ಉದಯವಾಹಿನಿ, ಅಫಜಲಪುರ :ಶ್ರಾವಣ ಮಾಸದಲ್ಲಿ ಮಹಿಯರಿಗೆ ಉಡಿ ತುಂಬುವ ಮೂಲಕ ನಮ್ಮ ಹಳೆಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲು ಹಾಗೂ ಉಡಿ ತುಂಬುವ ಮಹತ್ವದ ಬಗ್ಗೆ ಮಹಿಳೆಯರಿಗೆ ಅರಿವು ಹಾಗೂ ಜಾಗೃತಿ ಮೂಡಿಸುವುದು ಪುಣ್ಯದ ಕೆಲಸವಾಗಿದೆ ಎಂದು ಕೆಪಿಸಿಸಿ ಸದಸ್ಯ ಹಾಗೂ ಮಾಜಿ ಜಿ ಪಂ ಸದಸ್ಯ ಅರುಣಕುಮಾರ ಎಂ ಪಾಟೀಲ ಹೇಳಿದರು
ಅವರು ತಾಲೂಕಿನ ಶಿವಬಾಳನಗರ ಗ್ರಾಮದ ಹಾಲಯ್ಯ ಮುತ್ಯಾ ಹಿರೇಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ತಾಲೂಕಿನಲ್ಲಿ ಹಾಗೂ ಈ ಭಾಗದಲ್ಲಿ ಉತ್ತಮ ಮಳೆಯಾಗಲಿ ರೈತರು ಸಮೃದ್ಧವಾಗಿ ಬೆಳೆಗಳನ್ನು ಬೆಳೆಯಲಿ ರೈತರ ಬಾಳು ಬಂಗಾರವಾಗಲಿ. ಹಾಲಯ್ಮ ಹಿರೇಮಠ ಅವರು ಶ್ರಾವಣ ಮಾಸದಲ್ಲಿ ನಿರಂತರವಾಗಿ ಒಂದು ತಿಂಗಳವರೆಗೆ ಮಠದಲ್ಲಿ ಪುರಾಣ ಪ್ರವಚನ ಮುತ್ತೈದೆಯರಿಗೆ ಉಡಿ ತುಂಬುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜೊತೆಗೆ ಅವರು ಪಾಲಿಸಬೇಕಾದ ಸಂಪ್ರದಾಯಗಳನ್ನು ತಿಳಿಸಿ ಹೇಳುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.ಉಡಿ ತುಂಬುವ ಕೆಲಸ ಅತ್ಯಂತ ಪುಣ್ಯದ ಕಾಯಕವಾಗಿದೆ.ಮುಂಬರುವ ದಿನಗಳಲ್ಲಿ ಹಾಲಯ್ಯ ಮುತ್ಯಾ ಅವರ ಮಠಕ್ಕೆ ಬೇಕಾಗುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ಹಾಲಯ್ಯ ಹಿರೇಮಠ ಶಿವಲಿಂಗಪ್ಪ ಇಬ್ರಾಹಿಂಪುರ ನಾಗಪ್ಪ ಕರೂಟಿ ಕಲ್ಲಪ್ಪ ಹತ್ತೆ ರಾಚಪ್ಪ ಕೊಪ್ಪಾ ಸಿದ್ರಾಮಪ್ಪ ಹಿರೇಕುರುಬರ ಗ್ರಾಪಂ ಸದಸ್ಯ ಬಸವರಾಜ ವಾಯಿ ಕರೂಟಿ ಬಸವರಾಜ ಕರೂಟಿ ಗುರಪ್ಪ ಕರೂಟಿ ಅನೀಲ ಕರೂಟಿ ವೇಣುಮಾಧವ ಅವಧಾನಿ ಶರಣಪ್ಪ ನಾವದಗಿ ಸಂತೋಷ ಅಲ್ಲಾಪೂರ ರಾಜಶೇಖರ ಪ್ಯಾಟಿ ಜಗದೀಶ ದೇಶಟ್ಟಿ ಸಿದ್ದು ಬೋಳೆಗಾಂವ ಶರಣು ಕರಜಗಿ ನಾಗು ರಾಂಪೂರೆ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!