋಡೆ, ರಾಧಾ ಮನಗೂಳಿ, ವೀಣಾ ಕವಟೇಕರ ಸೇರಿದಂತೆ ಅನೇಕರು ಇದ್ದರು.
