
ಉದಯವಾಹಿನಿ ಶಿಡ್ಲಘಟ್ಟ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವುದೇ ಮುಖ್ಯವೆಂದು ತಿಳಿದಿದ್ದಾರೆ, ಅದೇ ರೀತಿ ಪೋಷಕರು ಸಹ ತಮ್ಮ ಮಕ್ಕಳ ಮೇಲೆ ಒತ್ತಡ ತಂದು ಮಕ್ಕಳು ಖಿನ್ನತೆಗೆ ಒಳಗಾಗುವಂತೆ ಮಾಡುತ್ತಾರೆ ಎಂದು ಜೆ.ಎಂ.ಎಫ್.ಸಿ ಹಿರಿಯ ಮುಖ್ಯ ನ್ಯಾಯಾದೀಶರಾದ ಯಮುನಪ್ಪ ಕರೆ ಹನುಮಂತಪ್ಪ ತಿಳಿಸಿದರು.ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಜೆ.ಎಂ.ಎಫ್.ಸಿ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ “ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಖಿನ್ನತೆಗೆ, ಮಾನಸಿಕ ಅಶಾಂತತೆಗೆ ಒಳಗಾಗಬಾರದು. ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ದೈರ್ಯದಿಂದ ಎದುರಿಸಬೇಕು ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇರುವ ನೆರೆಹೊರೆಯವರಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ ಧೈರ್ಯ ತುಂಬಬೇಕೆಂದದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ವೆಂಕಟಶಿವಾರೆಡ್ಡಿ,ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಹೆಚ್ ಸಿ ಮುನಿರಾಜು, ಉಪನ್ಯಾಸಕ ಡಿ.ಲಕ್ಷ್ಮಯ್ಯ, ರಮೇಶ್, ಶ್ರೀಧರ್, ಅರ್ಚನ, ಕುಮಾರಿ ಶಮ,ನವೀನ್ ಹಾಗೂ ಭಾಗವಹಿಸಿದ್ದರು.
