
ಉದಯವಾಹಿನಿ ಬಸವನಬಾಗೇವಾಡಿ: ಪಟ್ಟಣದ ಕಸವನ್ನು ಸಂಗ್ರಹ ಮಾಡುತ್ತಿದ್ದ ವಾಹನಗಳು ಕಳೆದ ತಿಂಗಳದಿAದ ಸಂಗ್ರಹಿಸಲು ಬಾರದೇ ಪಟ್ಟಣದ ರಸ್ತೆಯ ಮೇಲೆ , ಸಾರ್ವಜನಿಕ ಪ್ರದೇಶಗಳಲ್ಲಿ ಸೇರಿದಂತೆ ಅಲ್ಲಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿರುವುದು ಕಂಡು ಬರುತ್ತಿದೆ. ಪಟ್ಟಣದ ಬಸ್ ನಿಲ್ದಾಣದ ಆವರಣ ಹಾಗೂ ಶ್ರೀರಾಮ ನಗರದ ಪಕ್ಕಕ್ಕಿರುವ ಸಾರ್ವಜನಿಕ ಶೌಚಾಲಯದ ಮುಂದುಗಡೆ ಜಾಗೆಯಲ್ಲಿ ಈ ರೀತಿಯಾಗಿ ಹಸಿ ಹಾಗೂ ಒಣ ಕಸ ಸಂಗ್ರಹವಾದಾಗ ಹಂದಿ ನಾಯಿಗಳು ರಸ್ತೆ ತುಂಬಾ ಚೆಲ್ಲಾಪಿಲ್ಲಿ ಮಾಡುವುದರ ಮೂಲಕ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗುತ್ತಿದೆ.ಈ ಕುರಿತಾಗಿ ಸ್ಥಳೀಯ ಪುರಸಭೆ ಅಧಿಕಾರಿಗಳು ಪಟ್ಟಣದ ಕಸವನ್ನು ತ್ಯಾಜ್ಯ ಘಟಕಕ್ಕೆ ಕೊಂಡೋಯ್ಯುವ ಕರ‍್ಯಕ್ಕೆ ಕೂಡಲೇ ಮುಂದಾಗಬೇಕೆAಬುದೇ ಪಟ್ಟಣದ ಸಾರ್ವಜನಿಕರ ಆಗ್ರಹವಾಗಿದೆ.
