
ಉದಯವಾಹಿನಿ ಮುದಗಲ್ಲ :ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಂವಿಧಾನದ ಪೀಠಿಕೆಯ ಓದು ಕಾರ್ಯಕ್ರಮ ಸೆ.15ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮುದಗಲ್ಲ ಪುರಸಭೆ ಯ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಅವರ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ..
ಸರ್ಕಾರದೇಶ ದಂತೆ ಇಂದು ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಪುರಸಭೆ ಮುಖ್ಯಾಧಿಕಾರಿ ಹಾಗೂ ಪುರಸಭೆ ಯ ವಿಭಾಗದ ಅಧಿಕಾರಿಗಳು ಸಹಯೋಗ ದೊಂದಿಗೆ ನೆರವೇರಸಿದರು.
ನಂತರದ ಮಾತನಾಡಿದ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಅಸಮಾನತೆ ನಿರ್ನಾಮ ಮಾಡಿ ಸಮಾನತೆ ಜಾರಿ ಮಾಡುವ ಆಶಯ ಇದಾಗಿದೆ. ನ್ಯಾಯ, ಹಕ್ಕು, ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಪತ್ರಿಕಾ ಸ್ವಾತಂತ್ರ್ಯ, ಕೋಮು ಸೌಹಾರ್ದಗಳನ್ನ ಉಳಿಸಿ ಕೊಳ್ಳುವ ಆಶಯ ಆಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿಪುರಸಭೆ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ,ಪುರಸಭೆ ಸಿಬ್ಬಂದಿ ಗಳಾದ ಜಸ್ ಪಾಲ್ ಸಿಂಗ್, ಆರೀಪ್ ಹುನ್ನಿಸಾ ಬೇಗಂ ,ಮಾಲಿಂಗರಾಯ , ಹಾಗೂ ಪೌರ ಕಾರ್ಮಿಕರು ಹಾಗೂ ಅಂಗವಾಗಿ ಶಿಕ್ಷಕರು ಉಪಸ್ಥಿತರಿದ್ದರು.
